ಮಂಗಳೂರು: ಮಂಗಳೂರಿನ ಕಾರ್ ಸ್ಟ್ರೀಟ್, ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳು ತಾವು ಮಧ್ಯಾಹ್ನದ ಬಿಸಿಯೂಟ ಮಾಡುವ ವೇಳೆ ಅತ್ಯಂತ ಉತ್ಸಾಹದಿಂದಿದ್ದರು. ಕಾರಣ ಅವರು ನಾಲ್ಕೈದು ತಿಂಗಳಿನಿಂದ ತಾವೇ ಬೆಳೆದಿದ್ದ ಅಕ್ಕಿಯಿಂದ ತಯಾರಾದ ಅನ್ನವನ್ನು ಊಟ ಮಾಡುತ್ತಿದ್ದರು.
ಕಾಲೇಜಿನ ಸುಮಾರು 200 ಎನ್ಎಸ್ಎಸ್ ಸ್ವಯಂಸೇವಕ ವಿದ್ಯಾರ್ಥಿಗಳು ಮಳೆ ನೀರನ್ನು ಅವಲಂಬಿಸಿ ಐದು ತಿಂಗಳ ಕಾಲ ನಗರ ಹೊರವಲಯದಲ್ಲಿರುವ ಕೊಣಾಜೆ ಗ್ರಾಮದ ಕೃಷಿ ಭುಮಿಯಲ್ಲಿ ಭತ್ತದ ಕೃಷಿ ನಡೆಸಿದ್ದರು. ಇದೀಗ ಈ ಜಮೀನಿನಲ್ಲಿ ಒಟ್ಟು 14 ಕ್ವಿಂಟಾಲ್ ಅಕ್ಕಿ ಬೆಳೆದಿದ್ದು ಇದನ್ನು ಬಿಸಿಯೂಟಕ್ಕೆ ಬಳಸಲಾಗುತ್ತಿದೆ.
ಕಳೆದ ಒಂದು ದಶಕಕ್ಕೂ ಹೆಚ್ಚಿನ ಕಾಲದಿಂಡ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ಕೃಷಿಭೂಮಿಯನ್ನು ಪಾಳು ಪಾಳು ಬಿಟ್ಟಿದ್ದ ಐವರು ರೈತರಿಂಡ ನಾಲ್ಕು ಎಕರೆ ಕೃಷಿ ಭೂಮಿಯನ್ನು ಕಾಲೇಜು ಆಡಳಿತ ಗುತ್ತಿಗೆಗೆ ಪಡೆದು ಅಲ್ಲಿ ಭತ್ತದ ಕೃಷಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ, ಭೂ-ಮಾಲೀಕರು ಮೂರು ವರ್ಷದ ಲೀಸ್ ಅವಧಿಯ ಪ್ರತಿ ವರ್ಷದ ಕೊನೆಯಲ್ಲಿ ಬೆಳೆಯ ಒಂದು ಪಾಲನ್ನು ಪಡೆಯಲಿದ್ದಾರೆ. ಕಳೆದ ಆಗಸ್ಟ್ 15ರಿಂದ ಭೂಮಿಯನ್ನು ಮಟ್ಟಕ್ಕೆ ತರುವ ಸಲುವಾಗಿ ವಿದ್ಯಾರ್ಥಿಗಳು ಕೊನಾಜೆಗೆ ಸುಮಾರು ಒಂದು ಡಜನ್ ಗೆ ಹೆಚ್ಚು ಬಾರಿ ಪ್ರಯಾಣಿಸಿದ್ದಾರೆ.
