ಸಿಕ್ಕ ಅವಕಾಶವನ್ನ ಶ್ರದ್ದೆಯಿಂದ ಬಳಸಿಕೊಂಡರೆ ಏನಾಗಬಹದು ಎನ್ನುವುದಕ್ಕೆ ಎಂಡಿಪಿ ಕಾಫಿ ಹೌಸ್ ಒಂದು ಉತ್ತಮ ಉದಾಹರಣೆ. ನಿರಂತರವಾಗಿ ಉತ್ತಮ ಗುಣಮಟ್ಟ ಕಾಯ್ದುಕೊಂಡಿರುವುದು, ನಗುಮುಖದಿಂದ ಗ್ರಾಹಕರಿಗೆ ಸೇವೆ ನೀಡುವುದರ ಜೊತೆಗೆ ರುಚಿ ಮತ್ತು ಶುಚಿತ್ವ ಎಂಡಿಪಿಯ ಟ್ರೇಡ್ ಮಾರ್ಕ್!
ಎಂಡಿಪಿಯ ಈ ಯಶೋಗಾಥೆಯನ್ನು ಹುಡುಕಿ ಹೊರಟರೆ 2004 ರ ಸಮಯದ ಪುಟಗಳು ತೆರೆದುಕೊಳ್ಳುತ್ತವೆ, 2004 ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಒಂದು ಕಾಫಿ ಶಾಪ್ ತೆಗೆಯಲು ಪ್ರಸಿದ್ಧ ಐಟಿ ಕಂಪನಿಯಿಂದ ಅವಕಾಶ ಸಿಗುತ್ತದೆ. ಅಂದು ಪ್ರಾರಂಭವಾದ ಕಾಫಿ ಶಾಪ್ ಒಂದು ಹತ್ತಾಗಿ.., ಹತ್ತು ನೂರಾಗಿದೆ. ಇಂದು ಭಾರತದ ಉದ್ದಗಲಕ್ಕೂ ಕಾರ್ಪೊರೇಟ್ ವಲಯದಲ್ಲಿ ಇಂದು ಎಂಡಿಪಿ ಶಾಖೆಗಳಿವೆ. ಇನ್ಫೋಸಿಸ್ ಮತ್ತು ಟಿಸಿಎಸ್ ನಂತಹ ದೈತ್ಯ ಐಟಿ ಕಂಪನಿಗಳು ಎಂಡಿಪಿಯನ್ನ ಬೆಸ್ಟ್ ವೆಂಡರ್ ಪಾರ್ಟ್ನರ್ ಎಂದು ಗುರುತಿಸಿ ಸನ್ಮಾನಿಸಿವೆ. ಹೀಗೆ ಕೋಪರ್ಪೊರೇಟ್ ವಲಯದಲ್ಲಿ ಮತ್ತು ಅಲ್ಲಿನ ಐಟಿ ಪ್ರೊಫೆಷನಲ್ಗಳ ಮನಸ್ಸಿನಲ್ಲಿ ಎಂಡಿಪಿ ಜಾಗ ಪಡೆದಿದೆ. ನಿರಂತರವಾಗಿ ಉತ್ತಮ ಗುಣಮಟ್ಟ ಕಾಯ್ದುಕೊಂಡಿರುವುದು, ನಗುಮುಖದಿಂದ ಗ್ರಾಹಕರಿಗೆ ಸೇವೆ ನೀಡುವುದರ ಜೊತೆಗೆ ರುಚಿ ಮತ್ತು ಶುಚಿತ್ವ ಎಂಡಿಪಿಯ ಟ್ರೇಡ್ ಮಾರ್ಕ್!
