ಕಾಣೆಯಾಗಿರುವ ಟೆಕ್ಕಿ ಕುಮಾರ್ ಅಜಿತಾಬ್ 
ರಾಜ್ಯ

ಕಾಣೆಯಾಗಿರುವ ಟೆಕ್ಕಿ ಹುಡುಕಾಟದಲ್ಲಿ ಗಾಂಭೀರ್ಯತೆ ತೋರಿಸಿ: ನಗರ ಪೊಲೀಸ್ ಗೆ ಹೈಕೋರ್ಟ್ ತರಾಟೆ

ನಾಪತ್ತೆಯಾಗಿರುವ ಸಾಫ್ಟ್ ವೇರ್ ಎಂಜಿನಿಯರ್ ಕುಮಾರ್ ಅಜಿತ್ ಪ್ರಕರಣದ ....

ಬೆಂಗಳೂರು: ನಾಪತ್ತೆಯಾಗಿರುವ ಸಾಫ್ಟ್ ವೇರ್ ಎಂಜಿನಿಯರ್ ಕುಮಾರ್ ಅಜಿತ್ ಪ್ರಕರಣದ ತನಿಖೆಯಲ್ಲಿ ಯಾವುದೇ ತನಿಖೆ ಕಂಡುಬಂದಿಲ್ಲದಿರುವುದರಿಂದ ನಗರ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿರುವ ರಾಜ್ಯ ಹೈಕೋರ್ಟ್ ಟೆಕ್ಕಿ ಪತ್ತೆಹಚ್ಚುವಲ್ಲಿ ಗಾಂಭೀರ್ಯತೆ ತೋರಿಸಿ ಎಂದು ಹೇಳಿದೆ.
ತನಿಖೆಯಲ್ಲಿ ನಗರ ಪೊಲೀಸರು ಗಾಂಭೀರ್ಯತೆ ಮೆರೆದು ಆರೋಪಿಗಳನ್ನು ಹಿಡಿಯುವಲ್ಲಿ ಸಾಮರ್ಥ್ಯ ತೋರದಿದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ ಎಂದು ನ್ಯಾಯಮೂರ್ತಿ ಎ.ಎಸ್.ಬೊಪಣ್ಣ ಹೇಳಿದರು. 
ತನಿಖೆಯಲ್ಲಿ ಆಗಿರುವ ಪ್ರಗತಿ ಕುರಿತು ನಗರ ಪೊಲೀಸ್ ಇಲಾಖೆ ಸಲ್ಲಿಸಿರುವ ವರದಿಯನ್ನು ಮನಗಂಡ ನ್ಯಾಯಾಲಯ ನಗರ ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಛೀಮಾರಿ ಹಾಕಿ ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿತು. 
ಒಎಲ್ಎಕ್ಸ್ ಆನ್ ಲೈನ್ ನಲ್ಲಿ ತನ್ನ ಕಾರನ್ನು ಮಾರಾಟ ಮಾಡುವುದಾಗಿ ಜಾಹಿರಾತು ಕೊಟ್ಟಿದ್ದ ಅಜಿತಾಬ್ ಗೆ ಕಾರನ್ನು ಕೊಳ್ಳುವುದಾಗಿ ಒಬ್ಬರು ಫೋನ್ ಕರೆ ಮಾಡಿದ್ದರಿಂದ ಮನೆಯಿಂದ ಕಳೆದ ತಿಂಗಳು 18ರಂದು ಹೊರಹೋಗಿದ್ದ ಅಜಿತಾಬ್ ಕಾಣೆಯಾಗಿದ್ದಾರೆ.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಜಿ.ಶಿವಣ್ಣ ಅವರ ಮೂಲಕ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಟೆಕ್ಕಿ ಕಾಣೆಯಾದಲ್ಲಿಂದ ಇಲ್ಲಿಯತನಕದ ವಿವರಗಳನ್ನೊಳಗೊಂಡ ವರದಿಗಳನ್ನು ಸಲ್ಲಿಸಿದರು.
