ಕುಮಾರ್ ಅಜಿತಾಬ್ 
ರಾಜ್ಯ

ನನ್ನ ಮಗನ ಅಪಹರಣ ಒಂದು ಪೂರ್ವನಿಯೋಜಿತ ಕೃತ್ಯ, ಅಜಿತಾಬ್ ತಂದೆಯಿಂದ ಹೈಕೋರ್ಟ್ ಗೆ ಅರ್ಜಿ

ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣ ಸಂಬಂಧ ಆತನ ತಂದೆ ಅಶೋಕ್ ಕುಮಾರ್ ಸಿನ್ಹಾ ನ್ಯಾಯಲಯದ ಮೊರೆ ಹೋಗಿದ್ದಾರೆ.

ಬೆಂಗಳೂರು: ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣ ಸಂಬಂಧ ಆತನ ತಂದೆ ಅಶೋಕ್ ಕುಮಾರ್ ಸಿನ್ಹಾ ನ್ಯಾಯಲಯದ ಮೊರೆ ಹೋಗಿದ್ದಾರೆ. ತನ್ನ ಮಗ ಕಾಣೆಯಾಗಿ ಹದಿನೈದು ದಿನಗಳು ಕಳೆದರೂ ರಾಜ್ಯ ಪೋಲಿಶರಿಂದ ಅವನನ್ನು ಪತ್ತೆ ಮಾಡಲಾಗಲಿಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಬೇಕೆಂದು ಕೋರಿ ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಸೂಚನೆ ಪಡೆಯುವಂತೆ ಸರ್ಕಾರಿ ವಕೀಲರಿಗೆ ನ್ಯಾಯಾಲಯವು ಆದೇಶಿಸಿದೆ.
ಟೆಕ್ಕಿ ನಾಪತ್ತೆ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರು ಗೃಹ ಸಚಿವಾಲಯ, ಸಿಬಿಐ ಮತ್ತು ಕರ್ನಾಟಕದ ಡಿಜಿ ಮತ್ತು ಐಜಿಪಿಗೆ ನೋಟಿಸ್ ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ಜನವರಿ 8 ಕ್ಕೆ ಮುಂದೂಡಿದರು.
2017ರ ಡಿಸೆಂಬರ್ 18 ರಿಂದ ಕಾಣೆಯಾಗಿರುವ ನನ್ನ ಮಗನನ್ನು ಪೋಲೀಸರು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ. ನನ್ನ ಮಗನನ್ನು ಅಪಹರಣಕಾರರು ಅಪಹರಿಸಿದ್ದಾರೆ. ಅದೊಂದು ವ್ಯವಸ್ಥಿತ ತಂತ್ರವಾಗಿದ್ದು ಅವನನ್ನು ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಇಲ್ಲವೆ ಆತನನ್ನು ಬಲವಂತಆಗಿ ಹತ್ಯೆ ಮಾಡಿ ಅವನ ದೇಹದ ಅಂಗಾಗಂಗಗಳನ್ನು ಅಕ್ರಮವಾಗಿ ಸಾಗಾಟ ನಡೆಸಿರುವ ಸಾದ್ಯತೆ ಇದೆ ಎಂದು ಸಿನ್ಹಾ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಕುಮಾರ್ ಅಜಿತಾಬ್ ಕಳೆದ ಹದಿನೈದು ದಿನಗಳಿಂದ ಕಾಣೆಯಾಗಿದ್ದರು. ಒಎಲ್ ಎಕ್ಸ್ ನಲ್ಲಿ ತನ್ನ ಕಾರ್ ಮಾರಾಟಕ್ಕೆ ಇಟ್ಟಿದ್ದು ಕಾರ್ ಖರೀದಿಸುವುದಾಅಗಿ ಹೇಳಿ ಕರೆ ಬಂದಿದ್ದಾಗ ಕಾರ್ ತೋರಿಸಲು ಹೋದ ಕುಮಾರ್ ಅವರು ಇದುವರೆಗೆ ಹಿಂತಿರುಗಿರಲಿಲ್ಲ. ಈ ಸಂಬಂಧ ಪೋಲೀಸರು ಟ್ವಿಟ್ಟರ್ ಅಭಿಯಾನವನ್ನು ಸಹ ಕೈಗೊಂಡಿದ್ದರಾದರೂ ಟೆಕ್ಕಿ ಸಂಬಂಧ ಯಾವ ಸುಳಿವೂ ಲಭ್ಯವಾಗಿರಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

SCROLL FOR NEXT