ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬಿಬಿಎಂಪಿಯ 9,326.57 ಕೋಟಿ ರೂ ಮೊತ್ತದ ಬಜೆಟ್ ಮಂಡನೆ; ಹೊಸ ಮೂಲಭೂತ ಸೌಕರ್ಯಗಳಿಲ್ಲ

ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತದಾರರನ್ನು ಸೆಳೆಯಲು ಬೃಹತ್ ಬೆಂಗಳೂರು....

ಬಜೆಟ್ ಮಂಡನೆ ವೇಳೆ ಬಿಬಿಎಂಪಿ ಮೇಯರ್ ಸಂಪತ್ ರಾಜ್, ಉಪ ಮೇಯರ್ ಪದ್ಮಾವತಿ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತು ತೆರಿಗೆ ಸಮಿತಿ ಅಧ್ಯಕ್ಷ ಎಂ.ಮಹದೇವು
Sumana Upadhyaya
Updated On : 1 Mar 2018, 3:49 am

ಬೆಂಗಳೂರು: ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತದಾರರನ್ನು ಸೆಳೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2018-19ನೇ ಸಾಲಿನಲ್ಲಿ 9326.87 ಕೋಟಿ ರೂಪಾಯಿ ಯೋಜನೆಯ ಬಜೆಟ್ ನ್ನು ಮಂಡಿಸಿದೆ.

ಹಣಕಾಸಿನ ಅಶಿಸ್ತಿಗೆ ಹೆಸರಾಗಿರುವ ಬಿಬಿಎಂಪಿ ವಾಸ್ತವಕ್ಕಿಂತ ಹೆಚ್ಚು ಆದಾಯ ಸಂಗ್ರಹಣೆಯನ್ನು ಅಂದಾಜು ಮಾಡಿದೆ.

ಆದಾಯ ವೆಚ್ಚ 9,325.53 ಕೋಟಿ ರೂಪಾಯಿ ಎಂದು ಬಜೆಟ್ ನಲ್ಲಿ ಅಂದಾಜಿಸಲಾಗಿದೆ. ಬಿಬಿಎಂಪಿಯ ತೆರಿಗೆ ಮತ್ತು ಹಣಕಾಸು ಸಮಿತಿ ಅಧ್ಯಕ್ಷ ಹಾಗೂ ಜೆಡಿಎಸ್ ಪಕ್ಷದ ಎಂ. ಮಹದೇವ್ ಮಂಡಿಸಿದರು. ಬಜೆಟ್ ನಲ್ಲಿ 1.34 ಕೋಟಿ ರೂಪಾಯಿ ಉಳಿತಾಯ ತೋರಿಸಲಾಗಿದೆ. 2017-18ರಲ್ಲಿ ಇಟ್ಟ ಗುರಿಯಲ್ಲಿ ಅರ್ಧದಷ್ಟನ್ನು ಈಡೇರಿಸದಿದ್ದರೂ ಕೂಡ ಆದಾಯ ಸಂಗ್ರಹಣೆಯನ್ನು ಸಾಮರ್ಥ್ಯಕ್ಕಿಂತ ಅಧಿಕವಾಗಿ ತೋರಿಸಲಾಗಿದೆ. ಆದರೆ ಮೂಲಭೂತ ಸೌಕರ್ಯಗಳ ಸುಧಾರಣೆಗೆ ಯಾವುದೇ ಹೊಸ ಯೋಜನೆಗಳನ್ನು ಪ್ರಕಟಿಸಿಲ್ಲ.

ನಗರ ಪ್ರದೇಶದ ಬಡವರು, ಮಹಿಳೆಯರು ಮತ್ತು ಮಂಗಳಮುಖಿಯರನ್ನು ಕೇಂದ್ರವಾಗಿಟ್ಟುಕೊಂಡು ಬಜೆಟ್ ನಲ್ಲಿ ಬಹುಸಂಖ್ಯೆಯ ಮತದಾರರನ್ನು ಸೆಳೆಯಲು ಪ್ರಯತ್ನಿಸಲಾಗಿದೆ. ಅಶಕ್ತರಿಗೆ ಜೈಪುರ ಕಾಲು, ಮೂರು ಚಕ್ರದ ಬೈಕ್, ವಾಕಿಂಗ್ ಸ್ಟಿಕ್, ಕಿವಿಕೇಳಿಸುವ ಉಪಕರಣ, ಕನ್ನಡಕ ಇತ್ಯಾದಿಗಳನ್ನು ನೀಡುವುದಾಗಿ ಘೋಷಿಸಲಾಗಿದೆ. ಮಂಗಳಮುಖಿಯರಿಗೆ ಉಚಿತ ಬಸ್ ಪಾಸ್ ವಿತರಣೆಯನ್ನು ಮಾಡಲಾಗುತ್ತಿದೆ. ಬಡಜನತೆಗೆ ಶವಾಗಾರಕ್ಕೆ ಶವವನ್ನು ಕೊಂಡೊಯ್ಯಲು ವಿಳಂಬವಾಗುತ್ತಿದ್ದರೆ ಅಂತವರಿಗೆ ಸಹಾಯವಾಗಲು ನಗರದ ಪ್ರತಿ ವಲಯಗಳಲ್ಲಿ 5 ಶಿತಿಲಾಗಾರಗಳನ್ನು ಸ್ಥಾಪಿಸಲಾಗುವುದು ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments