ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಪತ್ರಕರ್ತೆ ಜತೆ ಅನುಚಿತವಾಗಿ ವರ್ತಿಸಿದ ಮೂವರು ಯುವಕರ ಬಂಧನ

ಪತ್ರಕರ್ತೆಯ ಜೊತೆ ಅನುಚಿತವಾಗಿ ವರ್ತಿಸಿದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ....

ಬೆಂಗಳೂರು: ಪತ್ರಕರ್ತೆಯ ಜೊತೆ ಅನುಚಿತವಾಗಿ ವರ್ತಿಸಿದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಯುವಕರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಪತ್ರಕರ್ತೆ ತನ್ನಿಬ್ಬರು ಗೆಳೆಯರೊಂದಿಗೆ ಆರ್ ಎಚ್ ಬಿ ರಸ್ತೆ ಬಳಿ ಬಿಬಿಎಂಪಿ ಪಾರ್ಕ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದರು. ಬಂಧಿತರನ್ನು ಡಿಪ್ಲೊಮಾ ವಿದ್ಯಾರ್ಥಿ ಬಿಜಿತ್, ಮಿತುನ್ ಮತ್ತು ಆಶಿತ್ ಅಲಿಯಾಸ್ ನಿಖಿಲ್ ಎಂದು ಗುರುತಿಸಲಾಗಿದೆ.

ಇಂದಿರಾನಗರ ನಿವಾಸಿಯಾಗಿರುವ ಪತ್ರಕರ್ತೆ ಮಧ್ಯರಾತ್ರಿ 1.20ರ ಸುಮಾರಿಗೆ ತನ್ನಿಬ್ಬರು ಪುರುಷ ಸ್ನೇಹಿತರೊಂದಿಗೆ ಪೂರ್ವಂಕರ ಪಾರ್ಕ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದರು. ಆಗ ಬೈಕಿನಲ್ಲಿ ಬಂದ ಇಬ್ಬರು ಯುವಕರು ಆಕೆಯ ಬಗ್ಗೆ ಅಶ್ಲೀಲವಾಗಿ ಮಾತನಾಡಲು ಆರಂಭಿಸಿದರು. ಆಗ ಆಕೆ ಅವರನ್ನು ಬೈಯಲು ಆರಂಭಿಸಿದಾಗ ಅವರು ಸಹ ಜೋರು ಜೋರಾಗಿ ಮಾತನಾಡಲು ಆರಂಭಿಸಿದರು. ಆಗ ಆಕೆಯ ಸ್ನೇಹಿತ ಈ ಬಗ್ಗೆ ವಿಚಾರಿಸಿದಾಗ ಯುವಕರು ಆತನಿಗೆ ಹೊಡೆದು ನಿಂದಿಸಲಾರಂಭಿಸಿದರು. ಪತ್ರಕರ್ತೆ ತಕ್ಷಣವೇ ಪೊಲೀಯ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು.

ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಪೊಲೀಸರು ಬಿಜಿತ್ ನನ್ನು ಬಂಧಿಸಿದರು. ಆಗ ಅವನು ಮತ್ತಿಬ್ಬರ ಹೆಸರು ಹೇಳಿದನು. ಅವರ ನಿವಾಸದ ಬಳಿ ಬಂಧಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದ AI ಸಾಮರ್ಥ್ಯವನ್ನು ಹೈಲೈಟ್ ಮಾಡಿದ ಗೂಗಲ್ ಸಿಇಒ ಸುಂದರ್ ಪಿಚ್ಚೈ: ಯುಎಸ್-ಭಾರತ ಸಹಯೋಗದ ಪ್ರಾಜೆಕ್ಟ್ ಘೋಷಣೆ! Video

T20 ವಿಶ್ವಕಪ್ 2026: ಶಿವಂ ದುಬೆ ಸ್ಫೋಟಕ ಅರ್ಧಶತಕ, ನೆದರ್ಲೆಂಡ್ ಗೆ ಗೆಲ್ಲಲು 194 ರನ್ ಗುರಿ ನೀಡಿದ ಭಾರತ

News wrap 18-02-2026| ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ; ಫೆ.19 ರಂದು ಸಾರಿಗೆ ನೌಕರರ ಮುಷ್ಕರ; KSRTC, BMTC ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ; ಬೆಂಗಳೂರಿನಲ್ಲಿ ಮತ್ತೆ ಕಸ ವಿಲೇವಾರಿ ಸಮಸ್ಯೆ; ಬಿಜೆಪಿ ವಿರುದ್ಧ DKS ಗರಂ

T20 World Cup 2026: ಸತತ 3ನೇ ಬಾರಿಗೆ ಡಕೌಟ್; ಕೋಚ್ ಗಂಭೀರ್ ದಾಖಲೆ ಸರಿಗಟ್ಟಿದ Abhishek Sharma!

ಕಸ ವಿಲೇವಾರಿಗೆ ಅಡ್ಡಿ: ನಿಮ್ಮ ಮನೆ ಮುಂದೆಯೇ ಕಸ ಹಾಕಿಸ್ತೀನಿ- ಬಿಜೆಪಿ ನಾಯಕರಿಗೆ ಡಿಕೆಶಿ ವಾರ್ನಿಂಗ್! Video

SCROLL FOR NEXT