ಬೆಂಗಳೂರು: ಹೊಸ ವರ್ಷದ ತೀರ್ಮಾನ ಎಂಬುದು ಸಾಮಾನ್ಯ. ಆದರೆ ಈ ನ್ಯಾಯಾಧೀಶರು ಬೆಂಗಳೂರು ಸಿವಿಲ್ ಕೋರ್ಟ್ ನಲ್ಲಿ ಕೆಲಸ ಮಾಡಿ ನೂರಾರು ನೌಕರರು ಮತ್ತು ನ್ಯಾಯಾಧೀಶರುಗಳಿಗೆ ಸಿಹಿ ಹಂಚಿ ಹೊಸ ವರ್ಷದಲ್ಲಿ ಪ್ರೇರಣೆಯಾಗಿದ್ದಾರೆ.
ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ರಿಜಿಸ್ಟ್ರಾರ್ ಆಗಿರುವ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ 2018ರ ಹೊಸ ವರ್ಷದಂದು ಕೆಲಸಕ್ಕೆ ಹಾಜರಾಗಿ 1,200 ನೌಕರರಿಗೆ ಸಿಹಿ ಹಂಚಿದ್ದಾರೆ. ಅದೂ 40,000 ರೂಪಾಯಿ ತಮ್ಮ ಸ್ವಂತ ದುಡ್ಡು ಖರ್ಚು ಮಾಡಿ. ಕಳೆದ 5 ವರ್ಷಗಳಿಂದ ಅವರು ಈ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿದ್ದು, ಆಡಳಿತಾಧಿಕಾರಿಗಳು ಮತ್ತು ನೌಕರರ ನಡುವಿನ ಬಾಂಧವ್ಯವನ್ನು ಹೆಚ್ಚಿಸಲು ಮತ್ತು ಕೆಲಸದಲ್ಲಿ ದಕ್ಷತೆಯನ್ನು ಹೆಚ್ಚಿಸಲು ಅವರು ಈ ಕ್ರಮವನ್ನು ಅನುಸರಿಸಿಕೊಂಡು ಬಂದಿದ್ದಾರೆ.
ಸಿಟಿ ಸಿವಿಲ್ ಕೋರ್ಟ್ ನಲ್ಲಿ ಹಲವು ಸುಧಾರಣೆಗಳಾದ ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ವ್ಯಾಜ್ಯ ಹೂಡಿಕೆದಾರರ ಸ್ನೇಹಿ ವಾತಾವರಣವನ್ನು ಮೂಡಿಸುವಲ್ಲಿ ರಿಜಿಸ್ಟ್ರಾರ್ ರಾಮಚಂದ್ರ ಕಾರಣಕರ್ತರಾಗಿದ್ದಾರೆ. ತಮಿಳು ನಾಡು, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಹಲವು ಕೋರ್ಟ್ ಗಳ ಅಧಿಕಾರಿಗಳು ಇತ್ತೀಚೆಗೆ ಬೆಂಗಳೂರು ಸಿವಿಲ್ ಕೋರ್ಟ್ ಗೆ ಭೇಟಿ ನೀಡಿ ಇಲ್ಲಿನ ಅನೇಕ ಆಡಳಿತ ವಿಧಾನಗಳನ್ನು ಅನುಸರಿಸುತ್ತಿವೆ.
ಕೋರ್ಟ್ ನಲ್ಲಿ ಕೆಲಸ ಮಾಡುವವರ ಸಂಖ್ಯೆ ಮತ್ತು ಅನುಮೋದನೆಗೊಂಡ ನೌಕರರ ಸಂಖ್ಯೆಯಲ್ಲಿ ಭಾರೀ ಅಂತರವಿದೆ. ವ್ಯಾಜ್ಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವಾಗ ನೌಕರರ ಮೇಲಿನ ಒತ್ತಡ ಜಾಸ್ತಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಂತಹ ಉತ್ತಮ ನಡೆಗಳು ನೌಕರರಲ್ಲಿ ಕೆಲಸ ಮಾಡಲು ಉತ್ತೇಜನ ನೀಡುತ್ತದೆ ಎನ್ನುತ್ತಾರೆ ಸಿವಿಲ್ ಕೋರ್ಟ್ ನಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಯೊಬ್ಬರು.
ರಿಜಿಸ್ಟ್ರಾರ್ ಅವರು ನಮ್ಮಿಂದ ಪ್ರಾಮಾಣಿಕತೆ, ಕಠಿಣ ಕೆಲಸ, ಶಿಸ್ತು, ಸಮಯ ಮತ್ತು ನಮ್ಮಿಂದ ದಾವೆದಾರರಿಗೆ ಸರಿಯಾದ ಮಾರ್ಗದರ್ಶನವನ್ನು ನಿರೀಕ್ಷಿಸುತ್ತಾರೆ ಎಂದು ಮತ್ತೊಬ್ಬರು ಅಧಿಕಾರಿ ಹೇಳುತ್ತಾರೆ. ಕಚೇರಿಯ ಸಿಬ್ಬಂದಿಯ ಕುಂದುಕೊರತೆಗಳನ್ನು ಆಲಿಸಲು ರಿಜಿಸ್ಟ್ರಾರ್ ರಾಮಕೃಷ್ಣ ಅವರು ಸಭೆಗಳನ್ನು ಕೂಡ ನಡೆಸುತ್ತಾರೆ. ಸಿಟಿ ಸಿವಿಲ್ ಕೋರ್ಟ್ ಆರಂಭವಾದಲ್ಲಿಂದ ಇಂತಹ ಕ್ರಮಗಳನ್ನು ಯಾವುದೇ ರಿಜಿಸ್ಟ್ರಾರ್ ಕೈಗೊಂಡಿರಲಿಲ್ಲ ಎನ್ನುತ್ತಾರೆ ಮತ್ತೊಬ್ಬ ನೌಕರರು.
ಆಡಳಿತಾತ್ಮಕ ಸುಧಾರಣೆ ಮಾತ್ರವಲ್ಲದೆ, ರಿಜಿಸ್ಟ್ರಾರ್ ಅವರು ಕೋರ್ಟ್ ನ ಸುತ್ತಮುತ್ತ ಆವರಣದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೂಡ ಸಹಾಯ ಮಾಡುತ್ತಾರೆ. ಪ್ರತಿವರ್ಷ ಕಾರ್ಮಿಕರ ಮಕ್ಕಳಿಗೆ ಬ್ಲಾಂಕೆಟ್ ಮತ್ತು ಯೂನಿಫಾರ್ಮ್ ಗಳನ್ನು ಹಂಚುತ್ತಾರೆ.
ರಾಮಕೃಷ್ಣ ಅಂಕಲ್ ನಮಗೆ ಸಹಾಯ ಮಾಡುತ್ತಾರೆ. ನಮ್ಮನ್ನು ಶಾಲೆ ಕಾಲೇಜಿಗೆ ಕಳುಹಿಸಿ ವಿದ್ಯಾವಂತರಾಗುವಂತೆ ನಮ್ಮ ತಂದೆ-ತಾಯಿಗಳನ್ನು ಪ್ರೋತ್ಸಾಹಿಸುತ್ತಾರೆ ಎನ್ನುತ್ತಾಳೆ ಬಸವನಗುಡಿಯ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿರುವ ಎಸ್.ಗಂಗಾ.
ಈ ಬಗ್ಗೆ ಪ್ರತಿಕ್ರಿಯೆಗೆ ರಾಮಕೃಷ್ಣ ಅವರು ಸಿಗಲಿಲ್ಲ.