ಕೊಪ್ಪಳ: ಕೊಪ್ಪಳದ ಕಾಂಗ್ರೆಸ್ ಜನಾಶೀರ್ವಾದ ರ್ಯಾಲಿಯಲ್ಲೂ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರಿಗೆ ಹಣ ಹಂಚುತ್ತಿರುವುದು ಕಂಡುಬಂದಿದೆ.
ಜನಾಶೀರ್ವಾದ ರ್ಯಾಲಿಯ ವೇಳೆ ಟೆಂಪೋ ಒಂದರಲ್ಲಿ ನಿಂತಿದ್ದ ಕಾಂಗ್ರೆಸ್ ಮುಖಂಡರೊಬ್ಬರು ಕಾರ್ಯಕರ್ತರಿಗೆ ಹಂಚುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಜನಾಶೀರ್ವಾದ ರ್ಯಾಲಿಯನ್ನು ಹಮ್ಮಿಕೊಂಡಿದ್ದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರ್ಯಾಲಿಯಲ್ಲಿ ತೊಡಗಿದ್ದಾರೆ.