ಮೈಸೂರು ಯುವರಾಜನಿಗೆ ಆದ್ಯವೀರ ಒಡೆಯರ್ ಎಂದು ನಾಮಕರಣ
ಬೆಂಗಳೂರು; ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ದಂಪತಿಯ ಮಗುವಿಗೆ ಭಾನುವಾರ ನಾಮಕರಣವಾಗಿದ್ದು, ಮನೆತನದ ಉತ್ತರಾಧಿಕಾರಿಗೆ ಆದ್ಯವೀರ್ ನರಸಿಂಹರಾಜ ಒಡೆಯರ್ ಎಂದು ನಾಮಕರಣ ಮಾಡಲಾಗಿದೆ.
ಬೆಂಗಳೂರಿನ ಅರಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಯದುವೀರ ಮತ್ತು ಯುವರಾಣಿ ತ್ರಿಷಿಕಾ ಕುಮಾರಿ ದಂಪತಿಯ ಪುತ್ರನಿಗೆ ನಾಮಕರಣ ನೇರವೇರಿತು.
ಯದುವಂಶದ ಕುಡಿಗೆ ರಾಜಮಾತೆ ಪ್ರಮೋದಾದೇವಿ ಸಮ್ಮುಖದಲ್ಲಿ ಆದ್ಯವೀರ ನರಸಿಂಹ ರಾಜ ಒಡೆಯರ್ ಎಂದು ನಾಮಕರಣ ಮಾಡಲಾಯಿತು.
ನಾಮಕರಣ ಸಮಾರಂಭಕ್ಕೆ ಎರಡು ಕುಟುಂಬಗಳಿಗೆ ಸೇರಿದ ಕೆಲವರಿಗೆ ಮಾತ್ರ ಆಹ್ವಾನವನ್ನು ನೀಡಲಾಗಿತ್ತು. ಹೀಗಾಗಿ ಮುದ್ದು ಕಂದನ ನಾಮಕರಣ ಕಾರ್ಯಕ್ರದಲ್ಲಿ ರಾಜ ಕುಟುಂಬಸ್ಥರು, ಆಪ್ತರ ಮಾತ್ರ ಭಾಗಿಯಾಗಿ ಯುವರಾಜನಿಗೆ ಶುಭ ಹಾರೈಸಿದರು.