ಶ್ರವಣಬೆಳಗೊಳ: ಬಹು ನಿರೀಕ್ಷೆಯಿಂದ ಕಾಯುತ್ತಿರುವ ಶ್ರವಣ ಬೆಳಗೊಳದ ಮಹಾಮಸ್ತಕಾಭಿಷೇಕ ದಿನದಂದು ಗೊಮ್ಮಟೇಶ್ವರ ಮೂರ್ತಿ ಸಮೀಪಕ್ಕೆ ಡ್ರೋಣ್ ನಿಷೇಧಿಸಲಾಗಿದೆ.
ಗೊಮ್ಮಟೇಶ್ವರ ಏಕಶಿಲಾ ವಿಗ್ರಹ ಬಳಿ ಕ್ಯಾಮರಾ ಸ್ಯ್ಟಾಂಡ್ ಮತ್ತು ಢ್ರೋಣ್ ಸಮೀಪಿಸುವಂತಿಲ್ಲ ಎಂದು ಭಾರತೀಯ ಪ್ರಾಚ್ಯ ಸಂಶೋಧನಾ ಇಲಾಖೆ ನಿಷೇಧ ಹೇರಿದೆ.
ವಿಂದ್ಯಾಗಿರಿ ಬೆಟ್ಟದ ಮೇಲಿರುವ ಏಕ ಶಿಲಾ ವಿಗ್ರಹದ ಮಹ ಮಸ್ತಕಾಭಿಷೇಕ ನೋಡಲು ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಗಿದೆ.ಕ್ಯಾಮರಾ ಟ್ರೈಪಾಡ್ ಬಳಕೆ ಮಾಡುವುದರಿಂದ ಸ್ಮಾರಕಕ್ಕೆ ಹಾನಿಯುಂಟಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಜೊತೆಗೆ ಡ್ರೋಣ್ ಹಾರಾಟಕ್ಕೂ ಕೂಡ ಭಾರತೀಯ ಪ್ರಾಚ್ಯ ಸಂಶೋಧನಾ ಇಲಾಖೆ ಮತ್ತು ನಾಗರಿಕ ವಿಮಾನಯಾನ ಡಿಜಿ ನಿರಾಕರಿಸಿದ್ದಾರೆ.
ಮಹಾಮಸ್ತಕಾಭಿಷೇಕದ ವೇಳೆ ಟ್ರೈಪಾಡ್ ಬಳಸಿ ಶೂಟಿಂಗ್ ಮಾಡಲು ಬಯಸುವವರು ಅನುಮತಿ ಪಡೆಯಲು ಆನ್ ಲೈನ್ ನಲ್ಲಿ ಅರ್ಜಿಗಳು ದೊರೆಯಲಿವೆ ಎಂದು ಪ್ರಾಚ್ಯ ಸಂಶೋಧನಾ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಗ್ರಹದ ಸುರಕ್ಷತೆ ಗಮನದಲ್ಲಿರಿಸಿಕೊಂಡು ಟ್ರೈಪಾಡ್ ಬಳಸಲು ಮೊದಲೇ ಅನುಮತಿ ಪಡೆಯಬೇಕಾಗಿದೆ, ಇದಕ್ಕಾಗಿ 50 ಸಾವಿರ ರು. ಡೆಪಾಸಿಟ್ ಇಡಾಬೇಕಾಗಿದ್ದು, ಕಾರ್ಯಕ್ರಮ ಮುಗಿದ ಮೇಲೆ ವಾಪಸ್ ಮಾಡಲಾಗುವುದು. ಕೆಲ ವರ್ಷಗಳ ಹಿಂದೆ ಕೇಬಲ್ ಕಾರ್ ಕೂಡ ನಿಷೇಧ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics