ರಾಜ್ಯ

ಬೆಂಗಳೂರು: ಅನಾಣ್ಯೀಕರಣ, ರೆರಾದಿಂದ ವಸತಿ ಮಾರುಕಟ್ಟೆಯಲ್ಲಿ ಶೇ.25ರಷ್ಟು ಇಳಿಕೆ

Sumana Upadhyaya

ಬೆಂಗಳೂರು: ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ(ರೆರಾ) ಮತ್ತು ನೋಟುಗಳ ಅನಾಣ್ಯೀಕರಣದಿಂದ ಬೆಂಗಳೂರು ನಗರದಲ್ಲಿ ಕಳೆದ ಎರಡು ಮೂರು ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಮತ್ತು ವಸತಿ ಮಾರುಕಟ್ಟೆ ಶೇಕಡಾ 25ರಷ್ಟು ಕುಸಿದಿದೆ ಎಂದು ಹೊಸ ವರದಿಯೊಂದು ತಿಳಿಸಿದೆ. ಬೆಂಗಳೂರು ಉತ್ತರ ದಿಕ್ಕಿನಲ್ಲಿ ವಸತಿ ಸಂಕೀರ್ಣಗಳು ಮತ್ತು ಸೈಟುಗಳ ಮಾರಾಟ ಈ ವರ್ಷ ಅಧಿಕವಾಗಿದೆ ಎಂದು ಹೇಳಿದೆ.

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ ಮತ್ತು ತೆರಿಗೆ ಮತ್ತು ಸಲಹೆ ಸಂಸ್ಥೆಯಾದ ಗ್ರಾಂಟ್ ತೊರ್ಟೊನ್ ಜಂಟಿಯಾಗಿ ರೆರಾ ವರದಿಯನ್ನು ಕಳೆದ 20ರಂದು ಪ್ರಕಟಿಸಿದೆ.
2011ರ ನಂತರ ಐಟಿ ಬಿಟಿ ಬೆಳವಣಿಗೆ ಹಿನ್ನೆಲೆಯಲ್ಲಿ ಬೆಂಗಳೂರಿನ ವಸತಿ ಮಾರುಕಟ್ಟೆ ಯಥೇಚ್ಛವಾಗಿ ಬೆಳೆಯಿತು. ಆದರೂ ರೆರಾ ಮತ್ತು ನೋಟುಗಳ ಅನಾಣ್ಯೀಕರಣದಿಂದ ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆ ಶೇಕಡಾ 25ರಷ್ಟು ಕುಸಿದಿದೆ. ಹೊಸ ಪ್ರಾಜೆಕ್ಟ್ ಗಳ ಯೋಜನೆ ಬೆಂಗಳೂರಿನಲ್ಲಿ ಶೇಕಡಾ 22ರಷ್ಟಿದ್ದರೆ ಮಾರಾಟವಾಗದಿರುವ ಪ್ರಾಜೆಕ್ಟ್ ಗಳ ಸಂಖ್ಯೆ ಶೇಕಡಾ 10ರಷ್ಟು ಹೆಚ್ಚಾಗಿದೆ.

2015ರಲ್ಲಿ ಬೆಂಗಳೂರಿನಲ್ಲಿ ಹೊಸದಾಗಿ ಆರಂಭಗೊಂಡ ವಸತಿ ಯೋಜನೆಗಳು 33,000ಕ್ಕೆ ಏರಿಕೆಯಾಗಿತ್ತು. ಅದು 2016ರಲ್ಲಿ 25,000 ಘಟಕಗಳಿಗೆ ಇಳಿಕೆಯಾದರೆ 2017ರಲ್ಲಿ 20,000ಕ್ಕೆ ಇಳಿಕೆಯಾಗಿದೆ. ಈ ವರ್ಷ ಏರಿಕೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನ ಹೊರ ವರ್ತುಲ ರಸ್ತೆಗಳನ್ನು ಹೊರತುಪಡಿಸಿ ಬೇರೆಲ್ಲಾ ಕಡೆ ರಿಯಲ್ ಎಸ್ಟೇಟ್ ಮಾರುಕಟ್ಟೆ ಶೇಕಡಾ 8ರಿಂದ 10ಕ್ಕೆ ಇಳಿಕೆಯಾಗಿದೆ.

SCROLL FOR NEXT