ಅಜಿತಾಬ್ ಅವರ ತಂದೆ ಅಶೋಕ್ ಕುಮಾರ್ ಸಿನ್ಹಾ ನಗರ ಪೊಲೀಸ್ ಇಲಾಖೆಯಿಂದ ಸಿಬಿಐಗೆ ಕೇಸಿನ ವಿಚಾರಣೆಯನ್ನು ವರ್ಗಾಯಿಸಬೇಕೆಂದು ಮನವಿಯನ್ನು ಸ್ವೀಕರಿಸಿ ವಿಚಾರಣೆ ನಡೆಸಿದ ನ್ಯಾಯಾಲಯ, ಅಜಿತಾಬ್ ಕಾಣೆಯಾಗಿ 2 ವಾರಗಳಾದರೂ ಇನ್ನೂ ಪತ್ತೆಹಚ್ಚುವಲ್ಲಿ ವಿಫಲರಾಗಿದ್ದೀರಿ ಎಂದು ನಗರ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿತು.
ಅಜಿತಾಬ್ ಕೊನೆಯ ಬಾರಿಗೆ ಕರೆ ಮಾಡಿದ್ದನ್ನು ಇಟ್ಟುಕೊಂಡು ಪತ್ತೆಗೆ ಪ್ರಯತ್ನಿಸಿರುವ ಬಗ್ಗೆ ಮಾಹಿತಿ ನೀಡಿದ ನ್ಯಾಯಾಧೀಶ ಶಿವಣ್ಣ, 60 ಅಧಿಕಾರಿಗಳನ್ನೊಳಗೊಂಡ 8 ತಂಡಗಳನ್ನು ರಚಿಸಲಾಗಿದ್ದು ತನಿಖೆಯಲ್ಲಿ ಗುರುತರ ಪ್ರಗತಿ ಕಂಡುಬಂದಿದೆ.
ತನಿಖೆಯನ್ನು ಪೂರ್ಣಗೊಳಿಸಲು ಎರಡು ವಾರಗಳ ಸಮಯ ಬೇಕಾಯಿತು ಎಂದರು.
ಆದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲವಲ್ಲ ಎಂದು ನ್ಯಾಯಾಧೀಶರು ಕೇಳಿದಾಗ, ತನಿಖೆಯಲ್ಲಿ ಕೆಲವು ಗಂಭೀರ ವಿಷಯಗಳ ಅಗತ್ಯವಿದೆ. ಎಲ್ಲಾ ಕೇಸುಗಳಲ್ಲಿ ತನಿಖೆ ಸಾಮಾನ್ಯವಾಗಿರುತ್ತದೆ. ಆದರೆ ಇಂತಹ ಕೇಸುಗಳಲ್ಲಿ ನೀವು ಗಾಂಭೀರ್ಯತೆ ತೋರಿಸದಿದ್ದರೆ ಆಗುವುದಿಲ್ಲ ಎಂದು ನ್ಯಾಯಾಲಯ ಹೇಳಿತು.
ಈ ಮಧ್ಯೆ ಅಜಿತಾಬ್ ತಂದೆಯ ಪರ ವಕೀಲರು ತನಿಖೆಯನ್ನು ಹೆಚ್ಚು ದಕ್ಷವಾಗಿ ನಡೆಸಲು ಸಿಬಿಐಗೆ ವಹಿಸುವಂತೆ ಕೇಳಿಕೊಂಡರು. ಒಂದು ಹಂತದವರೆಗೆ ಇವರ ಮನವಿಯನ್ನು ಪರಿಗಣಿಸಬಹುದಾದರೂ ಎಲ್ಲಾ ಕೇಸುಗಳನ್ನು ಸಿಬಿಐ ತನಿಖೆಗೆ ವಹಿಸಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿ ಮತ್ತೊಂದು ಉದಾಹರಣೆ ನೀಡಿತು.
ಇತಿಹಾಸತಜ್ಞನ ಕುಟುಂಬದವರು ಪ್ರಕರಣದ ವಿಚಾರಣೆಯಲ್ಲಿ ಕೆಳ ಹಂತದ ನ್ಯಾಯಾಲಯದಲ್ಲಿ ಯಾವುದೇ ಪ್ರಗತಿ ಕಂಡುಬರದಿದ್ದರಿಂದ ಸುಪ್ರೀಂ ಕೋರ್ಟ್ ಗೆ ಹೋದ ಉದಾಹರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿಗಳು ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT