ರಾಜ್ಯ

ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದ ದಿನವೇ ನಗರದಲ್ಲಿ ಆರು ಜನರ ಹತ್ಯೆ

Raghavendra Adiga
ಬೆಂಗಳೂರು: ಹೊಸ ವರ್ಷದ ಪ್ರಾರಂಭದ ದಿನ ಬೆಂಗಳೂರು ನಗರ ಬರೋಬ್ಬರಿ ಆರು ಕೊಲೆ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ಮೂರು ಪ್ರಕರಣಗಳು ಹೊಸ ವರ್ಷಾಚರಣೆ ಸಂಭ್ರಮ ನಡೆಯುತ್ತಿದ್ದ ಸ್ಥಳದಲ್ಲೇ ನಡೆದಿದೆ. ಇನ್ನು ಆರರಲ್ಲಿ ಒಂದು ಪ್ರಕರಣಕ್ಕೆ ಹಣದ ವ್ಯವಹಾರ ಕಾರಣವೆನ್ನಲಾಗಿದ್ದು ಉಳಿದ ಐದು ಹತ್ಯೆ ನಡೆಯುವ ಹಿಂದಿನ ಕಾರಣವನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ.
ಸೋಮವಾರ ಬೆಳ್ಳಂದೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಓರ್ವ ವ್ಯಕ್ತಿಯನ್ನು ಆತನ ಏಳು ಜನ ಸ್ನೇಹಿತರು ಸೇರಿ ಈ ಕೃತ್ಯ ಎಸಗಿದ್ದಾರೆ. ಮೃತನನ್ನು ಶಿವರಾಮ್ (25) ಎನ್ನಲಾಗಿದ್ದು ಅವರೊಬ್ಬ ವರ್ಣ ಚಿತ್ರಕಾರನಾಗಿದ್ದರು. ಸೋಮವಾರ ಮುಂಜಾನೆ ಕಸವರಹಳ್ಳಿ ಸ್ಲಂ ಕ್ವಾರ್ಟರ್ಸ್ ನಲ್ಲಿರುವ ಅವರ ನಿವಾಸದಲ್ಲಿ ಸ್ನೇಹಿತರೊಡನೆ ಮದ್ಯಪಾನ ನಡೆಸಿದ್ದರು.
ಈ ವೇಳೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ರಘು ಎನ್ನುವವ ಶಿವರಾಂ ಅವರಿಗೆ ಚಾಕುವಿನಿಂದ ಇರಿದಿದ್ದು ಆ ಬಳಿಕ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ. ಘಟನೆ ಸಂಬಂಧ ಪ್ರಮುಖ ಆರೋಪಿ ರಘು ಸೇರಿ ಆರು ಜನರನ್ನು ಪೋಲೀಸರು ಬಂಧಿಸಿದ್ದಾರೆ. 
ಕಾಟನ್ ಪೇಟೆಯಲ್ಲಿ ಅಂಜನಪ್ಪ ಗಾರ್ಡನ್ ನಿವಾಸಿಯಾದ ವಿನಿತ್ (22) ಹತ್ಯೆ ನಡೆದಿದೆ. ವಿನಿತ್ ಹೊಸ ವರ್ಷಾಚರಣೆಗಾಗಿ ತೆರಳುವಾಗ ಆತನನ್ನು ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಲಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮೃತ ವ್ಯಕ್ತಿ ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದನೆನ್ನಲಾಗಿದೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ.
ಜೆಪಿ ನಗರದ ಬಾಲಾಜಿ ವೈನ್ಸ್ ನ ಎದುರು ಜಗಳ ಬಿಡಿಸಿಅಲು ಹೋದ ಕ್ಯಾಬ್ ಚಾಲಕ ಹೇಮಂತ್ ಕುಮಾರ್ (25) ಕೊಲೆಯಾಗಿದ್ದಾರೆ.ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಘಟನೆ ಸಂಬಂಧ ಅಮೃತ್‌  ಎನ್ನುವವನನ್ನು ಪೋಲೀಸರು ಬಂಧಿಸಿದ್ದಾರೆ.
ಹೀಗೆ ನಗರದ ನಾನಾ ಕಡೆ ಒಟ್ತು ಆರು ಮಂದಿ ಜೀವ ತೆತ್ತಿದ್ದಾರೆ.
SCROLL FOR NEXT