ಡೆಕತ್ಲಾನ್ ಸ್ಟೋರ್ ಸಾಂದರ್ಭಿಕ ಚಿತ್ರ
ಬೆಂಗಳೂರು: ದೊಡ್ಡ ದೊಡ್ಡ ಮಾಲ್ ಗಳಿಗೆ ತೆರಳಿ ವಿಶೇಷ ಆಂಡರ್ ವೇರ್ ಬಳಸಿಕೊಂಡು ಕ್ರೀಡಾ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಯುವಕನನ್ನು ಬೆಂಗಳೂರಿನ ಕೊತ್ತನೂರು ಪೋಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಸೈಯದ್ ಬಲ್ಲಿ (30) ಎಂದು ಗುರುತಿಸಲಾಗಿದ್ದು ಆತನಿಂದ ಸುಮಾರು 45 ಸಾವಿರ ರೂ. ಮೌಲ್ಯದ ಕ್ರೀಡಾ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕಲ್ಯಾಣನಗರ ನಿವಾಸಿಯಾದ ಸೈಯದ್ ನಿರುದ್ಯೋಗಿ ಯುವಕನಾಗಿದ್ದು ಜ.2ರಂದು ಕೊತ್ತನೂರಿನ ಡೆಕತ್ಲಾನ್ ಸ್ಟೋರ್‌ಗೆ ತೆರಳಿದ್ಡಾನೆ. ಅಲ್ಲಿ ಬೈನಾಕುಲರ್, ಸಿ ಐ ಕ್ಯಾಮೆರಾ ಇದೇ ಮುಂತಾದ ದುಬಾರಿ ಬೆಲೆಯ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದನು. ಪ್ರಕರಣಕ್ಕೆ ಸಂಬಂಧಿಸಿ ಅಂಗಡಿ ಮಾಲೀಕರು ನೀಡಿದ ದೂರಿನ ಆಧಾರದಲ್ಲಿ ಆರೋಪಿಯ ಜಾಡು ಹಿಡಿದ ಪೋಲೀಸರು ಸೈಯದ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
"ಸ್ಟೋರ್ ಮ್ಯಾನೇಜರ್ ನೀಡಿದ ದೂರಿನಂತೆ ನಾವು ಕಾರ್ಯಾಚರಣೆ ನಡೆಸಿದ್ದೇವೆ. ಸ್ಟೋರ್ ಮ್ಯಾನೇಜರ್ ಸ್ಟಾಕ್ ಆಡಿಟ್ ಮಾಡಿದಾಗ ಕೆಲವು ವಸ್ತುಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯಗಳನ್ನು ಪರೀಕ್ಷಿಸಿದ ನಂತರ ಘಟನೆ ವಿವರ ತಿಳಿದಿದೆ. ಅವರು ತಕ್ಷಣ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ನಾವು ಕಾರ್ಯಪ್ರವೃತ್ತರಾಗುವ ವೇಳೆ ಕಾಕತಾಳೀಯವೆನ್ನುವಂತೆ ಆರೋಪಿಯು ಕದ್ದ ಕ್ಯಾಮರಾವನ್ನು ಮಾರಾಟ ಮಾಡಲು ಪ್ರಯತ್ನ ನಡೆಸಿದ್ದ. ನಾವು ಖಚಿತ ಮಾಹಿತಿ ಪಡೆದು ಅವನನ್ನು ಬಂಧಿಸುವಲ್ಲಿ ಯಶಸ್ವಿಯಾದೆವು" ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics