ಸಂಗ್ರಹ ಚಿತ್ರ 
ರಾಜ್ಯ

ಚಿತ್ರದುರ್ಗ: ವಿಷಾಹಾರ ಸೇವನೆ ಶಂಕೆ, ಒಂದೇ ಕುಟುಂಬದ ನಾಲ್ವರ ಸಾವು

ವಿಷಾಹಾರ ಸೇವಿಸಿ ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿರುವ ಧಾರುಣ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಚಿತ್ರದುರ್ಗ: ವಿಷಾಹಾರ ಸೇವಿಸಿ ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿರುವ ಧಾರುಣ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹುಲಿತೋಟ್ಲು ಗ್ರಾಮದಲ್ಲಿ ವಿಷ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಹುಲಿತೋಟ್ಲು ಗ್ರಾಮದಲ್ಲಿ ನಿವಾಸಿಗಳಾದ ತಂದೆ ಚಿತ್ತಪ್ಪ(80 ವರ್ಷ), ಪುತ್ರ ಶಶಿಧರ್​​​(40 ವರ್ಷ) ಪುತ್ರಿ ಭಾಗ್ಯಮ್ಮ (35 ವರ್ಷ) ಹಾಗೂ ಹೇಮಲತಾ (30 ವರ್ಷ) ಮೃತ ದುರ್ದೈವಿಗಳು. ನಿನ್ನೆ ರಾತ್ರಿ ಮನೆಯಲ್ಲಿ ಆಹಾರ ಸೇವಿಸಿದ ಬಳಿಕ ಮೂವರು ಅಸ್ವಸ್ಥರಾಗಿದ್ದಾರೆ. ಬಳಿಕ ಅಸ್ವಸ್ಥರನ್ನ ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇವೆರಲ್ಲರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಐಮಂಗಲ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂದೇ ಧರ್ಮೇಂದ್ರ ಪ್ರಧಾನ್ ರಾಜೀನಾಮೆ? ಮಧ್ಯಾಹ್ನ 12.30 ಕ್ಕೆ CJP, ಕೇಂದ್ರ ಸರ್ಕಾರದ ನಡುವೆ ಮಹತ್ವದ ಮಾತುಕತೆ

ಕೇಂದ್ರದ ಭರವಸೆಗೆ ಮಣಿದ Sonam Wangchuk: 26 ದಿನಗಳ ಉಪವಾಸ ಅಂತ್ಯ, Dharmendra Pradhan ರಾಜೀನಾಮೆ ನೀಡದ ಹೊರತು ಪ್ರತಿಭಟನೆ ನಿಲ್ಲಲ್ಲ ಎಂದ CJP..!

ಸತತ 13ನೇ ದಿನವೂ ಇರಾನ್ ಮೇಲೆ ಅಮೆರಿಕ ಕ್ಷಿಪಣಿಗಳ ಸುರಿಮಳೆ: ಸೇನಾ ನೆಲೆಗಳೇ ಪ್ರಮುಖ ಗುರಿ, 'ಇನ್ನೂ ದೊಡ್ಡ ಹೊಡೆತ ನೀಡುತ್ತೇವೆ'- ಟ್ರಂಪ್ ಎಚ್ಚರಿಕೆ

Iranಗೆ Trump ಬಿಗ್ ಶಾಕ್: ಮುಟ್ಟುಗೋಲು ಆಸ್ತಿಯಿಂದಲೇ ಹಡಗುಗಳ ನಷ್ಟ ಭರಿಸಲು ಆದೇಶ..!

NEET Paper Leak: ವಿದ್ಯಾರ್ಥಿಗಳ ಪ್ರತಿಭಟನೆ ನಡುವೆಯೇ ಕೇಂದ್ರ ಸರ್ಕಾರದಿಂದ ಮೊದಲ ಕ್ರಮ, ಶಿಕ್ಷಣ ಇಲಾಖೆ ಕಾರ್ಯದರ್ಶಿ ಎತ್ತಂಗಡಿ