ಬೆಂಗಳೂರು: ಬೃಹತ್ ಬೆಂಗಳೂರು ಮಹಾನಾಗರ ಪಾಲಿಕೆ ಈ ಸಾಲಿನ ಬಜೆಟ್ ಇದೇ ಫೆ.23ಕ್ಕೆ ಮಂಡನೆಯಾಗುವ ನಿರೀಕ್ಷೆ ಇದೆ. ಈ ಬಾರಿ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನೂತನ ಯೋಜನೆಗಳ ನಿರೂಪಣೆಗೆ ಬಿಬಿಎಂಪಿ ಮುಂದಾಗಿದೆ ಎನ್ನಲಾಗುತ್ತಿದ್ದು ಬೆಂಗಳೂರಿನ ವಿವಿಧ ಕಡೆಗಳಲ್ಲಿ ಏರ್ ಅಂಬ್ಯುಲೆನ್ಸ್ ಸೇವೆಗಳನ್ನು ಪ್ರಾರಂಭಿಸಲಾಗುತ್ತದೆ. ಇದಕ್ಕಾಗಿ ಎಂಟು ಹೆಲಿಪ್ಯಾಡ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ರಸ್ತೆ ಅಪಘಾತಕ್ಕೀಡಾದವರಿಗೆ ಹಾಗೂ ಇನ್ನಿತರೆ ತುರ್ತು ಚಿಕಿತ್ಸೆ ಅಗತ್ಯವಿದ್ದವರಿಗೆ ಈ ಹೆಲಿಕಾಪ್ಟರ್ ಮೂಲಕ ಅತಿ ಶೀಘ್ರವಾಗಿ ಆಸ್ಪತ್ರೆಗೆ ಸಾಗಿಸಲು ಸಾಧ್ಯವಿದೆ. ಇದರಿಂದ ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ಸಾವಿಗೀಡಾಗುವುದನ್ನು ತಪ್ಪಿಸಬಹುದಾಗಿದೆ.
ಇದೀಗ ನಗರದಲ್ಲಿ ಸುಮಾರು 50 ಹೆಲಿಪ್ಯಾಡ್ ಗಳಿದ್ದು ಅವುಗಳಲ್ಲಿ ಬಹುತೇಕ ಹೆಲಿಪ್ಯಾಡ್ ಗಳು ಖಾಸಗಿ ಮಾಲಿಕತ್ವಕ್ಕೆ ಸೇರಿದೆ. ಬಿಬಿಎಂಪಿ ತನ್ನದೇ ಆದ ಹೆಲಿಪ್ಯಾಡ್ ಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಿದ್ದು ಇದು ಕಾರ್ಯರೂಪಕ್ಕೆ ಬಂಡರೆ ಭಾರತದಲ್ಲಿ ಸ್ವಂತ ಹೆಲಿಪ್ಯಾಡ್ ಗಳನ್ನು ಹೊಂದಿರುವ ಏಕೈಕ ನಗರಪಾಲಿಕೆ ಎನ್ನುವ ಕೀರ್ತಿಗೆ ಬೆಂಗಳೂರು ಪಾತ್ರವಾಗಲಿದೆ. ಪ್ರಸ್ತುತ ಎಲೆಕ್ಟ್ರಾನಿಕ್ಸ್ ಸಿಟಿಯಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ಹೆಲಿಕಾಪ್ಟರ್ ಸೇವೆಗಳನ್ನು ಕೆಲವು ಖಾಸಗಿ ಸಂಸ್ಥೆಗಳು ನಡೆಸುತ್ತಿದ್ದು ಹದಿನೈದು ನಿಮಿಷದ ಪ್ರಯಾಣಕ್ಕೆ `3,000ದಿಂದ `3,500 ರೂ. ಬೆಲೆ ನಿಗದಿಪಡಿಸಲಾಗುತ್ತಿದೆ.
ಬಿಬಿಎಂಪಿ ಇದಾಗಲೇ ನಗರದಲ್ಲಿ ಎಂಟು ಜಾಗಗಳನ್ನು ಗುರುತಿಸಿದ್ದು ಇಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತದೆ. "ನಾವು ನಿರ್ಮಿಸುವ ಹೆಲಿಪ್ಯಾಡ್ ಗಳ ಮಾಲಿಕತ್ವ ನಮ್ಮಲ್ಲಿಯೇ ಇರುತ್ತದೆ. ನಾವದಕ್ಕೆ ಸಾಮಾನ್ಯ ಜನರಿಗೂ ಅನುಕೂಲವಾಗುವಂತೆ ಅತ್ಯಲ್ಪ ಶುಲ್ಕ ವಿಧಿಸುತ್ತೇವೆ. ಇಲ್ಲಿ ಏರ್ ಅಂಬ್ಯುಲೆನ್ಸ್ ಸೇವೆ ಒದಗಿಸಲು ಖಾಸಗಿ ನಿರ್ವಾಹಕರನ್ನು ಆಹ್ವಾನಿಸಲಾಗುತ್ತದೆ" ಎಂದು ಬಿಬಿಎಂಪಿ ಮೇಯರ್ ಸಂಪತ್ ರಾಜ್ ಹೇಳಿದ್ದಾರೆ.
"ನಾವು ಏರ್ ಅಂಬ್ಯುಲೆನ್ಸ್ ಸೇವೆಯನ್ನು ನಗದುರಹಿತ ಸೇವೆಯಾಗಿ ಮಾಡುವ ಕಾರ್ಯಸಾಧ್ಯತೆಯನ್ನು ನಾಪರಿಶೀಲಿಸುತ್ತಿದ್ದೇವೆ. ಈ ಸೌಲಭ್ಯದಿಂದ ಅಪಘಾತಕ್ಕೀಡಾದವರು, ರೋಗಿಗಳ ಪ್ರಾಣರಕ್ಷಣೆಗೆ ನೆರವು ದೊರೆಯಲಿದೆ. ಸಮಯದ ಉಳಿತಾಯವಾಗುವ ಕಾರಣ ಅಪಗಾತಕ್ಕೀಡಾದವರ ಜೀವ ಉಳಿಯುವ ಸಾಧ್ಯತೆ ಹೆಚ್ಚಾಗಿಉರಲಿದೆ" ಅವರು ಹೇಳಿದರು.
ಹಣಕಾಸು ಹಾಗೂ ತೆರಿಗೆಗಳ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜೆಡಿ(ಎಸ್) ಕೌನ್ಸಿಲರ್ ಮಹದೇವ್ ಅವರು ಬಿಬಿಎಂಪಿ ಬಜೆಟ್ ನ್ನು ಮಂಡನೆ ಮಾಡಲಿದ್ದಾರೆ.
ಇದೇ ವೇಳೆ ಮಾತನಾಡಿದ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಬಿಬಿಎಂಪಿ ಹೆಲಿಪ್ಯಾಡ್ ಗೆ ಹಣ ಸುರಿಯುವುದು ನಿಷ್ಪ್ರಯೋಜಕವೆಂದು ಕಿಡಿ ಕಾರಿದ್ದಾರೆ. "ರಸ್ತೆಗಳು, ಕಾಲುದಾರಿಗಳು, ಬೀದಿ ದೀಪಗಳು ಮುಂತಾದ ಉತ್ತಮ ಸೌಲಭ್ಯಗಳನ್ನು ನೀಡುವುದು ಬಿಬಿಎಂಪಿ ಕಡ್ಡಾಯ ಕರ್ತವ್ಯ. ಅವರು ನಗರವನ್ನು ಸ್ವಚ್ಛವಾಗಿರಿಸಬೇಕು ಮತ್ತು ಉದ್ಯಾನವನಗಳನ್ನು ಮತ್ತು ಇತರ ಮೂಲ ಸೌಲಭ್ಯಗಳನ್ನು ಮೊದಲು ಅಭಿವೃದ್ಧಿಪಡಿಸಬೇಕು. ಖಾಸಗಿ ನಿರ್ವಾಹಕರಿಂದ ಏರ್ ಆಂಬ್ಯುಲೆನ್ಸ್ ಸೇವೆಯನ್ನು ಬೆಂಗಳೂರಿನಲ್ಲಿ ನಡೆಸುವುದೆಂದರೆ ಹೆಲಿಪ್ಯಾಡ್ ಗಾಗಿ ಬಿಬಿಎಂಪಿ ಹಣವನ್ನು ಖರ್ಚು ಮಾಡುವುದು ಏಕೆ? ವಾಸ್ತವವಾಗಿ, ಇದು ರಾಜ್ಯ ಸರ್ಕಾರದ ಕೆಲಸವಾಗಿದೆ. ಬಿಬಿಎಂಪಿ ಮೊದಲು ಉತ್ತಮ ರಸ್ತೆ ನಿರ್ಮಿಸಲು ಮುಂದಾಗಬೇಕು" ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos