ಮೈಸೂರು: ತಾನೊಬ್ಬ ಹುಡುಗಿಗೆ ಸಂದೇಶ ಕಳಿಸುತ್ತಿದ್ದೇನೆಂದು ನಂಬಿದ್ದ ಯುವಕನೊಬ್ಬ ಸತತ ಎಂಟು ತಿಂಗಳಿನಿಂದ ಒಂದೇ ಸಂಖ್ಯೆಗೆ ಕೆಟ್ಟ ಸಂದೇಶಗಳನ್ನು ಕಳಿಸುತ್ತಾ ಬಂದಿದ್ದು ಕಡೆಗೊಮ್ಮೆ ಆ ಮೊಬೈಲ್ ಸಂಖ್ಯೆಯ ಮಾಲೀಕರ ವಿಚಾರ ತಿಳಿದಾಗ ಮುಜುಗರಕ್ಕೀಡಾದ ಪ್ರಸಂಗ ಮೈಸೂರಿನಲ್ಲಿ ನಡೆದಿದೆ.
ಆರೋಪಿ ನವೀನ್ ಕುಮಾರ್ ಕಳೆದ ಎಂಟು ತಿಂಗಳಿನಿಂದ ಧರ್ಮೇಶ್ ಅವರಿಗೆ ಸೇರಿದ್ದ ಮೊಬೈಲ್ ಗೆ ಕೆಟ್ಟ ಸಂದೇಶಗಳನ್ನು ಕಳಿಸುತ್ತಿದ್ದ. ಧರ್ಮೇಶ್ ಅದಕ್ಕೆ ಉತ್ತರಿಸದೆ ಕಡೆಗಣಿಸುತ್ತಾ ಬಂದಂತೆ ನವೀನ್ ಮತ್ತಷ್ಟು ಕೆಟ್ಟದಾದ ಬೈಗುಳ, ನಿಂದನಾತ್ಮಕ ಸಂದೇಶಗಳನ್ನು ಅವರಿಗೆ ಕಳಿಸಲು ಪ್ರಾರಂಭಿಸಿದ್ದ.
ಸಾಲದ ವ್ಯವಹಾರ ನಡೆಸುತ್ತಿದ್ದನೆನ್ನಲಾದ ನವೀನ್ ಮಂಡಿ ಮೊಹಲ್ಲಾ ನಿವಾಸಿಯಾಗಿದ್ದ. ಇದೇ ವೇಳೆ ಸಂದೇಶವನ್ನು ಪಡೆಯುತ್ತಿದ್ದ ಧರ್ಮೇಶ್ ಬೆಂಗಳೂರಿನ ಮೈಸೂರು ರಸ್ತೆಯಲ್ಲಿದ್ದ ಕೆಆರ್ ಮಿಲ್ ನಿವಾಸಿಯಾಗಿದ್ದರು. ಅವರು ಬನ್ನಿ ಮಂಟಪದ ಬಳಿ ಕೆಲಸ ಮಾಡುತ್ತಿದ್ದರು.
