ಜಮಖಂಡಿ :ಪ್ರಧಾನಿ ನರೇಂದ್ರಮೋದಿ ಅವರು ಬಸವಣ್ಣನವರ ಮಾತಿನಂತೆ ನುಡಿದಂತೆ ನಡೆಯುತ್ತಿಲ್ಲಾ ಹೀಗಾಗಿಯೇ ನೀರವ್ ಮೋದಿ ಅಂತಹವರು ದೇಶವನ್ನು ಬಿಟ್ಟು ಓಡಿಹೋಗಲು ಸುಲಭವಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿಂದು ನಡೆದ ಜನಾರ್ಶೀವಾದ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶವನ್ನು ನಡೆಸುವ ಸಂಸತ್ತು ದೆಹಲಿಯಲ್ಲಿರಬಹುದು. ಆದರೆ ಕರ್ನಾಟಕದಲ್ಲಿ ಶತಮಾನಗಳ ಹಿಂದೆ ಬಸವಣ್ಣನವರ ಅನುಭವ ಮಂಟಪವೇ ಸಂಸತ್ತು ಆಗಿತ್ತು ಎಂದರು.
ರೈತರ ಸಾಲ ಮನ್ನಾ ಮಾಡುವಂತೆ ಪ್ರಧಾನಿ ನರೇಂದ್ರಮೋದಿ ಬಳಿ ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ.ಆದರೆ, ಸಿದ್ದರಾಮಯ್ಯ ಸುಮಾರು 8000 ಕೋಟಿ ರೈತರ ಸಾಲದ ಹಣವನ್ನು ಮನ್ನಾ ಮಾಡಿದ್ದಾರೆ. ಉಚಿತ ಬಡ್ಡಿದರಲ್ಲಿ ರೈತರಿಗೆ 3 ಲಕ್ಷ ರೂವರೆಗೂ ಸಾಲ ನೀಡಲಾಗುತ್ತಿದೆ. ಇದರಿಂದಾಗಿ ಲಕ್ಷಾಂತರ ರೈತರಿಗೆ ಅನುಕೂಲವಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ,ಯಡಿಯೂರಪ್ಪ ಜೈಲಿಗೆ ಹೋಗಲಿಲ್ಲವೇ ಏನು ಬೀಗತನ ಮಾಡಲಿಕ್ಕೆ ಜೈಲಿಗೆ ಹೋಗಿದ್ರಾ? ಚೆಕ್ ನಲ್ಲಿ ಲಂಚ ಪಡೆದು ಜೈಲಿಗೆ ಹೋದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ನಮ್ಮವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಮೋದಿಯವರಿಗೆ ನಾಚಿಕೆ ಆಗಬೇಕು ಎಂದರು.