ಬೆಂಗಳೂರು: ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿಯಲ್ಲಿ ಪ್ರಕರಣಗಳ ಸಂಖ್ಯೆಯನ್ನು ಹೆಚ್ಚಿಸಲು ಬೆಂಗಳೂರಿನಲ್ಲಿ ಸ್ಥಾಪನೆಯಾದ ಮಕ್ಕಳ ನ್ಯಾಯಾಲಯ ಪರದಾಡುತ್ತಿದೆ.
ಪೋಸ್ಕೋ ಕಾಯ್ದೆ ಅಡಿಯಲ್ಲಿ ದಾಖಲಾದ ಹೊಸ ಪ್ರಕರಣಗಳ ಸಂಖ್ಯೆ ಪ್ರತಿ ತಿಂಗಳು ನ್ಯಾಯಾಲಯವು ವಿಚಾರಣೆಗೊಳಪಡಿಸುವ ಸಾಮಾನ್ಯ ಪ್ರಕರಣಗಳ ಸಂಖ್ಯೆಗಿಂತ ಅರ್ಧದಷ್ಟೂ ಇಲ್ಲ. ಕಾನೂನು ಇಲಾಖೆಯಿಂದ ನೀಡಲ್ಪಟ್ಟ ಅಂಕಿಅಂಶಗಳ ಪ್ರಕಾರ, ಮಕ್ಕಳ ವಿರುದ್ಧದ ಅಪರಾಧಗಳು ನಗರದ ಒಂದಿಲ್ಲೊಂದು ಭಾಗದಲ್ಲಿ ಪ್ರತಿ ದಿನವೂ ದಾಖಲಾಗುತ್ತವೆ. ಆಗಸ್ಟ್ 2017 ರಿಂದ ನವೆಂಬರ್ 2017 ರವರೆಗೆ 109 ಪ್ರಕರಣಗಳು ದಾಖಲಾಗಿದೆ. ಆದಾಗ್ಯೂ, ಅದೇ ಅವಧಿಯಲ್ಲಿ ಪೋಸ್ಕೋ ಅಡಿಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ತೀರ್ಪು ಬಂದಿರುವ ಪ್ರಕರಣಗಳ ಸಂಖ್ಯೆ ಕೇವಲ 45 ಮಾತ್ರ.
2017 ಆಗಸ್ಟ್ ನಲ್ಲಿ ಮಕ್ಕಳ ನ್ಯಾಯಾಲಯದಲ್ಲಿ ಒಟ್ಟು 407 ಪ್ರಕರಣಗಳು ಬಾಕಿ ಉಳಿದಿದ್ದವು. ನವೆಂಬರ್ 30, 2017ರ ವೇಳೆಗೆ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವ ಪ್ರಕರಣಗಳ ಸಂಖ್ಯೆ 471,
"ಸಣ್ಣ ಮಕ್ಕಳ ವಿರುದ್ಧದ ಅಪರಾಧಗಳನ್ನು ಪರೀಕ್ಷಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಉದ್ದೇಶ - ತ್ವರಿತವಾಗಿ ವಿಚಾರಣೆ ನಡೆಯಬೇಕೆನ್ನುವುದಾಗಿದೆ, ಇದು ನಡೆಯದಿದ್ದಾರೆ ಅದರ ಉದ್ದೇಶವನ್ನು ಪೂರೈಸಿದಂತಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಪ್ರತಿ ತಿಂಗಳು ಮಕ್ಕಳ ವಿರುದ್ಧ ಅಪರಾಧಗಳು ಹೆಚ್ಚುತ್ತಲಿದ್ದು ಎಂದು ಬೆಂಗಳೂರಿನಂತಹ ನಗರಗಳಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳ ನ್ಯಾಯಾಲಯಗಳನ್ನು ಸ್ಥಾಪಿಸಲು ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳಬೇಕು " ಓರ್ವ ನ್ಯಾಯಾಂಗ ಅಧಿಕಾರಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics