ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯ ಚಿತ್ರ 
ರಾಜ್ಯ

ಮೈಸೂರು ದಸರಾ :ಆರು ತಿಂಗಳು ಆದರೂ ಬಿಲ್ ಪಾವತಿಸದ ಸರ್ಕಾರ!

ಮೈಸೂರು ದಸರಾ ಮಹೋತ್ಸದ ಯಶಸ್ಸಿಗೆ ಕಾರಣರಾಗಿದ್ದ ಕಲಾವಿದರು, ಸಂಘಟಕರು, ಹಾಗೂ ಗುತ್ತಿಗೆದಾರರ ಬಿಲ್ ಮರು ಪಾವತಿಯಾಗಿಲ್ಲ.

ಮೈಸೂರು: ಮೈಸೂರು ದಸರಾ ಮಹೋತ್ಸದ ಯಶಸ್ಸಿಗೆ ಕಾರಣರಾಗಿದ್ದ ಕಲಾವಿದರು, ಸಂಘಟಕರು, ಹಾಗೂ ಗುತ್ತಿಗೆದಾರರ ಬಿಲ್ ಮರು ಪಾವತಿಯಾಗಿಲ್ಲ. ದಸರಾ ಮುಗಿದು ಆರು ತಿಂಗಳು ಕಳೆಯುತ್ತಾ ಬರುತ್ತಿದ್ದರೂ ಸರ್ಕಾರ ಬಿಲ್ ಪಾವತಿಸದೆ ಸಾಕಷ್ಟು ತೊಂದರೆ ಎದುರಿಸುವಂತಾಗಿದೆ.

ಯುವದರ್ಶನ, ಕನ್ನಡ ಸಮ್ಮೇಳನ  ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನ ಸಮಾವೇಶಕ್ಕಾಗಿ ಅತ್ಯುತ್ತಮ ವೇದಿಕೆ ನಿರ್ಮಾಣ ಮಾಡಿದ್ದವರಿಗೂ ಜಿಲ್ಲಾಡಳಿತ ಬಿಲ್ ಪಾವತಿಸಿಲ್ಲ.

ಸಾಮಾಜಿಕ ನ್ಯಾಯ ಸ್ತಬ್ದ ಚಿತ್ರಕ್ಕಾಗಿ   ಬಹುಮಾನ ಪಡೆದಿದ್ದ ಕಲಾವಿದ ಗೋಪಾಲ್,   ಆರು ಲಕ್ಷ ರೂ. ಬಾಕಿ ಬಿಲ್ ಪಾವತಿಗಾಗಿ  ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೈಗೊಂಡಿದ್ದಾರೆ.

ಸ್ತಬ್ದ ಚಿತ್ರ ನಿರ್ಮಾಣಕ್ಕಾಗಿ ಆರು ತಿಂಗಳ ಕಾಲ ಶ್ರಮಪಟ್ಟಿದೆ. ಬಡ್ಡಿಗೆ ಸಾಲ ತಂದು ಸ್ತಬ್ದ ಚಿತ್ರ ನಿರ್ಮಾಣ ಮಾಡಿದ್ದೆ. ಆದರೆ, ಸರ್ಕಾರದಿಂದ ಹಣ ಬಂದಿಲ್ಲದ ಕಾರಣ ಆರ್ಥಿಕ ಸಮಸ್ಯೆ ಎದುರಿಸುತ್ತಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.

ಆಹಾರ ಮೇಳ, ಸಂಗೀತ ಉತ್ಸವ, ಅಂತಾರಾಷ್ಟ್ರೀಯ ಸಮ್ಮೇಳನಕ್ಕಾಗಿ ಪ್ರಕಾಶ್ 55 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಆದರೆ, ಈ ಹಣವನ್ನು ಸರ್ಕಾರ ಇನ್ನೂ ಕೂಟ್ಟಿಲ್ಲ. ಅಧಿಕ ಬಡ್ಡಿಗೆ ಸಾಲ ತಂದು ಕಾರ್ಯಕ್ರಮ ಯಶಸ್ವಿಗೊಳಿಸಲಾಗಿತ್ತು. ಆದರೆ, ಇದೀಗ ಸರ್ಕಾರದಿಂದ ಹಣಬಾರದೆ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅವರು ಹೇಳುತ್ತಾರೆ.

ಶೀಘ್ರದಲ್ಲಿಯೇ ಎಲ್ಲಾ ಬಿಲ್ ಪಾವತಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಿ. ರಂದೀಪ್ ಹೇಳಿದ್ದಾರೆ.  10.75 ಕೋಟಿ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿತ್ತು. ಆದರೆ. 5 ಕೋಟಿ ಬಿಡುಗಡೆಯಾಗಿದ್ದು, ಉಳಿದ ಹಣದ ಬಿಡುಗಡೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಾಲಯದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು? ಒಬ್ಬ CM ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು: ಛಲವಾದಿ ನಾರಾಯಣಸ್ವಾಮಿ

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!