ಬೆಂಗಳೂರು: ಮೈಮೇಲೆ ತುರಿಕೆ ಪುಡಿ ಎರಚಿ 45,000 ನಗದು ದರೋಡೆ 
ರಾಜ್ಯ

ಬೆಂಗಳೂರು: ಮೈಮೇಲೆ ತುರಿಕೆ ಪುಡಿ ಎರಚಿ 45,000 ನಗದು ದರೋಡೆ

ತುರಿಕೆ ಪುಡಿ ಮೈಮೇಲೆ ಎರಚಿ ವ್ಯಕ್ತಿಯೊಬ್ಬರಿಂದ 45,000 ರೂ ದೋಚಿದ ಘಟನೆ ಬೆಂಗಳೂರು ಕೆಆರ್ ಮಾರ್ಕೆಟ್ ಬಳಿ ನಡೆದಿದೆ.

ಬೆಂಗಳೂರು: ತುರಿಕೆ ಪುಡಿ ಮೈಮೇಲೆ ಎರಚಿ ವ್ಯಕ್ತಿಯೊಬ್ಬರಿಂದ 45,000 ರೂ ದೋಚಿದ ಘಟನೆ ಬೆಂಗಳೂರು ಕೆಆರ್ ಮಾರ್ಕೆಟ್ ಬಳಿ ನಡೆದಿದೆ. ಶನಿವಾರ ನಡೆದ ಘಟನೆ ಸಂಬಂಧ ಜೆಪಿ ನಗರ ನಿವಾಸಿ ವಿನೀತ್ ಪವನ್ ಜೈನ್ ಎನ್ನುವವರು ಸೋಮವಾರದಂದು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿನೀತ್ ಅವರು ಚಿಕ್ಕಪೇಟೆಯಲ್ಲಿ ಹಾರ್ಡ್ ವೇರ್ ಶಾಪ್ ನಡೆಸುತ್ತಿದ್ದಾರೆ.
ಶನಿವಾರ ರಾತ್ರಿ 8.30ರ ಸುಮಾರಿಗೆ ಅಂಗಡಿ ಬಾಗಿಲು ಹಾಕಿ ತಮ್ಮ ಸ್ಕೂಟರ್ ನಲ್ಲಿ ಮನೆ ಕಡೆ ಹೊರಟಿದ್ದ ಜೈನ್ ಕಲಾಸಿಪಾಳ್ಯ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಇವರ ತೋಳಿನ ಭಾಗಕ್ಕೆ ತುರಿಕೆ ಪುಡಿಯನ್ನು ಎರಚಿದ್ದಾನೆ. ತುರಿಕೆ ಪ್ರಾರಂಭವಾಗಿದ್ದ ಕಾರಣ ತಮ್ಮ ವಾಹನ ನಿಲ್ಲಿಸಿದ್ದ ವಿನೀತ್ ಪುಡಿ ಎರಚಿದ್ದ ಜಾಗವನ್ನು ನೀರಿನಿಂದ ತೊಳೆದುಕೊಳ್ಳಲಿಕ್ಕಾಗಿ ಹತ್ತಿರದ ಆಟೋ ರಿಕ್ಷಾ ಚಾಲಕರ ಬಳಿ ನೀರು ತರಲೆಂದು ಹೋಗಿದ್ದಾರೆ. ಇದೇ ವೇಳೆ ಇನ್ನೋರ್ವ ದುಷ್ಕರ್ಮಿಯು ಸ್ಕೂಟರ್ ನ ಬೂಟ್ ಬಾಕ್ಸ್ ನಲ್ಲಿದ್ದ ನಗದು, ಪೆನ್ ಡ್ರೈವ್ ಹಾಗೂ ಅಂಗಡಿಯ ಕೀಲಿ ಕೈಯೊಡನೆ ಪರಾರಿಯಾಗಿದ್ದಾನೆ ಎಂದು ಪೋಲೀಸ್ ಅಧಿಕಾರಿಯೊಬ್ಬರು ಹೇಳಿಅದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂದೇ ಉದಯನಿಧಿ ಸ್ಟಾಲಿನ್ ಬಿಡುಗಡೆ ಮಾಡಿ: ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಆದೇಶ

ಹಿರಿಯ ಶಾಸಕ HK ಪಾಟೀಲ್‌ಗೆ ತಪ್ಪಿದ ಸಚಿವ ಸ್ಥಾನ: 21 ಕಾಂಗ್ರೆಸ್ ಕೌನ್ಸಿಲರ್‌ಗಳ ಸಾಮೂಹಿಕ ರಾಜೀನಾಮೆ!

ನಟಿ ತ್ರಿಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಆರೋಪ: ನಾನು ಅವರ ಹೆಸರನ್ನೂ ಉಲ್ಲೇಖಿಸಿದ್ದೇನೆಯೇ? ಬಂಧನದ ಬಳಿಕ ಉದಯನಿಧಿ ಸ್ಟಾಲಿನ್

ನಟಿ ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ; DMK ನಾಯಕ ಉದಯನಿಧಿ ಸ್ಟಾಲಿನ್ ಪೊಲೀಸ್ ವಶಕ್ಕೆ, ತಮಿಳುನಾಡು ರಾಜಕೀಯದಲ್ಲಿ ತೀವ್ರ ಸಂಚಲನ..!

MS Dhoni Bike Collection: ಅತ್ಯಂತ ದುಬಾರಿ ಬೈಕ್ ಯಾವುದು ಗೊತ್ತಾ? ಇದರ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!Video