ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿನ ಬಾಡಿಗೆ ಬೈಕ್ ವ್ಯವಸ್ಥೆಯ ಚಿತ್ರ 
ರಾಜ್ಯ

ಬೆಂಗಳೂರಿನ 36 ಮೆಟ್ರೋ ನಿಲ್ದಾಣಗಳಲ್ಲಿ ಬಾಡಿಗೆಗೆ ಬೈಕ್ ಸೌಲಭ್ಯ

ಮೆಟ್ರೋ ಪ್ರಯಾಣಿಕರು ಇದೀಗ ಬೈಕ್ ನ್ನು ಬಾಡಿಗೆಗೆ ಪಡೆಯಬಹುದು. ಮೊದಲ ಹಂತದ 36 ನಿಲ್ದಾಣಗಳಲ್ಲಿ ಬೈಕ್ ಬಾಡಿಗೆ ವ್ಯವಸ್ಥೆಗೆ ಅವಕಾಶ ಮಾಡಲಾಗಿದ್ದು,

ಬೆಂಗಳೂರು: ಮೆಟ್ರೋ ಪ್ರಯಾಣಿಕರು ಇದೀಗ ಬೈಕ್ ನ್ನು ಬಾಡಿಗೆಗೆ ಪಡೆಯಬಹುದು. ಮೊದಲ ಹಂತದ 36 ನಿಲ್ದಾಣಗಳಲ್ಲಿ ಬೈಕ್  ಬಾಡಿಗೆ ವ್ಯವಸ್ಥೆಗೆ ಅವಕಾಶ ಮಾಡಲಾಗಿದೆ.

ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ನಿನ್ನೆಯಿಂದ ಈ ವ್ಯವಸ್ಥೆ ಜಾರಿಗೆ ಬಂದಿದೆ. 20ರಿಂದ 100 ಇಂತಹ ಬೈಕ್ ಗಳನ್ನು ಒದಗಿಸಲಾಗಿದೆ. ವಿದ್ಯುತ್ ಚಾಲಿತ ಬೈಕ್ ಮತ್ತು ಬೈಕ್ ಗಳು ಇದರಲ್ಲಿವೆ ಎಂದು ಬೈಕ್ ಕಂಪನಿ ತಿಳಿಸಿದೆ.

ಮೊಬೈಲ್ ಆಪ್ ಮೂಲಕ ಪ್ರಯಾಣಿಕರು ಬೈಕ್ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ನಂತರ ಕ್ಷೇತ್ರ ಸಂಪರ್ಕದ ಮೂಲಕ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಬೈಕ್ ಪಡೆಯಬಹುದಾಗಿದೆ . ನಂತರ ಪಾಸ್ ವರ್ಡ್ ಬಳಸಿ ಬೈಕ್ ಚಾಲನೆ ಮಾಡಬಹುದಾಗಿದೆ. ಕೊನೆಗೆ ಬೈಕ್ ಮೇಲಿನ ಬಟನ್ ಒತ್ತುವ ಮೂಲಕ ಬೈಕ್ ನ್ನು ನಿಲ್ಲಿಸಬಹುದಾಗಿದೆ.

1 ಕಿಲೋಮೀಟರ್ ಗೆ 5 ರೂ. ಒಂದು ನಿಮಿಷಕ್ಕೆ 50 ಪೈಸೆಯಂತೆ ಬೈಕ್ ದರ ನಿಗದಿಪಡಿಸಲಾಗಿದೆ. ಪ್ರಯಾಣಿಕರ ಖಾತೆಯಿಂದ ಹಣ ವರ್ಗಾವಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ,. ಇದರಿಂದಾಗಿ ದೂರದ ಪ್ರಯಾಣಿಕರಿಗೆ ಆಗುತ್ತಿದ್ದ ತೊಂದರೆ ತಪ್ಪಿಸಿದಂತಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