ಹುಬ್ಬಳ್ಳಿ: ಮಹದಾಯಿ ವಿವಾದ ಸಂಬಂಧ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಹೇಳಿಕೆಯು ರಾಜ್ಯ ಬಿಜೆಪಿಗೆ ವರವಾಗಿ ಪರಿಣಮಿಸಲಿದೆ.
ಈ ನಾಲ್ಕು ದಶಕಗಳ ವಿವಾದವನ್ನು ಮತ್ತೆ ಮತ್ತೆ ಮುನ್ನಲೆಗೆ ತಂದ ಗೋವಾ ಮುಖ್ಯಮಂತ್ರಿಗಳು ಕರ್ನಾಟಕ ಮಹದಾಯಿ ನದಿಯಿಂದ ನೀರು ಪಡೆದಿಲ್ಲ ಎಂದು ಯಾರಾದರೂ ಭಾವಿಸಿದರೆ, ಅವರು ಮೂರ್ಖನ ಸ್ವರ್ಗದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರಿಗೆ ಕಾನೂನಿನ ತಿಳುವಳಿಕೆ ಇಲ್ಲ ಎಂದು ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನ ಮಹದಾಯಿ ಸಂಬಂಧ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದ ಪರಿಕ್ಕರ್ ತೀವ್ರ ಟಿಕೆಗೆ ಒಳಗಾಗಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ರಾಜಕೀಯ ಲಾಭಕ್ಕಾಗಿ ಮಹದಾಯಿ ಹೋರಾಟವನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದ ರೈತರು ಕಳೆದ ತಿಂಗಳು ಬೆಂಗಳೂರಿನ ಬಿಜೆಪಿ ಕಛೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ರಾಜ್ಯ ಬಿಜೆಪಿ ನಾಯಕರು ನಾವು ನಮ್ಮ ಪಾಲಿನ ಕೆಲಸ ಮಾಡಿದ್ದೇವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರೆ ಸಚಿವರು ಗೋವಾದ ಕಾಂಗ್ರೆಸ್ ನಾಯಕರನ್ನು ಒಪ್ಪಿಸಿ ಕರ್ನಾಟಕಕ್ಕೆ ನೀರು ಹರಿಸುವಂತೆ ಕೇಳಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಗೋವಾ ರಾಜಕೀಯ ಪಕ್ಷಗಳು ಮತ್ತು ಸರ್ಕಾರೇತರ ಸಂಘಟನೆಗಳ ವಿರೋಧದ ಹೊರತಾಗಿಯೂ, ಯಾರೊಬ್ಬರ ಹಿತಾಸಕ್ತಿಗಳನ್ನು ಬಾಧಿಸದೆ ಮಾತುಕತೆಯ ಮೂಲಕ ನೀರನ್ನು ಹಂಚಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಲು ಪರಿಕ್ಕರ್ ಸರ್ಕಾರವು ಪ್ರಯತ್ನಿಸಿದೆ. ಈ ಬದಲಾದ ನಿಲುವು ಖಂಡಿತವಾಗಿಯೂ ಬಿಜೆಪಿಗೆ ಸಹಾಯ ಮಾಡುತ್ತದೆ ಎಂದು ವಿಶ್ಲೇಷಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics