ಹೈಕೋರ್ಟ್ 
ರಾಜ್ಯ

ಹೈಕೋರ್ಟ್ ಆವರಣದಲ್ಲಿ ಫೋಟೋ ಶೂಟ್: ವಿನಯ್ ರಾಜ್ ಕುಮಾರ್ ಚಿತ್ರದ ವಿರುದ್ಧ ಅರ್ಜಿ

ಹೈಕೋರ್ಟ್ ಅವರಣದಲ್ಲಿ ಫೋಟೋ ಶೂಟ್ ಮಾಡಿದ ಕಾರಣಕ್ಕೆ ನಟ ವಿನಯ್ ರಾಜ್ ಕುಮಾರ್ ಅಭಿನಯದ ಅನಂತು ವರ್ಸಸ್ ನುಸ್ರತ್ ಸಿನಿಮಾ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ...

ಬೆಂಗಳೂರು: ಹೈಕೋರ್ಟ್ ಅವರಣದಲ್ಲಿ ಫೋಟೋ ಶೂಟ್ ಮಾಡಿದ ಕಾರಣಕ್ಕೆ ನಟ ವಿನಯ್ ರಾಜ್ ಕುಮಾರ್ ಅಭಿನಯದ ಅನಂತು ವರ್ಸಸ್ ನುಸ್ರತ್ ಸಿನಿಮಾ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. 
ವಕೀಲ ಎನ್.ಪಿ. ಅಮೃತೇಶ್ ಎಂಬುವವರು ಸಿನಿಮಾ ವಿರುದ್ಧ ಪೊಲೀಸರು ಎಪ್ಐಆರ್ ದಾಖಲಿಸಿಕೊಳ್ಳುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 
ಅನಂತು ವರ್ಸಸ್ ನುಸ್ರತ್ ಸಿನಿಮಾದಲ್ಲಿ ನಟ ವಿನಯ್ ರಾಜ್ ಕುಮಾರ್ ಅವರು ವಕೀಲನ ಪಾತ್ರ ಮಾಡಿದ್ದು, ಕೆಲ ತಿಂಗಳ ಹಿಂದಷ್ಟೇ ಚಿತ್ರದ ತಂಡ ಹೈಕೋರ್ಟ್ ಅವರಣದಲ್ಲಿ ಫೋಟೋ ಶೂಟ್ ನಡೆಸಿತ್ತು. 
ರಾಷ್ಟ್ರೀಯ ಸ್ಮಾರಕ ರಕ್ಷಣಾ ಕಾಯ್ದೆಯ ಪ್ರಕಾರ ಹೈಕೋರ್ಟ್ ಸೇರಿದಂದೆ ಕೆಲವು ಪ್ರಮುಖ ಸ್ಥಳಗಳು ನಿರ್ಬಂಧಿತ ಪ್ರದೇಶಗಳಾಗಿದ್ದು. ಇಂತಹ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಅವಕಾಶವಿರುವುದಿಲ್ಲ. ಆದರೆ, ಅನಂತು ವರ್ಸಸ್ ನುಸ್ರತ್ ಚಿತ್ರದ ತಂಡ ನ್ಯಾಯಾಲಯದ ಅವರಣದಲ್ಲಿ ಫೋಟೋ ಶೂಟ್ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಪ್ರಸ್ತುತ ಚಿತ್ರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಟೀಕೆಗಳು ವ್ಯಕ್ತವಾಗತೊಡಗಿವೆ. 
ಫೋಟೋ ಶೂಟ್ ಕುರಿತಂತೆ ವಕೀಲ ಅಮೃತೇಶ್ ಅವರು ಈ ಮೊದಲು ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ತನಿಖೆ ಆರಂಭಿಸಿಲ್ಲ. ಈ ಹಿನ್ನಲೆಯಲ್ಲಿ ಅಮೃತೇಶ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'CEC ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ'; SIR ಕುರಿತು ನಮ್ಮ ಕಳವಳ ಪರಿಹರಿಸಿಲ್ಲ: ಅಭಿಷೇಕ್ ಬ್ಯಾನರ್ಜಿ

ಕೋಗಿಲು ಅಕ್ರಮ ನಿವಾಸಿಗಳ ಪೌರತ್ವ ಪರಿಶೀಲಿಸಿ, ಎನ್‌ಐಎ ತನಿಖೆಗೆ ವಹಿಸಿ: ಆರ್‌. ಅಶೋಕ ಆಗ್ರಹ; Video

Operation Sindoor ಬಳಿಕ ಪಂಜಾಬ್ ಅಸ್ಥಿರಕ್ಕೆ ಪಾಕ್ proxy war, 'ಸಂಘಟಿತ ಅಪರಾಧ ಬೇರುಸಹಿತ ಕಿತ್ತೊಗೆಯುತ್ತೇವೆ'!

ಕೋವಿಡ್ ಹಗರಣ: ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದ ನ್ಯಾ. ಮೈಕೆಲ್ ಡಿ ಕುನ್ಹಾ

ಕೋಗಿಲು ಲೇಔಟ್ ತೆರವು: ಬಿಜೆಪಿ 'ಸತ್ಯ ಶೋಧನಾ ಸಮಿತಿ' ರಚನೆ; 'ಮಿನಿ ಬಾಂಗ್ಲಾದೇಶ' ಕುರಿತು ವರದಿ!

SCROLL FOR NEXT