ಮೈಸೂರು: ಹರಿನಹಳ್ಳಿಯಲ್ಲಿ ಬ್ರಿಟಿಷರ ಕಾಲದ 140 ಬೆಳ್ಳಿನಾಣ್ಯಗಳು ಪತ್ತೆ
ರಾಣಿ ವಿಕ್ಟೋರಿಯಾ ಕಾಲಕ್ಕೆ ಸೇರಿದ ಸುಮಾರು 140 ಬೆಳ್ಳಿ ನಾಣ್ಯಗಶು ತುಂಬಿದ ಬಿಂದಿಗೆ ಮೈಸೂರಿನ ಹರಿನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದೆ...
ಮೈಸೂರು: ರಾಣಿ ವಿಕ್ಟೋರಿಯಾ ಕಾಲಕ್ಕೆ ಸೇರಿದ ಸುಮಾರು 140 ಬೆಳ್ಳಿ ನಾಣ್ಯಗಶು ತುಂಬಿದ ಬಿಂದಿಗೆ ಮೈಸೂರಿನ ಹರಿನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಹರಿನಹಳ್ಳಿ ಗ್ರಾಮದಲ್ಲಿ ಈ ನಾಣ್ಯಗಳು ಸಿಕ್ಕಿದ್ದು, ಒಂದು ಕಲ್ಲಿನ ಶಿಲಾ ಶಾಸನ ಮತ್ತು ಸುರಂಗ ಮಾರ್ಗ ಕೂಡ ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ.
ಕಟ್ಟಡ ನಿರ್ಮಾಣ ಕೂಲಿಕಾರರು ಕೆಲ ನಾಣ್ಯಗಳನ್ನು ಗಿರವಿ ಅಂಗಡಿಯಲ್ಲಿ ಮಾರಾಟ ಮಾಡಲು ತೆರಳಿದ್ದಾರೆ, ಮಾಹಿತಿ ಪಡೆದ ಪೊಲೀಸರು ಅವರನ್ನು ವಿಚಾರಣೆ ನಡೆಸಿದಾಗ ಅಣ್ಣೇಗೌಡ ಎಂಬುವರಿಗೆ ಸೇರಿದ ನಿವೇಶನದಲ್ಲಿ ಬೆಳ್ಳಿ ನಾಣ್ಯವಿದ್ದ ಬಿಂದಿಗೆ ಸಿಕ್ಕಿರುವ ಬಗ್ಗೆ ತಿಳಿಸಿದರು ಎಂದು ಪಿರಿಯಾ ಪಟ್ಟಣ ಪೊಲೀಸರು ತಿಳಿಸಿದ್ದಾರೆ.
ಅಣ್ಣೇಗೌಡ ಎಂಬುವರು ಹೊಸ ಮನೆ ಕಟ್ಟುವ ಸಲುವಾಗಿ ಹಳೆಯ ಮಣ್ಣಿನ ಮನೆಯನ್ನು ಕೆಡವಿದಾಗ ನಾಣ್ಯಗಳು ಸಿಕ್ಕಿವೆ., ಆದರೆ ಕೂಬಲಿ ಕೆಲಸಗಾರರು ಈ ವಿಷಯವನ್ನು ಅಣ್ಣೇಗೌಡ ಅವರಿಗೆ ತಿಳಿಸಿರಲಿಲ್ಲ, 1840 ನೇ ಇಸವಿಗೆ ಸೇರಿದ ನಾಣ್ಯಗಳ ಮೇಲೆ ಬ್ರಿಟಿಷ್ ರಾಣಿ ವಿಕ್ಟೋರಿಯಾ ಚಿತ್ರ ಮುದ್ರಿಸಲಾಗಿದೆ.