ಕಳೆಗಳಿಂದ ತುಂಬಿದ್ದ ಭೂಮಿಯನ್ನು ಹದಗೊಳಿಸಿ ಬೆಳೆ ತೆಗೆಯುವ ವಿದ್ಯಾರ್ಥಿಗಳ ಕಾರ್ಯಕ್ಕೆ ಕೆಲವು ಗ್ರಾಮಸ್ಥರು ಮತ್ತು ರೈತ ನಾಯಕ ಮನೋಹರ ಶೆಟ್ಟಿ ಸಾಥ್ ನೀಡಿದ್ದಾರೆ. ಈ ಯೋಜನೆಯನ್ನು ಕಾಲೇಜು ಮುಖ್ಯೋಪಾದ್ಯಾಯ ಪ್ರೊಫೆಸರ್ ರಾಜಶೇಖರ್ ಹೆಬ್ಬಾರ್, ಉಪನ್ಯಾಸಕರು-ಮತ್ತು ಎನ್ಎಸ್ಎಸ್ ಅಧಿಕಾರಿ ಪ್ರೊಫೆಸರ್ ಜೆಫ್ರಿ ರೊಡ್ರಿಗಸ್, ಡಾ. ನಾಗವೇನಿ ಮತ್ತು ಡಾ ನವೀನ್ ಕೊಣಾಜೆ ಜಂಟಿಯಾಗಿ ರುಪಿಸಿದ್ದರು.
ಈ ಉಪಕ್ರಮದಿಂಡ ವಿದ್ಯಾರ್ಥಿಗಳಲ್ಲಿ ಕೃಷಿ ಕುರಿಂತೆ ಆಸಕ್ತಿ ಬೆಳೆಯಲು ಕಾರಣವಾಗಿದೆ. ಇದರಲ್ಲಿ ಕೆಲ ವಿದ್ಯಾರ್ಥಿಗಳು ನಗರದಲ್ಲಿ ಬೆಳೆದಿದ್ದು ಕೃಷಿ ಚಟುವಟಿಕೆಗಳು ಅವರಿಗೆ ಹೊಸದಾಗಿದೆ. ಕೊಯ್ಲು ಮಾಡಿದ್ದ ಒಟ್ಟು ಅಕ್ಕಿಯಲ್ಲಿ ಒಂದು ಕ್ವಿಂತಾಲ್ ನ್ನು ನಮಗೆ ಭೂಮಿ ಗುತ್ತಿಗೆ ನೀಡಿದ್ದ ರೈತರಿಗೆ ಹಸ್ತಾಂತರಿಸಲಾಗುವುದು. ಉಳಿದ ಹದಿಮೂರು ಕ್ವಿಂಟಾಲ್ ನಷ್ಟು ಅಕ್ಕಿ ಮುಂದಿನ ಎರಡು ತಿಂಗಳ ಕಾಲ ಎಂದರೆ ಈ ವರ್ಷದ ಶೈಕ್ಷಣಿಕ ತರಗತಿಗಳು ಮುಗಿಯುವವರೆಗೆ ವಿದ್ಯಾರ್ಥಿಗಳ ಮದ್ಯಾಹ್ನದ ಊಟಕ್ಕೆ ಸಾಲುತ್ತದೆ. ದಾನಿಗಳು ಮತ್ತು ಕಾಲೇಜು ಉಪನ್ಯಾಸಕರು ಪಾತ್ರೆಗಳು ಮತ್ತು ಇತರ ಅಡುಗೆ ಸಾಮಾನುಗಳನ್ನು ತರಲು ಸಹಾಯ ಮಾಡಿದ್ದಾರೆ.
ಕೃಷಿ ಭೂಮಿಯನ್ನು ವಿಸ್ತರಿಸುವ ಕಾರಣದಿಂದಾಗಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಕ್ರಮೇಣ ಹೆಚ್ಚಿಸಲು ಯೋಜಿಸಲಾಗಿದೆ. 100 ಎಕರೆಗಳಷ್ಟು ನಿರ್ಲಕ್ಷಿತ ಕೃಷಿ ಭೂಮಿಯು ಕೊನಾಜೆ ಮತ್ತು ಬೆಲ್ಮಾ ಜಿಪಿ ಮಿತಿಗಳಲ್ಲಿ ಲಭ್ಯವಿದೆ, ರೈತರು ಅದನ್ನು ಗುತ್ತಿಗೆ ನೀಡಲು ಉತ್ಸುಕರಾಗಿದ್ದಾರೆ ಎಂದು ಡಾ. ಕೊಣಾಜೆ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos