ರಾಜ್ಯ

ಶ್ರವಣಬೆಳಗೊಳಕ್ಕೆ ಆಗಮಿಸಿದ ಜಂಗಲ್ ಬಾಬಾ, ಭಕ್ತ ಸಮೂಹದ ಕೇಂದ್ರಬಿಂದು ಈ ಜೈನ ಮುನಿ

Raghavendra Adiga
ಶ್ರವಣಬೆಳಗೊಳ: ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಸಮಯದಲ್ಲಿ ಗೊಮ್ಮಟೇಶ್ವರ ನಂತರದದಲ್ಲಿ ಜೈನಮುನಿಗಳು ಬಹುದೊಡ್ಡ ಆಕರ್ಷಣೆ. ಜೈನಮುನಿಗಳು ಎಲ್ಲರಂತಲ್ಲದೆ ಸದಾ ಜನಸಂಪರ್ಕದಿಂದ ದೂರವಿದ್ದು  ಯಾರ ಕಣ್ಣಿಗೂ ಕಾಣಿಸಿಕೊಳ್ಳದಂತಿರುತ್ತಾರೆ.
ಆದರೆ ಮಸ್ತಕಾಭಿಷೇಕದಂತಹಾ ಸಮಯ್ತದಲ್ಲಿ ಮಾತ್ರ ಎಲ್ಲರೆದುರು ಬರುವುದು ಜನರಿಗೆ ಅವರ ಮೇಲೆ ಕುತೂಹಲ ಉಂತಾಗಲು ಕಾರಣವಾಗಿದೆ. ಅಂತಹಾ ಮುನಿಗಳಲ್ಲಿ ಜಂಗಲ್ ಬಾಬಾ ಎಂದು ಖ್ಯಾತರಾದ ಜೈನ ಮುನಿಗಳು ಒಬ್ಬರಾಗಿದ್ದು ಚಿನ್ಮಯ ಸಾಗರ ಮಹಾರಾಜ ಅಥವಾ ಜಂಗಲ್ ಬಾಬಾ ಕಳೆದೊಂದು ವಾರದಿಂದ ಶ್ರವಣಬೆಳಗೊಳದ ಚಂದ್ರಗಿರಿಯಲ್ಲಿದ್ದಾರೆ.
ಇಷ್ಟಾಗಿ ಈ ಮುನಿಯು ಸದಾ ಗುಹೆಯೊಂದರಲ್ಲಿ ವಾಸವಾಗಿರುತ್ತಿದ್ದು ಸಂಜೆ ವೇಳೆಯಲ್ಲಿ ಮಾತ್ರ ಒಮ್ಮೆ ಹೊರಗೆ ಕಾಣಿಸುತ್ತಾರೆ. ಉತ್ತರ ಭಾರತದ ಭಕ್ತರನ್ನೊಳಗೊಂಡ ಬಾಬಾ ಅವರು ತಾವು ಚಂದ್ರಗಿರಿಯಲ್ಲಿನ ಗುಹೆಯೊಂಡರಿಂಡ ಅವರಿಗೆ ದರ್ಶ್ನ ನಿಡುತ್ತಾರೆ. ಆಶ್ಚರ್ಯಕರ ಸಂಗತಿ ಎಂದರೆ ಶಿಸ್ತಿನ ಜೀವನವನ್ನು ನಡೆಸುವ ಜಂಗಲ್ ಬಾಬಾ ಬೆಳಗ್ಗೆ 4 ಗಂಟೆಗೆ ಎಚ್ಚರಗೊಂಡು, ಸುಮಾರು ಮೂರು ಗಂಟೆಗಳ ಕಾಲ ಒಂದೇ ಕಾಲಿನ ಮೇಲೆ ನಿಲ್ಲುತ್ತಾರೆ, ದಿನಕ್ಕೆ 8-10 ಗಂಟೆಗಳವರೆಗೆ ಧ್ಯಾನವನ್ನು ಮಾಡುವ ಇವರು ಪ್ರತಿ ದಿನವೂ ಒಂದೇ ಹೊತ್ತು ಆಹಾರ ಸೇವಿಸುತ್ತಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿರುವ ಜಿಗುಲಾ ಗ್ರಾಮದವರಾದ ಬಾಬಾ ಅವರ 25 ನೇ ವಯಸ್ಸಿನಲ್ಲಿ ದೀಕ್ಷೆ ಹೊಂದಿದರು. ಅವರ ಆಧ್ಯಾತ್ಮಿಕ ಪ್ರಯಾಣವು 1988ರಲ್ಲಿ ಪ್ರಾರಂಭಗೊಂಡಿತು. ದೇಶದ ಉದ್ದಗಲಕ್ಕೆ ಪ್ರವಾಸ ಮಾಡಿದ ಜಂಗಲ್ ಬಾಬಾ ವೈದ್ಯರು, ವಕೀಲರು, ವಿದ್ವಾಂಸರು ಮತ್ತು ಪೋಲೀಸರ ರಾಷ್ಟ್ರೀಯ ಸಮಾವೇಶಗಳಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಅವರು ಸಾವಿರಾರು ವ್ಯಸನಿಗಳನ್ನು ತಮ್ಮ ಚಟದಿಂದ ಹೊರಬರಲು ಸಹಾಯ ಮಾಡಿದ್ದಾರೆ ಎಂದು ಅವರ ಭಕ್ತರು ಹೇಳಿದರು,
SCROLL FOR NEXT