ರಾಜ್ಯ

ಬೆಂಗಳೂರು ರೈಲು ನಿಲ್ದಾಣದಲ್ಲಿ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಸೌಲಭ್ಯ

Sumana Upadhyaya

ಬೆಂಗಳೂರು: ಮಹಿಳಾ ಪ್ರಯಾಣಿಕರ ಅನುಕೂಲಕ್ಕೆ ಬೆಂಗಳೂರು ರೈಲ್ವೆ ವಲಯ ಎರಡು ಪ್ರಮುಖ ಉಪಕರಣಗಳನ್ನು ನಗರದ ಎರಡು ನಿಲ್ದಾಣಗಳ ಮಹಿಳೆಯರ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯಗಳಲ್ಲಿ ಇಡಲಿದೆ. ಸ್ಯಾನಿಟರಿ ನ್ಯಾಪ್ ಕಿನ್ ಉತ್ಪಾದಿಸುವ ಯಂತ್ರ ಮತ್ತು ನ್ಯಾಪ್ ಕಿನ್ ಗಳನ್ನು ಹೊರಹಾಕಲು ಇರುವ ಪರಿಸರ ಸ್ನೇಹಿ ಯಂತ್ರ.

ಮಹಿಳೆಯರಲ್ಲಿ ಸ್ವಚ್ಛತೆ ಬಗ್ಗೆ ಕಾಳಜಿ ಹೆಚ್ಚಿಸಲು ರೈಲ್ವೆ ವಿಭಾಗೀಯ ವ್ಯವಸ್ಥಾಪಕರ ಕಚೇರಿಯಲ್ಲಿ ನಿನ್ನೆ ಪ್ರಾಯೋಗಿಕ ಮಾದರಿಯಲ್ಲಿ ಯಂತ್ರವನ್ನು ಸ್ಥಾಪಿಸಲಾಯಿತು. ಕರ್ನಾಟಕದಾದ್ಯಂತ ಇರುವ ರೈಲ್ವೆ ನೌಕರರ ನೆರವಿನಿಂದ ನಡೆಯುತ್ತಿರುವ ನೈರುತ್ಯ ರೈಲ್ವೆ ಮಹಿಳಾ ಅಭಿವೃದ್ಧಿ ಸಂಘ ಈ ಯೋಜನೆಗೆ ಪ್ರಾಯೋಜಕತ್ವ ನೀಡಿದೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ವಿಭಾಗದ ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಕೆ.ಆಸಿಫ್ ಹಫೀಸ್, ಪ್ರತಿ ಯಂತ್ರಗಳನ್ನು ನಿಲ್ದಾಣಗಳಲ್ಲಿ ಸ್ಥಾಪಿಸಲು ಸುಮಾರು 67,000 ರೂಪಾಯಿ ವೆಚ್ಚವಾಗುತ್ತದೆ. ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ  ಮತ್ತು ಯಶವಂತಪುರ ರೈಲು ನಿಲ್ದಾಣಗಳ ಮಹಿಳೆಯರ ವಿಶ್ರಾಂತಿ ಕೊಠಡಿ ಮತ್ತು ಮಹಿಳಾ ಶೌಚಾಲಯಗಳಲ್ಲಿ ಕಾಯಿನ್ ಚಾಲಿತ ವೆಂಡಿಂಗ್ ಮೆಶಿನ್ ಗಳನ್ನು ಸ್ಥಾಪಿಸಲಾಗಿದೆ. ಇದನ್ನು ವಿಶ್ವ ಮಹಿಳಾ ದಿನದಂದು ಉದ್ಘಾಟಿಸಲಾಗುವುದು ಎಂದು ಹೇಳಿದರು.

ಯಂತ್ರದೊಳಗೆ 5 ರೂಪಾಯಿ ಹಾಕಿದರೆ ಸ್ಯಾನಿಟರಿ ನ್ಯಾಪ್ ಕಿನ್ ದೊರೆಯುತ್ತದೆ ಎಂದು ಹಫೀಸ್ ಹೇಳಿದರು.



ಬೆಂಗಳೂರು ರೈಲ್ವೆ ನಿಲ್ದಾಣ ವಿಭಾಗೀಯ ವ್ಯವಸ್ಥಾಪಕರ ಕೊಠಡಿಯಲ್ಲಿರುವ ಸ್ಯಾನಿಟರಿ ನ್ಯಾಪ್ ಕಿನ್ ಯಂತ್ರ

SCROLL FOR NEXT