ಪತ್ನಿಯೊಂದಿಗೆ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ್ದ ಹ್ಯಾರಿಸ್ 
ರಾಜ್ಯ

ಮಲ್ಯ ಆಸ್ಪತ್ರೆಯಲ್ಲಿ ಸಂಧಾನಕ್ಕೆ ಯತ್ನ: ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಹ್ಯಾರಿಸ್ ದಂಪತಿ ಮನವಿ?

ಪುತ್ರ ನಲಪಾಡ್ ನಿಂದ ಹಲ್ಲೆಗೆ ಒಳಗಾದ ವಿದ್ವತ್ ಅವರನ್ನು ನೋಡಲು ಶಾಂತಿನಗರದ ಶಾಸಕ ಹ್ಯಾರಿಸ್ ದಂಪತಿ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ್ದರು....

ಬೆಂಗಳೂರು: ಪುತ್ರ ನಲಪಾಡ್ ನಿಂದ ಹಲ್ಲೆಗೆ ಒಳಗಾದ ವಿದ್ವತ್ ಅವರನ್ನು ನೋಡಲು ಶಾಂತಿನಗರದ ಶಾಸಕ ಹ್ಯಾರಿಸ್ ದಂಪತಿ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ವಿದ್ವತ್ ತಂದೆಯನ್ನು ಭೇಟಿ ಮಾಡಿದ ಹ್ಯಾರಿಸ್ ತಮ್ಮ ಮಗನ ವಿರುದ್ಧದ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಪತ್ನಿಯೊಂದಿಗೆ ಆಸ್ಪತ್ರೆಗೆ ಆಗಮಿಸಿದ ಹ್ಯಾರಿಸ್ ತಮ್ಮ ಮಗ ಮಾಡಿದ ತಪ್ಪಿನಿಂದ ಘಟನೆ ನಡೆದ ದಿನದಿಂದ ಪ್ರತಿನಿಂದ ನೋವು ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ. ವಿದ್ವತ್ ತಂದೆ ಲೋಕನಾಥನ್ ಅವರನ್ನು ಭೇಟಿ ಮಾಡಿದ ಹ್ಯಾರಿಸ್ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇನ್ನೂ ರಾಜಿ ಸಂಧಾನ ಯತ್ನ ಕುರಿತು ವಿವಿರಣೆ ಪಡೆಯಲು ಶಾಸಕ ಹ್ಯಾರಿಸ್ ಅವರಿಗೆ ಕರೆ ಮಾಡಲಾಯಿತು. ಆದರೆ ಅವರು ಯಾವುದೇ ಕರೆಗಳಿಗೆ ಪ್ರತಿಕ್ರಿಯೆ ನೀಡಿಲ್ಲ.
ಇನ್ನೂ ವಿದ್ವತ್ ತಂದೆ ಬಳಿ ಮಾತನಾಡಿರುವ ಹ್ಯಾರಿಸ್ ತಮ್ಮ ಮಗ ಮೊಹಮದ್ ನನ್ನ ಕರೆತಂದು ವಿದ್ವತ್ ಬಳಿ ಕ್ಷಮೆ ಕೋರಿಸುವುದಾಗಿ ತಿಳಿಸಿದ್ದಾರೆ, ಆದರೆ ಲೋಕನಾಥನ್ ಇದ್ಯಾವುದಕ್ಕೂ ಮನ್ನಣೆ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಆಯೋಗದ ವಿವಾದ: CEC Gyanesh Kumar ಭಾಗಿಯಾಗಬೇಕಿದ್ದ ಯುವಕರೊಂದಿಗಿನ ಕಾರ್ಯಕ್ರಮ ದಿಢೀರ್ ರದ್ದು!

'ಯಾರು ಚಿತ್ರೀಕರಿಸುತ್ತಿದ್ದರು?': ಜಮುಯಿ ದುರಂತಕ್ಕೆ ವಿಪಕ್ಷಗಳೇ ಕಾರಣ-ಬಿಜೆಪಿ ಸಚಿವ

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಬಿಹಾರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ? ಮಂದಾರ್ ಬೆಟ್ಟದಲ್ಲಿ ಯುವತಿಗೆ ಕಾಮುಕರಿಂದ ಕಿರುಕುಳ; ಒಂದೇ ವಾರದಲ್ಲಿ 3ನೇ ಪ್ರಕರಣ..!

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!