ಭಯೋತ್ಪಾದಕ ಕೃತ್ಯಕ್ಕೆ ಹಣ ವರ್ಗಾವಣೆ, ಲಷ್ಕರ್ ಉಗ್ರನಿಗೆ ಏಳು ವರ್ಷ ಸಜೆ 
ರಾಜ್ಯ

ಬೆಂಗಳೂರು: ಭಯೋತ್ಪಾದಕ ಕೃತ್ಯಕ್ಕೆ ಹಣ ವರ್ಗಾವಣೆ, ಲಷ್ಕರ್ ಉಗ್ರನಿಗೆ ಏಳು ವರ್ಷ ಸಜೆ

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಇ-ತೊಯ್ಬಾ (ಎಲ್ ಇಟಿ) ಗೆ ಸೇರಿದ ಭಯೋತ್ಪಾದಕನಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಬೆಂಗಳೂರು: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಇ-ತೊಯ್ಬಾ (ಎಲ್ ಇಟಿ) ಗೆ ಸೇರಿದ ಭಯೋತ್ಪಾದಕನಿಗೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಭಯೋತ್ಪಾದಕ ಚಟುವಟಿಕೆ ನಡೆಸುವುದು ಹಾಗೂ ಭಯೋತ್ಪಾದಕ ಕೃತ್ಯಕ್ಕೆ ಹಣ ವರ್ಗಾವಣೆ ಆರೋಪ ಸಂಬಂಧ ಈ ಶಿಕ್ಷೆ ಪ್ರಕಟವಾಗಿದೆ.
ಕರ್ನಾಟಕದಲ್ಲಿದ್ದುಕೊಂಡೇ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ್ದ ನಡೆಸುತ್ತಿದ್ದ ಬಿಲಾಲ್ ಅಹಮದ್ ಖುತಾ ಅಲಿಯಾಸ್ ಇಮ್ರಾನ್ ಜಲಾಲ್ ಗೆ ಜೈಲು ಶಿಕ್ಷೆ ಜತೆಗೆ 50,000 ರೂ. ದಂಡ ವಿಧಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಶಂಕರ್ ಅಮರಣ್ಣವರ್ ಅವರಿದ್ದ ಏಕವ್ಯಕ್ತಿ ಪೀಠವು ಈ ತೀರ್ಪು ಪ್ರಕಟಿಸಿದೆ.
ಜನವರಿ 2007ರಲ್ಲಿ ಕರ್ನಾಟಕ ಪೋಲೀಸರು ಎಕೆ ಸರಣಿ ರೈಫಲ್ಸ್, 200 ಗುಂಡುಗಳು, ಐದು ಹ್ಯಾಂಡ್ ಗ್ರೆನೇಡ್ ಗಳು ಹಾಗೂ ಸ್ಯಾಟಲೈಟ್ ಫೋನ್ ಹೊಂದಿದ್ದ ಓರ್ವ ಉಗ್ರನನ್ನ ಬಂಧಿಸಿದ್ದರು. ಅಂದು ಆತನ ವಿರುದ್ಧ ಭಾರತ ಸರಕಾರ ವಿರುದ್ಧ ಸಮರ, , ಶಸ್ತ್ರಾಸ್ತ್ರ ಮತ್ತು ಸ್ಪೋಟಕಗಳನ್ನು ಹೊಂದಿರುವುದು ಸೇರಿದಂತೆ ಭಾರತೀಯ ದಂಡ ಸಂಹಿತೆಯ ಇತರ ವಿಭಾಗಗಳಡಿಯಲ್ಲಿ ಪ್ರಕರಣ ದಾಕಲಿಸಲಾಗಿತ್ತು.  ಎಲ್ ಇಟಿ ಸದಸ್ಯನಾಗಿದ್ದ ಆರೋಪಿ ಬಿಲಾಲ್ 2001ರಿಂದಲೂ ಇಂತಹಾ ಸಮಾಜ ವಿದ್ರೋಹ ಕೆಲಸದಲ್ಲಿ ತೊಡಗಿದ್ದ ಎಂದು ಪೋಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು? ಒಬ್ಬ CM ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು: ಛಲವಾದಿ ನಾರಾಯಣಸ್ವಾಮಿ

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!