ರಾಜ್ಯ

ಸಬ್ ಅರ್ಬನ್ ರೈಲ್ವೆ ಪ್ರಸ್ತಾವನೆ ಸಿದ್ಧ: ಬೆಂಗಳೂರಿನ 9 ಮಾರ್ಗಗಳಲ್ಲಿ ಓಡಲಿವೆ ರೈಲು

Sumana Upadhyaya
ಬೆಂಗಳೂರು: ಮೊನ್ನೆ ಮಂಡನೆಯಾದ ಬಜೆಟ್ ನಲ್ಲಿ ಅನುಮೋದನೆಗೊಂಡ ಬೆಂಗಳೂರು ನಗರಕ್ಕೆ 161 ಕಿಲೋ ಮೀಟರ್ ಉದ್ದದ ಸಬ್ ಅರ್ಬನ್ ರೈಲು ಸಂಪರ್ಕದಲ್ಲಿ 72 ಕಿಲೋ ಮೀಟರ್ ದೂರ ಎಲೆವೇಟೆಡ್ ಮಾರ್ಗ ಮತ್ತು 89 ಕಿಲೋ ಮೀಟರ್ ಗ್ರೇಡ್ ಲೆವೆಲ್ ನ್ನು ಹೊಂದಿರುತ್ತದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
9 ಪ್ರತ್ಯೇಕ ಮಾರ್ಗಗಳ ಸಬ್ ಅರ್ಬನ್ ಸಂಪರ್ಕವನ್ನು 17,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು ಗ್ರೇಡ್ ಲೆವೆಲ್ ಲ್ಲಿ ಎಲ್ಲಾ ನಿಲ್ದಾಣಗಳು ಇರಲಿವೆ.
ಬೆಂಗಳೂರು ರೈಲ್ವೆ ವಲಯ ರೈಲ್ವೆ ಮಂಡಳಿಗೆ ಸಲ್ಲಿಸಿರುವ ಮಾರ್ಗ ಪ್ರಸ್ತಾವನೆ ವಿವರ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ. ಇದು ತಾತ್ಕಾಲಿಕ ಮಾರ್ಗವಾಗಿದ್ದು ಕೆಲವು ಮಾರ್ಪಾಡುಗಳನ್ನು ಮಾಡಿ ಯೋಜನೆ ಆರಂಭವಾಗುವ ಹೊತ್ತಿಗೆ ಕೆಲವು ಮರುಮಾರ್ಗಗಳನ್ನು ಸೂಚಿಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.
ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವಿಸ್(ರೈಟ್ಸ್) ಸಲಹಾ ಸಂಸ್ಥೆಗೆ ಈ ರೈಲು ಮಾರ್ಗದ ಆಧಾರದ ಮೇಲೆ ಸಾಧ್ಯತಾ ವರದಿಯನ್ನು ಸಲ್ಲಿಸುವಂತೆ ಕೇಳಲಾಗಿದೆ. ನಮ್ಮಲ್ಲಿ 9 ಪ್ರಸ್ತಾವಿತ ಮಾರ್ಗಗಳಿವೆ. ಅವುಗಳಲ್ಲಿ 8 ಎಲೆವೇಟೆಡ್ ಲೆವೆಲ್ ಮತ್ತು ನೆಲದ್ವಾರದಲ್ಲಿ ಮಿಶ್ರ ಟ್ರ್ಯಾಕ್ ಗಳನ್ನು ಹೊಂದಿವೆ. ಬೆಂಗಳೂರಿನ ಕಂಟೋನ್ಮೆಂಟ್ ನಿಂದ ವೈಟ್ ಫೀಲ್ಡ್  ಮಾರ್ಗದಲ್ಲಿ ಸಂಪೂರ್ಣ ಗ್ರೇಡ್ ಲೆವೆಲ್ ಇರುತ್ತದೆ. 
ಭೂಮಿ ಪಡೆದುಕೊಳ್ಳುವುದು ಮತ್ತು ಮನೆ ಕಳೆದುಕೊಂಡವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ವೆಚ್ಚ ಮತ್ತು ಸಮಯವನ್ನು ಕಡಿತ ಮಾಡಲು ಎಲೆವೇಟೆಡ್ ಕಾರಿಡಾರ್ ಗಳನ್ನು ನಿರ್ಮಿಸಲು ಯೋಜಿಸಲಾಯಿತು ಎಂದು ಮೂಲಗಳು ತಿಳಿಸಿವೆ. 
ಎಲೆವೇಟೆಡ್ ಕಾರಿಡಾರ್ ನ ಉದ್ದೇಶಿತ ವಿನ್ಯಾಸದ ಬಗ್ಗೆ ಕೇಳಿದರೆ, ಎಲೆವೇಟೆಡ್ ನಿರ್ಮಾಣ ರೈಲಿನ ಭಾರವನ್ನು ತಡೆದುಕೊಳ್ಳುವ ರೀತಿ ವಿನ್ಯಾಸವಿರುತ್ತದೆ. ಸಬ್ ಅರ್ಬನ್ ರೈಲು ವ್ಯವಸ್ಥೆಯನ್ನು ಮುಗಿಸಲು ಸಮಯ ಪರಿಮಿತಿ ಹಾಕಿಕೊಂಡಿಲ್ಲ. ಇದು ದೀರ್ಘಾವಧಿಯ ಯೋಜನೆಯಾಗಿದ್ದು ಇಂತಿಷ್ಟು ಅವಧಿಯೊಳಗೆ ಮುಗಿಸಬೇಕೆಂಬ ಯೋಜನೆಯಿಲ್ಲ ಎಂದು ರೈಲ್ವೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
SCROLL FOR NEXT