ಮೂಡಬಿದಿರೆ: ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮಾದ್ಯಮ ವರದಿ ತಿಳಿಸಿದೆ.
ಆಳ್ವಾಸ್ ಕ್ಯಾಂಪಸ್ ನ ನಂದಿನಿ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿ ತೇಜಸ್(16) ತನ್ನ ಜನ್ಮ ದಿನದಂದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟಿದ್ದು ಅದರಲ್ಲಿ ತನ್ನ ತಾಯಿಯನ್ನು ಕಳೆದುಕೊಂಡಿದ್ದ ನೋವನ್ನು ವಿವರಿಸಿದ್ದಾನೆ.
ಮೃತ ತೇಜಸ್ ಬೆಂಗಳೂರಿನ ಅಬ್ಬಿಗೆರೆ ಮೂಲದವನಾಗಿದ್ದು ಸೋಮವಾರ ಅವನ ಹುಟ್ಟುಹಬ್ಬವಿತ್ತು. ಅದೇ ಕಾರಣ ಅವನ ತಂದೆ ಮಗನನ್ನು ಭೇಟಿಯಾಗಿ ತೆರಳಿದ್ದರು. ತೇಜಸ್ ತಾಯಿ ಇದಾಗಲೇ ಮೃತಪಟ್ಟಿದ್ದರು.
ಇದಾಗಿ ನಿನ್ನೆ ರಾತ್ರಿ 7.30 ರ ಸುಮಾರಿಗೆ ತೇಜಸ್ ಹಾಸ್ಟೆಲ್‍ಗೆಮರಳಿದ್ದು ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಅನೆ.ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದು ನಾಲ್ಕನೇ ಪ್ರಕರಣ: ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಆತಘತ್ಯಾ ಪ್ರಕರಣ ಸರಣಿಗೆ ಇದು ಹೊಸ ಸೇಪ್ರಡೆಯಾಗಿದೆ. ಇದಕ್ಕೂ ಮುನ್ನ 2016ರಲ್ಲಿ ಇಬ್ಬರು ವಿದ್ಯಾರ್ಥಿನಿಯರು ನಿಗೂಢವಾಗಿ ಸಾವನ್ನಪ್ಪಿದ್ದರು. ಕಖೆದ ವರ್ಷ ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಕಾವ್ಯಾ ಪೂಜಾರಿ (15) ಸಾವಿನ ಪ್ರಕರಣ ನಡೆದಿದ್ದು ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. 2017ರ ಜುಲೈ 20ರಂದು ಕಾವ್ಯಾ ಕಾಲೇಜಿನ ಹಾಸ್ಟೆಲ್‍ನಲ್ಲಿ ಮೃತಪಟ್ಟಿದ್ದು ಕಾಲೇಜಿ ಸಿಬ್ಬಂದಿ ಇದನ್ನು ಆತ್ಮಹತ್ಯೆ ಎಂದರೆ ಅವಳ ಪೋಷಕರು ಇದು ಕೊಲೆ ಎಂದು ಆರೋಪಿಸಿದ್ದರು.