ಹೀಗೆ ಕಾರ್ಪೊರೇಟ್ ವಲಯದಲ್ಲಿ ಜೈತಯಾತ್ರೆ ಮುಂದುವರಿಸಿಕೊಂಡು ಬರುತ್ತಿದ್ದರೂ ಸಾರ್ವಜನಿಕರಿಗಾಗಿ ಎಂಡಿಪಿ ಶಾಖೆಗಳು ಇರಲಿಲ್ಲ. ಸಾರ್ವಜನಿಕರಿಗೆ ಎಂಡಿಪಿ ಶುಚಿ ರುಚಿಯ ಸೇವೆ ನೀಡಬೇಕೇನುವ ಮಹದಾಸೆಯಿಂದ ಮೂರು ವರ್ಷಗಳ ಕೆಳಗೆ ಜಯನಗರದ ಶಾಲಿನಿ ಗ್ರೌಂಡ್ ಮುಂಬಾಗ ಎಂಡಿಪಿ ಕಾಫಿ ಹೌಸ್ ತಲೆಯೆತ್ತಿತು . ಜಯನಗರದ ಜನತೆಯ ಪ್ರೀತಿ ವಿಶ್ವಾಸದಿಂದ ಅದು ಇಂದು ಯಶಸ್ವಿ ಔಟ್ಲೆಟ್ !!. ಅಲ್ಲಿ ಸಿಕ್ಕ ಜಯ ವೈಟ್ ಫೀಲ್ಡ್ ನಲ್ಲಿರುವ ಐಟಿಪಿಎಲ್ ಹಿಂಬಾಗದ ಗೇಟ್ ಬಳಿ ಇನ್ನೊಂದು ಔಟ್ಲೆಟ್ ತೆಗೆಯಲು ಪ್ರೇರಣೆ ನೀಡುತ್ತದೆ. ಕಳೆದ ಎರಡು ವರ್ಷದಿಂದ ಅದೂ ಕೂಡ ಜಯಭೇರಿ ಬಾರಿಸುತ್ತಿದೆ . ರಾಗಿಗುಡ್ಡದ ಬಳಿ ಶೀಘ್ರದಲ್ಲಿ ಇನ್ನೊಂದು ಮಳಿಗೆ ಬರಲಿದೆ ., ಜೊತೆಗೆ ನಗರಭಾವಿಯ ಅನ್ನಪೂರ್ಣೇಶ್ವರಿ ಲೇಔಟ್ ನಲ್ಲಿ ಕೂಡ ಎಂಡಿಪಿ ಔಟ್ಲೆಟ್ ಬರಲಿದೆ . ಮೈಸೂರಿನ ಮಾಲ್ ಆಫ್ ಮೈಸೂರು ನಲ್ಲಿ ಕಳೆದ ಎರಡು ವರ್ಷದಿಂದ ಮಳಿಗೆ ನೆಡೆಸಿಕೊಂಡು ಬರುತ್ತಿದ್ದಾರೆ.
ಇದೆ ಸೋಮವಾರ ಅಂದರೆ ಫೆಬ್ರುವರಿ ಐದರಂದು ಸಂಜೆ ಐದರಿಂದ ಆರುಗಂಟೆಯ ನಡುವೆ ' ಕಮರ್ಷಿಯಲ್ ಸ್ಟ್ರೀಟ್ ನಿಂದ ಕೇವಲ ನೂರೈವತ್ತು ಅಡಿ ದೂರದಲ್ಲಿರುವ 'ವೀರ ಪಿಲ್ಲೈ ' ಸ್ಟ್ರೀಟ್ ನಲ್ಲಿ ' ಎಂಡಿಪಿ ಕಾಫಿ ಹೌಸ್ ' ಜನರ ಸೇವೆಗೆ ತೆರೆದುಕೊಳ್ಳಲಿ. ಈ ಪ್ರದೇಶದ ಸುತ್ತ ಮುತ್ತ ಶುಚಿ -ರುಚಿ ಜೊತೆಗೆ ಜೇಬಿಗೂ ಭಾರವಾಗದ ಗ್ರಾಹಕ ಸೇವೆ ನೀಡುವ ಉತ್ತಮ ಗುಣಮಟ್ಟದ ಹೋಟೆಲ್ ಕೊರತೆಯನ್ನು ಎಂಡಿಪಿ ಕಾಫಿ ಹೌಸ್ ನಿವಾರಿಸಲಿದೆ. ಬನ್ನಿ ಎಂಡಿಪಿ ಜನರ ಸೇವೆಗೆ ತೆರೆದುಕೊಳ್ಳುವ ಈ ಸಮಯದಲ್ಲಿ ನೀವು ನಮ್ಮ ಜೊತೆಗಿರಿ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos