ಪ್ರಧಾನಮಂತ್ರಿ ನರೇಂದ್ರ ಮೋದಿ
ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲು ನಗರಕ್ಕೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ತಮ್ಮ ಭಾಷಣದ ಮೊದಲು ಹಾಗೂ ಕೊನೆಯಲ್ಲಿ ಕನ್ನಡಲ್ಲಿಯೇ ಮಾತನಾಡುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.
ಕರ್ನಾಟಕದ ನನ್ನ ಬಂಧು-ಭಗಿನಿಯರೇ, ನಿಮಗೆಲ್ಲಾ ನನ್ನ ನಮಸ್ಕಾರಗಳು... ಎನ್ನುವ ಮೂಲಕ ಸಮಾವೇಶದಲ್ಲಿ ನೆರೆದಿದ್ದ ಜನಸಾಗರದಲ್ಲಿ ಕರತಾಡನ ಸೃಷ್ಟಿಸಿದ್ದರು. ಅಲ್ಲದೆ, ಮುಂದುವರಿದು, ನಾಡಪ್ರಭು ಕೆಂಪೇಗಗೌಡ, ಬಸವೇಶ್ವರ ವೀರರಾಣಿ ಕಿತ್ತೂರು ಚೆನ್ನಮ್ಮ, ಮಾದಾರ ಚೆನ್ನಯ್ಯ, ಸಂಗೊಳ್ಳಿ ರಾಯಣ್ಣ, ಶಿಶುನಾಳ ಶರೀಫ್, ವಿಶ್ವೇಶ್ವರಯ್ಯ ಅವರಂತಹ ಮಹಾತ್ಮರು ಹುಟ್ಟಿದ ನಾಡಿದು ಎಂದು ಸ್ಮರಿಸಿ ಬಣ್ಣಿಸಿದರು.
ತಮ್ಮ ಭಾಷಣ ಮುಕ್ತಾಯಗೊಳಿಸುವ ವೇಳೆಯಲ್ಲಿಯೂ ಕರ್ನಾಟಕದಲ್ಲಿ ಕಾಂಗ್ರೆಸ್ ಹರಡಿಸಿದ ಕೆಸರಿನಲ್ಲಿ ನೂರಾರು ಕಮಲಗಳನ್ನು ಅರಳಿಸಿ, ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಕನ್ನಡಲ್ಲಿಯೇ ಹೇಳಿದರು. ತಮ್ಮ ಭಾಷಣ ಮತ್ತು ಕನ್ನಡ ಮಾತನಾಡಲು ಮೋದಿಯವರು ಟೆಲಿಪ್ರಾಂಪ್ಟರ್ ಬಳಸಿದರು.
ದ್ರಾವಿಡ್ ಕುರಿತು ಮೋದಿ ಮೆಚ್ಚುಗೆ
6 ವರ್ಷಗಳ ನಂತರ 19 ವರ್ಷದೊಳಗಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತವು ಗೆಲವು ಸಾಧಿಸಿ ಸಂಭ್ರಮಿಸಲು ಕಾರಣ ಕನ್ನಡಿಗ ಹಾಗೂ ತಂಡಗ ಕೋಟ್ ಆಗಿರುವ ರಾಹುಲ್ ದ್ರಾವಿಡ್ ಕಾರಣ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುಣಗಾನ ಮಾಡಿದರು.
19 ವರ್ಷದೊಳಗಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಜಯಗಳಿಸಿದೆ. ಈ ಹಿನ್ನಲೆಯಲ್ಲಿ ದ್ರಾವಿಡ್ ಅವರನ್ನು ಪ್ರಶಂಸಿಸಿರುವ ಮೋದಿಯವರು, ಗೆಲವಿನ ಹಿಂದೆ ತಂಡದ ಕೋಚ್ ಆದ ರಾಹುಲ್ ದ್ರಾವಿಡ್ ಅವರ ಶ್ರಮ ತುಂಬಾ ಇದೆ. ಅವರು ಹೇಗೆ ಪ್ರಾಣಿಕವಾಗಿ ಕೆಲಸ ಮಾಡಬೇಕು ಮತ್ತು ಹೇಗೆ ಬದುಕಬೇಕೆಂದುನ್ನು ಕಲಿಸಿದ್ದಾರೆ. ಅವರನ್ನು ನೋಡಿ ಕಲಿಯಬೇಕು ಎಂದು ಸಂತಸ ವ್ಯಕ್ತಪಡಿಸಿದರು.
ನಿಸ್ವಾರ್ಥ ಸೇವೆ ಕರ್ನಾಟಕದ ಸಂಸ್ಕೃತಿ. ಇದಕ್ಕೆ ರಾಹುಲ್ ದ್ರಾವಿಡ್ ಅವರೇ ಸಾಕ್ಷಿ. ಅಂತಹ ಮಹಾನ್ ವ್ಯಕ್ತಿಯನ್ನು ಈ ನೆಲ ನೀಡಿದೆ ಎಂದು ಕೊಂಡಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics