ಮಂಡ್ಯ: ಕೆಎಸ್ಆರ್‌ಟಿಸಿ ಬಸ್ ಹಾಗೂ ಒಮ್ನಿ ಕಾರು ಡಿಕ್ಕಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿ ನಡೆದಿದೆ.
ಮಳವಳ್ಳಿಯ ಚೆನ್ನಪಿಳ್ಳೆಕೊಪ್ಪಲು ಗೇಟ್ ಬಳಿ ಘಟನೆ ಅಪಘಾತ ಸಂಭವಿಸಿದ್ದು ಹಣೆತಗ್ಗಹಳ್ಳಿ ದಿಲೀಪ್ ಕುಮಾರ್(24), ಕಿರುಗಾವಲು ಗ್ರಾಮ ನಿತೀನ್ (21), ಹೂವಿನಕೊಪ್ಪಲು ಗ್ರಾಮ ಗಂಗಾಧರ್ (18) ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಕಿರುಗಾವಲು ಮಹದೇಶ್ವರ ಸಮುದಾಯ ಭವನದಲ್ಲಿ ಮದುವೆಗೆ ಪೋಟೊ ತೆಗೆಯಲು ಬಂದಿದ್ದು, ಮುಗಿಸಿಕೊಂಡು ಮಳವಳ್ಳಿ ಗೆ ಬರುವಾಗ ಈ ಅವಘಡ ಸಂಭವಿಸಿದೆ. ಕಿರುಗಾವಲು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.