ತ್ಯಾಗಮೂರ್ತಿ ಬಾಹುಬಲಿಗೆ ಹೆಲಿಕಾಪ್ಟರ್'ನಿಂದಲೇ ಪುಷ್ಪವೃಷ್ಟಿ ಮಾಡುವರೇ ಪ್ರಧಾನಿ ಮೋದಿ? 
ರಾಜ್ಯ

ತ್ಯಾಗಮೂರ್ತಿ ಬಾಹುಬಲಿಗೆ ಹೆಲಿಕಾಪ್ಟರ್'ನಿಂದಲೇ ಪುಷ್ಪವೃಷ್ಟಿ ಮಾಡುವರೇ ಪ್ರಧಾನಿ ಮೋದಿ?

ಶ್ರವಣಬೆಳಗೊಳಕ್ಕೆ ಭೇಟಿ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಹೆಲಿಕಾಪ್ಟರ್'ನಿಂದಲೇ ತ್ಯಾಗಮೂರ್ತಿ ಬಾಹುಬಲಿಗೆ ಪುಷ್ಪವೃಷ್ಟಿ ನೆರವೇರಿಸುವುದು ಅನುಮಾನ ಎಂಬ ಮಾತುಗಳು ಕೇಳಿ ಬರತೊಡಗಿವೆ...

ಶ್ರವಣಬೆಳಗೊಳ: ಶ್ರವಣಬೆಳಗೊಳಕ್ಕೆ ಭೇಟಿ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಹೆಲಿಕಾಪ್ಟರ್'ನಿಂದಲೇ ತ್ಯಾಗಮೂರ್ತಿ ಬಾಹುಬಲಿಗೆ ಪುಷ್ಪವೃಷ್ಟಿ ನೆರವೇರಿಸುವುದು ಅನುಮಾನ ಎಂಬ ಮಾತುಗಳು ಕೇಳಿ ಬರತೊಡಗಿವೆ. 
ವಿಂಧ್ಯಗಿರಿ ಬೆಟ್ಟದ ಸುತ್ತಮುತ್ತಲಿನ 200 ಮೀ ವ್ಯಾಪ್ತಿಯಲ್ಲಿ ಹೆಲಿಕಾಪ್ಟರ್, ವಿಮಾನ ಅಷ್ಟೇ ಅಲ್ಲದೆ ಡ್ರೋಣ್ ರಾಹಾಟವನ್ನು ಕೂಡ ಕೇಂದ್ರ ಪ್ರಾಚ್ಯವಸ್ತು ಮತ್ತು ಸಂಶೋಧಾ ಇಲಾಖೆ ನಿಷೇಧ ಹೇರಿದ್ದು, ಹೀಗಾಗಿ ಮೋದಿಯವರು, ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ನೆರವೇರಿಸುವುದು ಅನುಮಾನ ಎಂದು ಹೇಳಲಾಗುತ್ತಿದೆ. 
ಪ್ರಧಾನಂಮತ್ರಿ ನರೇಂದ್ರ ಮೋದಿಯವರು ಶ್ರವಣಬೆಳಗೊಳಕ್ಕೆ ಫೆ.19 ಮಧ್ಯಾಹ್ನ 1.25ರ ಸುಮಾರಿಗೆ ಬರಲಿದ್ದು, 2.05ಕ್ಕೆ ಹಿಂತಿರುಗಲಿದ್ದಾರೆ. ಚಾಮುಂಡರಾಯ ವೇದಿಕೆಯಲ್ಲಿ ಮೋದಿಯವರು 15 ನಿಮಿಷಗಳಕಾಲ ಭಾಷಣ ಮಾಡಲಿದ್ದಾರೆ.  ಭದ್ರತೆ ಹಾಗೂ ಸಮಯಾವಕಾಶ ಇಲ್ಲದ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರು ಬೆಟ್ಟವನ್ನು ಹತ್ತುತ್ತಿಲ್ಲ. ಹೀಗಾಗಿ ಅವರು ಹೆಲಿಕಾಪ್ಟರ್ ಮೂಲಕವೇ ಬಾಹುಬಲಿಗೆ ಪುಷ್ಪವೃಷ್ಟಿ ನೆರವೇರಿಸಲಿದ್ದಾರೆಂದು ಹೇಳಲಾಗುತ್ತಿದೆ. 
ಬಾಹುಬಲಿ ಮಹಾಮಸ್ತಕಾಭಿಷೇಕ ಹಿನ್ನೆಲೆ ಸಾರ್ವಜನಿಕ ಆಸ್ಪತ್ರೆ, ವಿಂಧ್ಯಗಿರಿಗೆ ಮುನಿಗಳು, ಗಣ್ಯರು ತೆರಳಲು ನೂತನವಾಗಿ ನಿರ್ಮಿಸಲಾಗಿರುವ ಮೆಟ್ಟಿಲುಗಳನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ರಾಜ್ಯಪಾಲ ವಜುಭಾಯ್ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ,  ಕೇಂದ್ರ ಸಚಿವ ಮಹೇಶ್ ಶರ್ಮಾ ಮತ್ತು ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 
ಮೋದಿ ಆಗಮನ ಹಿನ್ನಲೆಯಲ್ಲಿ ಭದ್ರತೆಗಾಗಿ 4.000 ಪೊಲೀಸರನ್ನು ನಿಯೋಜಿಸಲಾಗಿದೆ. ಗರುಡ, ಬಾಂಬ್ ನಿಷ್ಕ್ರಿಯ ದಳ, ಅಶ್ವದಳ, ಶ್ವಾನದಳ ಹೀಗೆ ಅಗತ್ಯ ಭದ್ರತೆಗಳನ್ನು ಕಲ್ಪಿಸಲಾಗಿದೆ. ಅಲ್ಲದೆ, ಶ್ರವಣಬೆಳಗೊಳದ ಒಳಗೆ ಸಾರ್ವಜನಿಕ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಎಸ್.ಪಿ. ರಾಹುಲ್ ಕುಮಾರ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲರು!

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

Chhattisgarh: ಹೊಲದಿಂದ ಮನೆಗೆ ಮರಳುತ್ತಿದ್ದ ಮಹಿಳೆಗೆ ಸಿಡಿಲು ಬಡಿದು ಸಾವು, Video

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!