ಕೊಚ್ಚಿ: ದೇಶದಲ್ಲಿ ಪ್ರಥಮ ಬಾರಿಗೆ ಕಾಫಿ ಬೆಳೆದಿದ್ದ ಕರ್ನಾಟಕದ ಬಾಬಾ ಬುಡನ್ ಗಿರಿ ಕಾಫಿಗೆ ಈಗ ಜಿಯೋಗ್ರಫಿಕಲ್ ಇಂಡಿಕೇಶನ್ (ಜಿಐ) ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಕಾಫಿ ಮಂಡಳಿ ಪ್ರಯತ್ನ ನಡೆಸಿದೆ.
ಜ.1ರಂದು ಬೆಂಗಳೂರಿನಲ್ಲಿರುವ ರಾಜ್ಯ ಕಾಫಿ ಮಂಡಳಿಯು ರಾಜ್ಯದ ಕಾಫಿ ಪ್ರಭೇದಗಳನ್ನು ಜಿಐ ಮಾನ್ಯತೆಗೆ ಪರಿಗಣಿಸಲು ಕೋರಿ ಚೆನ್ನೈನಲ್ಲಿರುವ ಜಿಯೊಗ್ರಫಿಕಲ್ ಇಂಡಿಕೇಶನ್ ರಿಜಿಸ್ಟ್ರಿ ಗೆ ಮನವಿ ಸಲ್ಲಿಸಿದೆ.
ಅರಬಿಕಾ, ಕೂರ್ಗ್ ಅರಬಿಕಾ, ವಯನಾಡ್ ರೊಬಸ್ಟಾ, ಬಾಬಾ ಬುಡನ್‌ಗಿರಿ, ಚಿಕ್ಕಮಗಳೂರು ಅರಬಿಕಾ, ಅರಕು ವ್ಯಾಲಿ ಅರಬಿಕಾ - ಈ ಎಲ್ಲಾ ಪ್ರಭೇದದ ಕಾಫಿ ಬೆಳೆಗೆ ಜಿಐ ಮಾನ್ಯತೆ ನೀಡುವಂತೆ ಕೋರಿ ಕಾಫಿ ಮಂಡಳಿ ಅರ್ಜಿ ಸಲ್ಲಿಸಿದೆ.
"ನಾವು ಕರ್ನಾಟಕದ ಕಾಫಿ ತಳಿಗಳಿಗೆ ಜಿಐ ಮಾನ್ಯತೆ ಪಡೆಯಲು ಅರ್ಜಿ ಸಲ್ಲಿಸಿದ್ದೇವೆ" ಎಂದು ಕಾಫಿ ಮಂಡಳಿ ಮುಖ್ಯಸ್ಥ (ಕಾಫಿ ಗುಣಮಟ್ಟ ವಿಭಾಗ) ಬಸವರಾಜ್ ಹೇಳಿದರು
ಕರ್ನಾಟಕದಲ್ಲಿ ಕೊಡಗು, ಚಿಕ್ಕಮಗಳೂರು, ಹಾಸನದಲ್ಲಿ ಹೆಚ್ಚು ಪ್ರಮಾಣಾದಲ್ಲಿ ಕಾಫಿ ಬೆಳೆಯಲಾಗುತ್ತದೆ. ಇದರಲ್ಲಿ ರಾಜ್ಯದ ಬಾಬಾಬುಡನ್ ಗಿರಿ ಸುತ್ತಮುತ್ತ ಬೆಳೆಯುವ ಕಾಫಿ ಬಾಬಾ ಬುಡನ್‌ಗಿರಿ ಪ್ರಭೇದವನ್ನು 15,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಇನ್ನು ಹೆಚ್ಚು ಕಾಫಿ ಬೆಳೆಯುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನದಲ್ಲಿದ್ದು ಜಾಗತಿಕ ಉತ್ಪಾದನೆಗೆ ಶೇ 4–5ರಷ್ಟು ಪಾಲು ನೀಡುತ್ತದೆ. ಭಾರತದ ಒಟ್ಟು ಉತ್ಪಾದನೆಯ ಶೇ 70–80ರಷ್ಟು ಕಾಫಿಯನ್ನು ಇಟಲಿ, ರಷ್ಯಾ ಮತ್ತು ಜರ್ಮನಿಗೆ ರಫ್ತು ಮಾಡಲಾಗುತ್ತಿದೆ