ನಮ್ಮ ಮೆಟ್ರೋಗೆ ಮೂರು ಹೊಸ ಬೋಗಿ ಹಸ್ತಾಂತರ
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್(ಬಿಇಎಂಎಲ್) ತಾನು ನಿರ್ಮಿಸಿರುವ ಮೂರು ಹೊಸ ಬೋಗಿಗಳನ್ನು ಬುಧವಾರ ನಮ್ಮ ಮೆಟ್ರೊಗೆ ಹಸ್ತಾಂತರಿಸಿದೆ.
ಬೆಂಗಳೂರು: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್(ಬಿಇಎಂಎಲ್) ತಾನು ನಿರ್ಮಿಸಿರುವ ಮೂರು ಹೊಸ ಬೋಗಿಗಳನ್ನು ಬುಧವಾರ ನಮ್ಮ ಮೆಟ್ರೊಗೆ ಹಸ್ತಾಂತರಿಸಿದೆ.
ಇಂದು ಬೆಳಗ್ಗೆ ಹೊಸ ತಿಪ್ಪಸಂದ್ರದ ಬಿಇಎಂಎಲ್ ಕಚೇರಿಯಲ್ಲಿ ಕೇಂದ್ರ ರಾಸಾಯನಿಕ ರಸಗೊಬ್ಬರ ಸಚಿವ ಅನಂತ್ ಕುಮಾರ್, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಬಿಇಎಂಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ ಕೆ ಹೋಟ ಅವರು ಬಿಎಂಆರ್ಸಿಎಲ್ ಗೆ ಮೂರು ಹೊಸ ಬೋಗಿಗಳನ್ನು ಹಸ್ತಾಂತರಿಸಿದರು,
ಬಿಇಎಂಎಲ್ ಹಸ್ತಾಂತರಿಸಿರುವ ಈ ಮೂರು ಬೋಗಿಗಳ ಪರೀಕ್ಷಾರ್ಥ ಸಂಚಾರ ನಡೆಸಿದ ಬಳಿಕ 6 ಬೋಗಿಯ ಮೆಟ್ರೋ ರೈಲು ಸೇವೆಗೆ ಮುಕ್ತವಾಗಲಿದೆ ಎಂದು ಜಾರ್ಜ್ ತಿಳಿಸಿದ್ದಾರೆ.
ದಿನದಿಂದ ದಿನಕ್ಕೆ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೂರು ಹೊಸ ಬೋಗಿಗಳನ್ನು ಅಳವಡಿಸಲು ಬಿಎಂಆರ್ ಸಿಎಲ್ ಕ್ರಮ ಕೈಗೊಂಡಿದ್ದು, 6 ಬೋಗಿಯ ಮೆಟ್ರೋ ರೈಲು ಸೇವೆಗೆ ಮುಕ್ತವಾದ ಬಳಿಕ ಮೊದಲ ಬೋಗಿ ಮಹಿಳೆಯರಿಗೆ ಮೀಸಲು ಇರುತ್ತದೆ. ಮಾರ್ಚ್ 1ರಿಂದ ಪ್ರಾಯೋಗಿಕವಾಗಿ ಇದಕ್ಕೆ ಚಾಲನೆ ದೊರೆಯಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.