ಸಾಂದರ್ಭಿಕ ಚಿತ್ರ 
ರಾಜ್ಯ

ಪ್ರತಿ ಗಂಟೆಗೆ ಬ್ಯಾಂಕ್ ವಂಚನೆಯಿಂದ 2 ಲಕ್ಷ ನಷ್ಟ: ಕರ್ನಾಟಕ ಮೂರನೇ ಸ್ಥಾನದಲ್ಲಿ

ಹಣಕಾಸು ವಹಿವಾಟುಗಳಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ನಿಖರತೆ ತರಲು ಡಿಜಿಟಲ್ ವಹಿವಾಟುಗಳಿಗೆ ...

ಬೆಂಗಳೂರು: ಹಣಕಾಸು ವಹಿವಾಟುಗಳಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ನಿಖರತೆ ತರಲು ಡಿಜಿಟಲ್ ವಹಿವಾಟುಗಳಿಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿರುವ ಮಧ್ಯೆ ಸೈಬರ್ ಅಪರಾಧ ಮತ್ತು ವಂಚನೆ ಪ್ರಕರಣಗಳು ದೇಶಾದ್ಯಂತ ನಡೆಯುತ್ತಲೇ ಇದೆ. ಅಂಕಿಅಂಶ ಪ್ರಕಾರ, ವಂಚನೆಗಾರರಿಂದ ಪ್ರತಿ ಗಂಟೆಗೆ 2 ಲಕ್ಷ ರೂಪಾಯಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳು ಮತ್ತು ಇಂಟರ್ನೆಟ್ ಬ್ಯಾಂಕುಗಳ ಮೂಲಕ ಜನರು ಕಳೆದುಕೊಳ್ಳುತ್ತಿದ್ದಾರೆ.
ಕ್ರೆಡಿಟ್ ಕಾರ್ಡು/ಡೆಬಿಟ್ ಕಾರ್ಡು ಮತ್ತು ಇಂಟರ್ನೆಟ್ ಬ್ಯಾಂಕು ವಂಚನೆಗಳನ್ನು ನಿಯಂತ್ರಿಸಲು ಪ್ರಯತ್ನಗಳನ್ನು ಮಾಡುತ್ತಿದ್ದರೂ ಕೂಡ ಕಳೆದ ವರ್ಷ ದೇಶದಲ್ಲಿ 178 ಕೋಟಿ ರೂಪಾಯಿ ಕಳವು ಮಾಡಲಾಗಿದೆ.
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇದುವರೆಗೆ ವಂಚನೆಯಾದ ಅತಿ ಹೆಚ್ಚಿನ ಮೌಲ್ಯವಾಗಿದೆ. ಇತ್ತೀಚೆಗೆ ವಂಚನೆಗಳಿಂದ ಪ್ರತಿದಿನ ಸುಮಾರು 48 ಲಕ್ಷ ಕಳೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದ ಅಂಕಿಅಂಶ ಹೇಳುತ್ತದೆ. ಬ್ಯಾಂಕುಗಳು ಕಳೆದ ವರ್ಷ ಡಿಸೆಂಬರ್ 21ರವರೆಗೆ ಸಲ್ಲಿಸಿದ ಹಣ ವಂಚನೆ ಅಕ್ರಮದ ಬಗ್ಗೆ ಸಲ್ಲಿಸಿದ ವರದಿ ತಿಳಿಸುತ್ತದೆ.
ಇನ್ನು ಕ್ರೆಡಿಟ್/ಡೆಬಿಟ್ ಕಾರ್ಡುಗಳು ಮತ್ತು ಇಂಟರ್ನೆಟ್ ಬ್ಯಾಂಕು ವಂಚನೆ 2016-17ರ ಆರ್ ಬಿಐ ವರದಿ ಪ್ರಕಾರ, ಕರ್ನಾಟಕ ದೇಶದಲ್ಲಿ ಮೂರನೇ ಸ್ಥಾನ ಹೊಂದಿದೆ. ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಕರ್ನಾಟಕದಲ್ಲಿ 221 ಕೇಸುಗಳು ದಾಖಲಾಗಿದ್ದು 9.16 ಕೋಟಿ ರೂಪಾಯಿ  ವಂಚನೆಯಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ ವರ್ಷ 12.10 ಕೋಟಿ ರೂಪಾಯಿ ವಂಚನೆಯಾಗಿದೆ. ದಾಖಲೆಗಳ ಪ್ರಕಾರ, ಕರ್ನಾಟಕದಲ್ಲಿ ಸೈಬರ್ ಅಪರಾಧ ಕಳೆದ ಮೂರು ವರ್ಷಗಳಲ್ಲಿ ಜಾಸ್ತಿಯಾಗಿದೆ. 2014-15ರಲ್ಲಿ ಒಟ್ಟು 91 ಕೇಸುಗಳು ದಾಖಲಾಗಿವೆ. ಒಟ್ಟು 4.3 ಕೋಟಿ ವಂಚನೆ ನಡೆದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT