ಸಾಂದರ್ಭಿಕ ಚಿತ್ರ 
ರಾಜ್ಯ

ಮಂಗಳೂರು: ನೈತಿಕ ಪೊಲೀಸ್ ಗಿರಿಯ ಭಯದಲ್ಲಿ ಪ್ರೇಮಿಗಳ ದಿನಾಚರಣೆ

ದೇಶಾದ್ಯಂತ ಫೆಬ್ರವರಿ 14 ನೇ ತಾರೀಖಿನಂದು ಪ್ರೇಮಿಗಳ ದಿನಾಚರಣೆ ಆಚರಿಸಲಾಗುತ್ತಿದೆ. ಮಂಗಳೂರಿನಲ್ಲೂ ಕೂಡ ...

ಮಂಗಳೂರು: ದೇಶಾದ್ಯಂತ ಫೆಬ್ರವರಿ 14 ನೇ ತಾರೀಖಿನಂದು ಪ್ರೇಮಿಗಳ ದಿನಾಚರಣೆ ಆಚರಿಸಲಾಗುತ್ತಿದೆ. ಮಂಗಳೂರಿನಲ್ಲೂ ಕೂಡ ಪ್ರೇಮಿಗಳ ದಿನಕ್ಕೆ ಎಲ್ಲಾ ಸಿದ್ಧತೆ ನಡೆಸಿದ್ದು, ನೈತಿಕ ಪೊಲೀಸ್ ಗಿರಿಯ ಕರಿನೆರಳು ಆವರಿಸಿದೆ.
ಮುಂಬಯಿಯಂತೆ ಮಂಗಳೂರಿನ ಹಲವು ರೆಸ್ಟೊರೆಂಟ್ ಗಳು ಪ್ರೇಮಿಗಳಿಗಾಗಿ ವಿಶೇಷವಾಗಿ ಅಲಂಕರಿಸಲ್ಪಟ್ಟಿತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರೀತಿಸುವ ಜೀವಗಳಿಗಾಗಿ ಹಲವು ಆಫರ್ ಗಳನ್ನು ನೀಡಲಾಗಿದೆ. ಆದರೆ ಸುರಕ್ಷತೆಯ ದೃಷ್ಟಿಯಿಂದಾಗಿ ಎಲ್ಲೆಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂಬ ಸ್ಥಳದ ಬಗ್ಗೆ ಮಾಹಿತಿ ಬಹಿರಂಗ ಪಡಿಸಿಲ್ಲ ಎಂದು ಲಕ್ಷ್ಮಿ ಶೆಣೈ ಎಂಬುವರು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡದಂತೆ ಮಂಗಳೂರಿನಾದ್ಯಂತ ಅಲಿಖಿತ ನಿಯಮ ಜಾರಿಯಾಗಿದೆ. 
ಕೆಲ ಜೋಡಿಗಳು ನೈತಿಕ ಪೊಲೀಸ್ ಗಿರಿಗೆ ಹಾಗೂ ಮತ್ತೆ ಕೆಲವು ಜೋಡಿಗಳು ಪೊಲೀಸರಿಗೆ ಭಯಗೊಂಡಿದ್ದಾರೆ.
ಇತ್ತೀಚೆಗೆ ಪಿಳಿಕುಳದಲ್ಲಿ ಪೊಲೀಸರ ಮುಂದೆಯೇ ಯುವತಿಗೆ ಥಳಸಿರುವ ಘಟನೆ ನಡೆದಿದ್ದು, ಹಲವರು ಭಯಬೀತಗೊಂಡಿದ್ದಾರೆ.  ಆದರೂ ನಾಲ್ಕು ವರ್ಷಗಳ ನಂತರ ನಗರದಲ್ಲಿ ವ್ಯಾಲೆಂಟೈನ್ ಡೇ ಆಚರಿಸಲು ತಯಾರಾಗುತ್ತಿದೆ ಎಂದು ಹೂ ಮಾರಾಟಗಾರ ತಿಳಿಸಿದ್ದಾರೆ.
ಪ್ರೇಮಿಗಳ ದಿನದ ಆಚರಣೆಗಾಗಿ ಈ ಮೊದಲು 1500 ನಿಂದ 2000 ರು ವರೆಗೂ ಹೂಗುಚ್ಚಗಳ ಮಾರಾಟವಾಗುತ್ತಿತ್ತು. ಆದರೆ ಶೇ.25 ರಷ್ಟು ಹೂಗುಚ್ಚಗಳ ತಯಾರಿಕೆಯನ್ನು ಕಡಿಮೆ ಮಾಡಲಾಗಿದೆ. ಆನ್ ಲೈನ್ ವ್ಯಾಪಾರದಿಂದಾಗಿ ನಮ್ಮ ವ್ಯಾವಾಪ ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!