ರಾಜ್ಯ

ಶ್ರೀರಾಮ, ಮಹಾತ್ಮ ಗಾಂಧಿಗೆ ಅವಹೇಳನ: ಪ್ರೊ. ಭಗವಾನ್ ವಿರುದ್ಧ ದೂರು ದಾಖಲು

Raghavendra Adiga
ಮಡಿಕೇರಿ: ಸಾಹಿತಿ, ವಿಮರ್ಶಕ ಪ್ರೊ. ಕೆ.ಎಸ್‌. ಭಗವಾನ್ "ರಾಮಮಂದಿರ ಏಕೆ ಬೇಡ" ಎಂಬ ಪುಸ್ತಕ ಇಂದು ಬಿಡುಗಡೆಯಾಗಿದ್ದು ಪುಸ್ತಕದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಅಂಶಗಳಿದೆ ಎಂದು ಆರೋಪಿಸಿ ವಕೀಲ ಕೃಷ್ಣಮೂರ್ತಿ ಎನ್ನುವವರು ಮಡಿಕೇರಿ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಭಗವಾನ್ ವಿವಾದಾತ್ಮಕ ಪುಸ್ತಕ ಬರೆದಿದ್ದಾರೆ "ರಾಮ ಮಂದಿರ ಏಕೆ ಬೇಡ" ಎಂಬ ಪುಸ್ತಕದಲ್ಲಿ ರಾಮ, ಕೃಷ್ಣ, ಚಾಮುಂಡಿ ಸೇರಿ ಹಲವು ದೇವರನ್ನು ಅಪಮಾನಿಸಿ ಹಿಂದೂಗಳ ಭಾವನೆಗಳಿಗೆ ಘಾಸಿ ಮಾಡಿದ್ದಾರೆ ಎಂದು ಆರೋಪಿಸಿರುವ ಕೃಷ್ಣಮೂರ್ತಿ ಭಗವಾನ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ರಾಮ, ಸೀತೆಯರನ್ನು ಮಾತ್ರವಲ್ಲದೆ ಮಹಾತ್ಮಾ ಗಾಂಧಿ ಬಗ್ಗೆಯೂ ಪುಸ್ತಕದಲ್ಲಿ ಕೀಳಾಗಿ ಬರೆಯಲಾಗಿದೆ.ದೇವರೆಂದು ಪೂಜಿಸುವ ಸೀತೆ, ರಾಮರು ಮದ್ಯಪಾನ ಮಾಡುತ್ತಿದ್ದರು.ರಾಮ ಏಕ ಪತ್ನಿ ವ್ರತಸ್ಥ  ಎಂಬುದು ಸುಳ್ಳು, ರಾಮ ವನಿತೆಯರ ಜೊತೆ ಕುಡಿದು ನೃತ್ಯ ಮಾಡಿ ಅವರನ್ನು ಸಂತೋಷ ಪಡಿಸುತ್ತಿದ್ದ ಎಂದೆಲ್ಲಾ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಮಹಾತ್ಮಾ ಗಾಂಧಿ ಬಗ್ಗೆ ಸಹ ಅವಹೇಳಕಾರಿಯಾಗಿ ಬರೆಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
SCROLL FOR NEXT