ರಾಜ್ಯ

ಕರ್ನಾಟಕ ಸಂಗೀತ ಗಾಯಕಿ, ಎಂಎಸ್ ಸುಬ್ಬುಲಕ್ಷ್ಮಿ ಪುತ್ರಿ ರಾಧಾ ವಿಶ್ವನಾಥನ್ ನಿಧನ

Srinivas Rao BV
ಬೆಂಗಳೂರು: ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ, ಎಂಎಸ್ ಸುಬ್ಬುಲಕ್ಷ್ಮಿ ಪುತ್ರಿ ರಾಧಾ ವಿಶ್ವನಾಥನ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ 83 ವರ್ಷದ ರಾಧಾ ವಿಶ್ವನಾಥನ್ ಅವರನ್ನು ಫೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 
ರಾಧಾ ವಿಶ್ವನಾಥನ್ ಖ್ಯಾತ ಗಾಯಕಿ, ತಾಯಿ ಎಂಎಸ್ ಸುಬ್ಬುಲಕ್ಷ್ಮಿ ಅವರೊಂದಿಗೆ ದಶಕಗಳ ಕಾಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ರಾಧಾ ವಿಶ್ವನಾಥನ್ ಪುತ್ರರಾದ ವಿ ಚಂದ್ರಶೇಖರ್ ಶ್ರೀನಿವಾಸನ್, ಪುತ್ರಿ ಶುಭಾಲಕ್ಷ್ಮಿ ಹಾಗೂ ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ. 
ವೆಂಕಟೇಶ್ವರ ಸುಪ್ರಭಾತ, ವಿಷ್ಣುಸಹಸ್ರನಾಮ, ಭಜಗೋವಿಂದಂ ಗೀತೆಗಳ ಧ್ವನಿಯಲ್ಲಿ ರಾಧಾ ವಿಶ್ವನಾಥನ್ ಅವರು ಎಂದಿಗೂ ಜೀವಂತವಾಗಿರುತ್ತಾರೆ ಎಂದು ಪುತ್ರ ಶ್ರೀನಿವಾಸನ್ ಹೇಳಿದ್ದಾರೆ. 2004 ರಲ್ಲಿ ಎಂಎಸ್ ಸುಬ್ಬುಲಕ್ಷ್ಮಿ ಅವರು ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಈಗ 2018 ರಲ್ಲಿ ಪುತ್ರು ರಾಧಾ ವಿಶ್ವನಾಥನ್ ತಮ್ಮ 83 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 
SCROLL FOR NEXT