ಎಸ್ ಕೆ ಭಗವಾನ್-ಜಗ್ಗೇಶ್ 
ರಾಜ್ಯ

ಶ್ರೀರಾಮನ ಬಗ್ಗೆ ಅವಹೇಳನ: ಮಾತಲ್ಲೇ ಭಗವಾನ್‌ಗೆ ಚಾಟಿ ಬೀಸಿದ ನವರಸ ನಾಯಕ ಜಗ್ಗೇಶ್!

ಪ್ರೊ. ಕೆಎಸ್ ಭಗವಾನ್ ತಮ್ಮ ಪುಸ್ತಕದಲ್ಲಿ ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ದಾಖಲಿಸಿದ್ದು ಇದಕ್ಕೆ ನವರಸ ನಾಯಕ ಜಗ್ಗೇಶ್...

ಪ್ರೊ. ಕೆಎಸ್ ಭಗವಾನ್ ತಮ್ಮ ಪುಸ್ತಕದಲ್ಲಿ ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ದಾಖಲಿಸಿದ್ದು ಇದಕ್ಕೆ ನವರಸ ನಾಯಕ ಜಗ್ಗೇಶ್ ಮಾತಿನ ಮೂಲಕ ಚಾಟಿ ಬೀಸಿದ್ದಾರೆ. 
ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುತ್ತಿರುವ ಭಗವಾನ್ ಅವರಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬುದ್ಧಿ ಹೇಳಬೇಕೆಂದು ವಿನಂತಿಸಿಕೊಂಡಿದ್ದಾರೆ.
ಜಗ್ಗೇಶ್ ಸೆಲ್ಫಿ ವಿಡಿಯೋ ಮಾಡಿ ಭಗವಾನ್ ವಿಕೃತ ಮನಸ್ಸಿನಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ನಿಮ್ಮ ಹೇಳಿಕೆಯಿಂದ ನನಗೂ ಕೂಡ ನೋವಾಗಿದೆ. ನಿಮ್ಮ ಈ ನೀಚ ಹೇಳಿಕೆಗಳನ್ನು ನಿಲ್ಲಿಸಿ ಎಂದಿರುವ ಜಗ್ಗೇಶ್, ನಿಮ್ಮ ಅಪ್ಪ ಅಮ್ಮ ಯಾರು? ಅವರು ಹೇಳಿದಾಗ ಅಲ್ಲವೇ ನೀವು ಅವರ ಮಗ ಅಂತಾ ಗೊತ್ತಾಗಿದ್ದು? ಅದೇ ರೀತಿ ಶ್ರೀರಾಮಚಂದ್ರನ ಬಗ್ಗೆ ಸಾವಿರಾರು ವರ್ಷಗಳಿಂದ. ತಲಮಾರುಗಳಿಂದ ಜನರ ಬಾಯಿಂದ ಬಾಯಿಗೆ ಹರಡಿ ಶ್ರೀರಾಮನ ಬಗ್ಗೆ ಇಂದು ಗ್ರಂಥರೂಪಗಳಲ್ಲಿ ಉಲ್ಲೇಖವಾಗಿದೆ. ಅಂತಹ ಮಹಾನ್ ಪುರುಷನ ಬಗ್ಗೆ ನೀವು ಎಲ್ಲೆಇಲ್ಲದೇ ಮಾತನಾಡುತ್ತಿರುವುದು ತಪ್ಪು ಎಂದಿದ್ದಾರೆ.
ಇನ್ನು ದೇವನಿದ್ದ ಜಾಗದಲ್ಲಿ ದೈತ್ಯನಿರಬೇಕು ಎನ್ನುವ ಮಾತು ಅನಾದಿ ಕಾಲದಿಂದಲೂ ಕೇಳಿ ಬಂದಿದೆ. ನಿಮ್ಮಂಥ ದೈತ್ಯರು ಇದ್ದಾಗಲೇ ದೇವರ ಮರ್ಯಾದೆ ಹಾಗೂ ದೇವರ ಬಗ್ಗೆ ಭಕ್ತಿ ಜಾಸ್ತಿಯಾಗುತ್ತೆ. ನಿಮ್ಮಂಥ ಎಷ್ಟು ಜನರ ಹುಟ್ಟಿತ್ತಿರೋ ಅಷ್ಟು ದೈವ ಭಕ್ತಿ ಜಾಸ್ತಿಯಾಗುತ್ತೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