ಸಂಗ್ರಹ ಚಿತ್ರ 
ರಾಜ್ಯ

ಮೆಟ್ರೋ ಪಿಲ್ಲರ್ ದುರಸ್ತಿ: ವಾರಾಂತ್ಯ ಸಂಚಾರದಲ್ಲಿ ಯಾವ ವ್ಯತ್ಯಯ ಇಲ್ಲ, ಬಿಎಂಆರ್‌ಸಿಎಲ್ ಸ್ಪಷ್ಟನೆ

ಈ ಸುದ್ದಿ ಓದಿದ ನಂತರ ಬೆಂಗಳೂರು ನಗರದ ಮೆಟ್ರೋ ಪ್ರಯಾಣಿಕರು ಕೊಂಚ ರಿಲ್ಯಾಕ್ಸ್ ಆಗಬಹುದು.

ಬೆಂಗಳೂರು: ಈ ಸುದ್ದಿ ಓದಿದ ನಂತರ ಬೆಂಗಳೂರು ನಗರದ ಮೆಟ್ರೋ ಪ್ರಯಾಣಿಕರು ಕೊಂಚ ರಿಲ್ಯಾಕ್ಸ್ ಆಗಬಹುದು. ಮೆಟ್ರೋ  ಪಿಲ್ಲರ್ ದುರಸ್ತಿ ಕಾಮಗಾರಿಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದ್ದು ನಾಳೆ (ಶನಿವಾರ) ಹಾಗೂ ಭಾನುವಾರಗಳಂದು ನಗರದಲ್ಲಿ ಮೆಟ್ರೋ ರೈಲು ಎಂದಿನಂತೆ ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಎಂಜಿ ರಸ್ತೆ ಟ್ರಿನಿಟಿ ವೃತ್ತದ ಸಮೀಪ  ಮೆಟ್ರೋ ಸೇತುವೆಯ ವಯಾಡಕ್ಟ್ ನಲ್ಲಿ ಬಿರುಕು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಶನಿವಾರ ಹಾಗೂ ಭಾನುವಾರ ದುರಸ್ತಿ ಕಾರ್ಯ ಕೈಗೊಳ್ಳಲು ಬಿಎಂಆರ್‌ಸಿಎಲ್  ನಿರ್ಧರಿಸಿತ್ತು. ಇದೇ ಕಾರಣಕ್ಕೆ ನಾಳೆಯಿಂದ ಎರಡು ದಿನ ಮೆಟ್ರೋ ರೈಲು ಸಂಚಾರ ಇರಲ್ಲ ಎನ್ನಲಾಗಿತ್ತು. ಆದರೆ ಈಗನಿಗದಿತ ದುರಸ್ತಿ ಕಾರ್ಯವನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ. ಹೀಗಾಗಿ ಈ ವಾರಾಂತ್ಯ ಮೆಟ್ರೋ ಸಂಚಾರದಲ್ಲಿ ಯಾವ ಬದಲಾವಣೆ ಇರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
 ಟ್ರಿನಿಟಿ ನಿಲ್ದಾಣದ ಬಳಿ ಕಾಣಿಸಿಕೊಂಡಿರುವ ಬಿರುಕು ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಈ ಮಾರ್ಗದಲ್ಲಿ ಚಲಿಸುವ ಮೆಟ್ರೋ ರೈಲುಗಳ ವೇಗವನ್ನು ಕಡಿತಗೊಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