ಪತ್ನಿ ಹಾಗೂ ಮಕ್ಕಳೊಂದಿಗೆ ಹುಸೇನ್
ಬೆಂಗಳೂರು: ಓಮನ್ ನ ಮಸ್ಕಟ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಹುಸೇನ್ ಎಂಬಾತ ನಾಪತ್ತೆಯಾಗಿದ್ದಾರೆ. ಗಣ ರಾಜ್ಯೋತ್ಸವದಂದು ಕರೆ ಮಾಡಿದ್ದ ಹುಸೇನ್ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಕೊನೆಯ ಬಾರಿ ಮಾತನಾಡಿದ್ದರು.
ಹುಸೇನ್ ಕಣ್ಮರೆಯಾಗಿರುವ ಬಗ್ಗೆ ಆತಂಕ ವ್ಯಕ್ತ ಪಡಿಸಿರುವ ಆತನ ಕುಟುಂಬ ಅರಬ್ ನಲ್ಲೇ ಹುಸೇನ್ ಇದ್ದಾರೆಂದು ಭಾವಿಸಿದ್ದಾರೆ, ತಮ್ಮ ತವರಿಗೆ ಕರೆ ಮಾಡಿದ್ದ ಹುಸೇನ್ ಕುಟುಂಬಸ್ಥರೊಂದಿಗೆ ಮಾತನಾಡಿದ ದಿನವೇ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. 15 ದಿನಗಳ ನಂತರ ಹುಸೇನ್ ವಾಸವಿದ್ದ ಕೊಠಡಿಯಲ್ಲಿ ಕಾಣದಿರುವುದು ಕುಟುಂಬಸ್ಥರಿಗೆ ತಿಳಿದಿದೆ. ಹುಸೇನ್ ಗಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರು ಶೋಧ ನಡೆಸಿದ್ದು ಇದುವರೆಗೂ ಆತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಭಾರತೀಯ ರಾಯಭಾರ ಕಚೇರಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಸಂಬಂಧ ದೂರು ದಾಖಲಿಸಿದೆ.
ಜನವರಿ 26 ರಂದು ತನ್ನ ಕುಟುಂಬಸ್ಥರಿಗೆ ಹುಸೇನ್ ಕರೆ ಮಾಡಿದ್ದ ಆತನ ಸಹೋದರ ಸಲೀಮ್ ತಿಳಿಸಿದ್ದಾನೆ. ನೌಕರಿಗೆ ಸಂಜೆ 7 ಗಂಟೆಗೆ ಹೋಗಬೇಕಿತ್ತು, ಆದರೆ ಆತ ಅಂದು 6 ಗಂಟೆಗೆ ಕೊಠಡಿಯಿಂದ ತೆರಳಿದ್ದ ಎಂದು ಆತನ ರೂಮ್ ಮೇಟ್ ಮಹ್ರೂಫ್ ತಿಳಿಸಿದ್ದಾನೆ.
ಹುಸೇನ್ ವಾಪಸ್ ಕೊಠಡಿಗೆ ಬಾರದ ಹಿನ್ನೆಲೆಯಲ್ಲಿ ಜನವರಿ 27 ರಂದು ಆತ ಹುಸೇನ್ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಅಂದಿನಿಂದಲೇ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹುಸೇನ್ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್ ಮಾಲೀಕ ಆತ ಓಡಿ ಹೋಗಿದ್ದಾನೆ ಎಂದು ಆರೋಪಿಸಿದ್ದಾನೆ. ಕಳೆದ ಕೆಲವು ತಿಂಗಳಿಂದ ತನ್ನ ಪತಿಗೆ ರೆಸ್ಟೋರೆಂಟ್ ಮಾಲೀಕ ತನ್ನ ಪತಿಗೆ ವೇತನ ನೀಡಿರಲಿಲ್ಲ ಎಂದು ಹುಸೇನ್ ಪತ್ನಿ ಆರೋಪಿಸಿದ್ದಾರೆ.
ಹುಸೇನ್ ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಕಳೆದ ವರ್ಷ ತವರಿಗೆ ಮರಳಿದ್ದ ಆತ ಚಿಕಿತ್ಸೆ ಪಡೆದುಕೊಂಡಿದ್ದ. ವಾಪಸ್ ತೆರಳದಂತೆ ನಾವೆಲ್ಲ ಆತನಿಗೆ ಬುದ್ದಿ ಹೇಳಿದ್ದೆವು. ಆದರೆ 1 ವರ್ಷ ಕೆಲಸ ಮಾಡಿ ಬರುವುದಾಗಿ ಹೇಳಿದ್ದ ಎಂದು ಹುಸೇನ್ ಸಹೋದರ ತಿಳಿಸಿದ್ದಾರೆ.
ತಮ್ಮ ತಂದೆ ಕಣ್ಮರೆಯಾಗಿರುವುದರಿಂದ ಹುಸೇನ್ ಮಕ್ಕಳು ತೀವ್ರ ಆತಂಕಕ್ಕೊಳಗಾಗಿದ್ದಾರೆ, ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದ್ದಾರೆ.