ಬಂಧಿತ ವ್ಯಕ್ತಿ ಮತ್ತು ರಿವಾಲ್ವರ್ 
ರಾಜ್ಯ

ಉತ್ತರಾಧಿ ಮಠಕ್ಕೆ ಅಮಿತ್ ಶಾ ಭೇಟಿ: ರಿವಾಲ್ವರ್ ಹಿಡಿದು ಸುತ್ತುತ್ತಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಬಂಧನ

ಮಳಖೇಡದಲ್ಲಿರುವ ಉತ್ತರಾಧಿ ಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿದ್ದರು. ಈ ವೇಳೆ ಮಠದ ಹೊರಗೆ ರಿವಾಲ್ವರ್ ಹಿಡಿದು ಸುತ್ತಾಡುತ್ತಿದ್ದ ನಿವೃತ್ತ ..

ಕಲಬುರಗಿ:  ಮಳಖೇಡದಲ್ಲಿರುವ ಉತ್ತರಾಧಿ ಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿದ್ದರು. ಈ ವೇಳೆ ಮಠದ ಹೊರಗೆ ರಿವಾಲ್ವರ್ ಹಿಡಿದು ಸುತ್ತಾಡುತ್ತಿದ್ದ ನಿವೃತ್ತ ಪೊಲೀಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಮಿತ್ ಶಾ ತಮ್ಮ ಪತ್ನಿ ಸೋನಲ್ ಶಾ ಅವರೊಂದಿಗೆ ಬೃಂದಾವನದ ಜಯತೀರ್ಥ ಸ್ವಾಮೀಜಿ ದರ್ಶನ ಪಡೆಯಲು ತೆರಳಿದ್ದರು. ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಮತ್ತಿತರರ ಬಿಜೆಪಿ ಮುಖಂಡರು ಅವರ ಜೊತೆ ತೆರಳಿದ್ದರು. ಈ ವೇಳೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ರಿವಾಲ್ವರ್ ಹಿಡಿದು ಮಠದ ಹೊರಗೆ ಸುತ್ತಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ,
ತೆಲಂಗಾಣದ ತುರಾಬುಲ್ ಹಕ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಕಲಬುರಗಿ ಎಸ್ ಪಿ ಶಶಿಕುಮಾರ್ ತಿಳಿಸಿದ್ದಾರೆ. ನಿವೃತ್ತನಾದ ನಂತರ ತನ್ನ ಸ್ವಗ್ರಾಮ ಮಳಖೇಡದಲ್ಲಿ ನೆಲೆಸಿರುವುದಾಗಿ ತಿಳಿಸಿದ ಆತ ವಿಚಾರಣೆ ವೇಳೆ ತನ್ನ ಬಳಿ ಇರುವ ಗನ್  ಪರವಾನಗಿ ತೋರಿಸಿದ್ದಾರೆ, ಜೊತೆಗೆ ತಾನು ಎಲ್ಲಿಯೇ ಹೋದರು ರಿವಾಲ್ವರ್ ಅನ್ನು ಜೊತೆಗೆ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!