ಹಿಂದೊಮ್ಮೆ ಧರ್ಮೇಶ್ ತನ್ನ ಮೊಬೈಲ್ ಅನ್ನು ಹುಡುಗಿಯೊಬ್ಬಳಿಗೆ ನಿಡಿದ್ದು ಆಕೆ ಅದೇ ನಂಬರ್ ನಿಂದ ನವೀನ್ ಗೆ ಕರೆ ಮಾಡಿದ್ದಳು. ಆಗ ಆ ಕರೆ ಸ್ವೀಕರಿಸಿದ್ದ ನವೀನ್ ಇದು ಅದೇ ಹುಡುಗಿಯ ಸಂಖ್ಯೆ ಎಂದು ಬಗೆದು ಪದೇ ಪದೇ ಕರೆ ಮಾಡುವುದು, ಸಂದೇಶ ಕಳಿಸುವುದು ನಡೆಸುತ್ತಿದ್ದ. ಅದೊಮ್ಮೆ ಧರ್ಮೇಶ್ ಗೆ ಕರೆ ಮಾಡಿದಾಗ ಅವರು ’ತಾನು ಹುಡುಗಿಯಲ್ಲ, ಆ ಹುಡುಗಿಗೆ ನನಗೆ ಯಾವ ಸಂಬಂಧವಿಲ್ಲ’ ಎಂದಿದ್ದರೂ ಸಹ ನವೀನ್ ಇದನ್ನು ನಂಬಲು ತಯಾರಿರಲಿಲ್ಲ. ಆಗ ನವೀನ್ ಮೊಬೈಲ್ ಸಂಖ್ಯೆಯನ್ನು ಹುಡುಗಿ ಬಳಸುತ್ತಿದ್ದಾಳೋ, ಹುಡುಗನೋ ಎಂದು ಪತ್ತೆ ಮಾಡಲು ಸಾರ್ವಜನಿಕ ದೂರವಾಣಿ ಬೂತ್ ಗಳಿಂದ ಕರೆ ಮಾಡುತ್ತಿದ್ದ.
ಹೀಗಿರಲು ನವೀನ್ ಇದಾಗಲೇ ತಾನು ನೂರಾರು ಸಂದೇಶಗಳನ್ನು ಕಳಿಸಿದ್ದು ಅದಾವುದಕ್ಕೂ ಆ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲದ್ದಕ್ಕೆ ಗಾಬರಿಯಾಗಿದ್ದ. ತಾನು ಕಳಿಸಿದ್ದ ಸಂದೇಶಗಳನ್ನು ಹಿಂಪಡೆಯಬೇಕೆಂದು ಆತ ಬಯಸಿದ. ಹಾಗೆಯೇ ಆ ಮೊಬೈಲ್ ಸಂಖ್ಯೆ ಬಳಸುತ್ತಿದ್ದ ಧರ್ಮೇಶ್ ನನ್ನು ಪತ್ತೆ ಮಾಡುವ ಯೋಜನೆ ರೂಪಿಸಿದ್ದ. ಅದರಂತೆ ಅವನ ಸ್ನೇಹಿತರೊಡನೆ ಸೇರಿ ಧರ್ಮೇಶ್ ನನ್ನು ಪತ್ತೆ ಮಾಡಿದ್ದ ನವೀನ್ ಫೆ.18ರಂದು ಯಾದವಗಿರಿಯಲ್ಲಿ ಅವರ ಮೇಲೆ ದಾಳಿ ನಡೆಸಿದ್ದಾನೆ. ಧರ್ಮೇಶ್ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ದಾಳಿ ನಡೆಸಿದ ನವೀನ್ ಮತ್ತು ಆತನ ಸಂಗಡಿಗರು ಅವರ ಹೆಲ್ಮೆಟ್ ಕಸಿದುಕೊಂಡಿದ್ದಾರೆ, ಧರ್ಮೇಶ್ ತಲೆ ಹಾಗೂ ಕೈಗಳಿಗೆ ಗಾಯಗಳನ್ನು ಮಾಡಿದ್ದಾರೆ. ಅಲ್ಲ್ದೆ ಧರ್ಮೇಶ್ ಅಲ್ಲಿಂದ ಮರಳುವುದಕ್ಕೆ ಮುನ್ನ ತಮ್ಮ ಬೇಡಿಕೆಗಳನ್ನು ಕೇಲದೆ ಹೋದಲ್ಲಿ ತಾನು ಅವರನ್ನು ಕೊಲೆ ಮಾಡುವುದಾಗಿ ನವೀನ್ ಬೆದರಿಸಿದ್ದ.
ಇದೀಗ ಧರ್ಮೇಶ್ ನವೀನ್ ಮತ್ತು ಅವನ ಸಹಚರರ ವಿರುದ್ಧ ದೂರು ಸಲ್ಲಿಸಿದ್ದು ಮೈಸೂರು ಪೋಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.