ಬೆಂಗಳೂರು: ಬೆಂಗಳೂರಿನ ಇಂದಿರಾನಗರಲ್ಲಿರುವ ‘ಟಿಪ್ಲರ್ ಆನ್ ದಿ ರೂಫ್’ ಬಾರ್ ಅಂಡ್ ರೆಸ್ಟೋರಂಟ್‌ನಲ್ಲಿ ರಾತ್ರಿ ವೇಳೆ ನಡೆಯುವ ಪಾರ್ಟಿಗಳಿಂದ ಶಬ್ದಮಾಲಿನ್ಯವಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಕುರಿತಂತೆ ತನಿಖೆಗೆ ಆದೇಶಿಸಿರುವ ಕರ್ನಾಟಕ ಹೈಕೋರ್ಟ್ ಬಿಬಿಎಂಪಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿಯಾಗಿ ಪರಿಶೀಲಿಸಬೇಕು ಎಂದು ಖೇಳಿದೆ.
ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿದ್ದು ಶಬ್ದಮಾಲಿನ್ಯ ಆಗುತ್ತಿದೆ ಎಂದು ಆರೋಪಿಸಿ ಬಾರ್ ಆಂಡ್ ರೆಸ್ಟೋರೆಂಟ್ ನ್ನು ಮುಚ್ಚಲಾಗಿದೆ ಎಂದು ‘ಪಿಂಕ್ ಪ್ಯಾಂಥರ್ ಹಾಸ್ಪಿಟಾಲಿಟಿ ಕಂಪನಿ’ಗೆ ಸೇರಿದ ‘ಟಿಪ್ಲರ್ ಆನ್ ದಿ ರೂಫ್’ ಬಾರ್ ಅಂಡ್ ರೆಸ್ಟೋರಂಟ್‌ನ ಅಮಿತ್ ಅಗರವಾಲ್ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರಾ ಪರ ವಕೀಲರು ವಾದಮಂಡನೆ ಮಾಡಿ ರೆಸ್ಟೋರೆಂಟ್ ಮೂರನೆ ಮಹಡಿಯಲ್ಲಿದೆ. ಾದರ ಕಾರ್ಯಚಟುವಟಿಕೆಯಲ್ಲಿ ಯಾವ ನಿಯಮಗಳೂ ಉಲ್ಲಂಘನೆಯಾಗಿಲ್ಲ. ವಿನಾಕಾರಣ ಬಿಬಿಎಂಪಿ ಅದನ್ನು ಮುಚ್ಚಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಕೋರ್ಟ್ ಬಾರ್ ಆಂಡ್ ರೆಸ್ಟೋರೆಂಟ್ ವ್ಯಾಪಾರಕ್ಕೆ ಅನುವು ಮಾಡಿಕೊಡಿ ಎಂದು ಬಿಬಿಎಂಪಿ ಗೆ ಆದೇಶ ನೀಡಿದೆ.
ಇನ್ನು ಮೂರು ವಾರಗಳಲ್ಲಿ ಸ್ಥಳ ಪರಿಶೀಲನೆ ವರದಿ ನೀಡುವಂತೆ ಹೇಳಿರುವ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜ. 17ಕ್ಕೆ ಮುಂದೂಡಿದೆ.