ಬೆಳ್ಳಂದೂರು ಕೆರೆಯಲ್ಲಿ ನಿನ್ನೆ ಕಾಣಿಸಿಕೊಂಡ ಹಳದಿ ಮಿಶ್ರಿತ ಬೆಂಕಿ 
ರಾಜ್ಯ

ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಎರಡು ಬಾರಿ ಕಾಣಿಸಿಕೊಂಡ ಬೆಂಕಿ

ಬೆಳ್ಳಂದೂರು ಕೆರೆಯಲ್ಲಿ ನಿನ್ನೆ ಸಾಯಂಕಾಲ ಎರಡು ಕಡೆ ಬೆಂಕಿ ....

ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ನಿನ್ನೆ ಸಾಯಂಕಾಲ ಎರಡು ಕಡೆ ಬೆಂಕಿ ಕಾಣಿಸಿಕೊಂಡಿದೆ. ಸೇನೆ ಮತ್ತು ಅಗ್ನಿ ಶಾಮಕ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದ ನಂತರ ಕಳೆದ ಸಾಯಂಕಾಲ ಬೆಂಕಿ ಕಾಣಿಸಿಕೊಂಡಿತು. ರಾಷ್ಟ್ರೀಯ ಹಸಿರು ಪ್ರಾಧಿಕಾರ ಈ ಹಿಂದೆ ಬೆಂಕಿ ಕಾಣಿಸಿಕೊಂಡಾಗ ಉಂಟಾದ ದುರ್ಘಟನೆಯನ್ನು ಪರಾಮರ್ಶಿಸಿ ಕೆರೆಯ ಸುತ್ತಮುತ್ತ ಇರುವ 99 ಅಪಾರ್ಟ್ ಮೆಂಟ್ ಗಳಲ್ಲಿ ಚರಂಡಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವಂತೆ ಆದೇಶ ನೀಡಿದ ಮೂರು ದಿನಗಳ ನಂತರ ಈ ದುರ್ಘಟನೆ ಸಂಭವಿಸಿದೆ.
ಕೆರೆಯ ಬಳಿ ಇರುವ ಅಪಾರ್ಟ್ ಮೆಂಟ್ ನಿವಾಸಿ ಸೊನಾಲಿ ಸಿಂಗ್, ಹಳದಿ ಬಿಳಿ ಬಣ್ಣದ ಹೊಗೆ ನಿನ್ನೆ ಸಾಯಂಕಾಲ 3.30ರ ಸುಮಾರಿಗೆ ಕಾಣಿಸಿಕೊಂಡಿತು. ಈ ಹಿಂದೆ ಬೆಂಕಿ ಕಾಣಿಸಿಕೊಂಡ ಸ್ಥಳದಲ್ಲಿಯೇ ನಿನ್ನೆ ಕೂಡ ಬೆಂಕಿ ಕಾಣಿಸಿಕೊಂಡಿತು. ಸುಮಾರು ಅರ್ಧ ಗಂಟೆ ಕಾಲ ಬೆಂಕಿ ಹತ್ತಿ ಉರಿಯಿತು. ನಂತರ ಸಾಯಂಕಾಲ 5.30ರ ಹೊತ್ತಿಗೆ ಬೆಂಕಿ ಮತ್ತೆ ಕಾಣಿಸಿಕೊಂಡಿತು. ಬೆಂಕಿಯ ಧಗೆ ಚೆನ್ನಾಗಿ ಕಂಡಿದೆ ಎಂದು ವಿವರಿಸುತ್ತಾರೆ.
ಮೂವರು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಂಜೆ 7 ಗಂಟೆ ಹೊತ್ತಿಗೆ ಬೆಂಕಿಯನ್ನು ಆರಿಸಿತು ಎಂದು ಸೊನಾಲಿ ಸಿಂಗ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ': AAP ಆರೋಪಗಳನ್ನು ತಳ್ಳಿಹಾಕಿದ ರಾಘವ್ ಚಡ್ಡಾ

Iran war ನಡುವೆಯೂ ಭಾರತ ದೇಶೀಯ ಮತ್ತು ಬಾಹ್ಯ ಸವಾಲುಗಳ ಯಶಸ್ವಿಯಾಗಿ ನಿರ್ವಹಿಸಿದೆ: EAM Jaishankar

ಇರಾನ್, ಅಮೆರಿಕದ ಎರಡು ಬಲಿಷ್ಠ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದ್ದು ಹೇಗೆ?, ಇಲ್ಲಿದೆ ಸ್ಫೋಟಕ ವಿಚಾರ!

ನಿತೀಶ್ ಕುಮಾರ್ ಪುತ್ರ ನಿಶಾಂತ್ ಮುಂದಿನ CM; ಪಾಟ್ನಾ ಜೆಡಿಯು ಕಚೇರಿ ಮುಂದೆ ಪೋಸ್ಟರ್‌!

ಮೈತ್ರಿಯಲ್ಲಿ ಬಿರುಕು, ಸಾಲ ವಾಪಸ್ ಕೇಳಿದ UAE; ತಿಂಗಳಾಂತ್ಯಕ್ಕೆ 3.5 ಬಿಲಿಯನ್ ಡಾಲರ್ ಪಾವತಿಸಬೇಕಿದೆ ಪಾಕ್!

SCROLL FOR NEXT