ಮ್ಯಾಕ್ಸ್ ಮುಲ್ಲರ್ ಸ್ಕೂಲ್, ವಾರ್ಷಿಕೋತ್ಸವದ ವೇಳೆ ಸ್ಕ್ಯಾಫೋಲ್ಡ್ ಕುಸಿತದ ಚಿತ್ರ 
ರಾಜ್ಯ

ವಾರ್ಷಿಕೋತ್ಸವ ವೇಳೆ ಅವಘಡ: ವಾಟ್ಸ್ ಅಪ್ ವೀಡಿಯೋ ವಿರುದ್ಧ ಸೈಬರ್ ಪೋಲೀಸರಿಗೆ ಶಾಲೆ ದೂರು

ವೇದಿಕೆಯ ಮೇಲೆ ಕಾರ್ಯಕ್ರಮ ನಿಡುತ್ತಿದ್ದ ಶಾಲಾ ವಿದ್ಯಾರ್ಥಿಗಳ ಮೇಲೆ ಸ್ಕ್ಯಾಫೋಲ್ಡ್ ಕುಸಿದುಬಿದ್ದ ವೀಡಿಯೋ ಒಂದು ವಾಟ್ಸ್ ಅಪ್ ನಲ್ಲಿ ಕಳೆದ ಹದಿನೈದು ದಿನಗಳಿಂದ ವೈರಲ್ ಆಗಿದೆ.

ಬೆಂಗಳೂರು: ವೇದಿಕೆಯ ಮೇಲೆ ಕಾರ್ಯಕ್ರಮ ನಿಡುತ್ತಿದ್ದ ಶಾಲಾ ವಿದ್ಯಾರ್ಥಿಗಳ ಮೇಲೆ ಸ್ಕ್ಯಾಫೋಲ್ಡ್ ಕುಸಿದುಬಿದ್ದ ವೀಡಿಯೋ ಒಂದು ವಾಟ್ಸ್ ಅಪ್ ನಲ್ಲಿ ಕಳೆದ ಹದಿನೈದು ದಿನಗಳಿಂದ ವೈರಲ್ ಆಗಿದೆ. ಆ ಘಟನೆಯಲ್ಲಿ ಒಟ್ಟು ಒಂಭತ್ತು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಇದ್ದು ಇದೀಗ ಆ ಶಾಲಾ ವಿದ್ಯಾರ್ಥಿಗಳು ವೀಡಿಯೋ ಅಪ್ ಲೋಡ್ ಮಾಡಿದವರ ವಿರುದ್ಧ ಸೈಬರ್ ಪೋಲೀಸರಿಗೆ ದೂರು ನೀಡಿದ್ದಾರೆ.
ಈ ವೀಡಿಯೋ ಜತೆಗೆ ಹಾಕಿದ ಮಾಹಿತಿಯು ಶುದ್ದ ಸುಳ್ಳು. 2015ರಲ್ಲಿ ಈ ಘಟನೆ ನಡೆದಿದ್ದು ಸ್ಟೇಜ್ ಮೇಲೆ ಕಾರ್ಯಕ್ರಮ ನೀಡುತ್ತಿದ್ದವರಲ್ಲಿ ಯಾರೊಬ್ಬರೂ ಮೃತಪಟ್ಟಿಲ್ಲ. ಆದರೆ ಒಟ್ಟು ಆರು ವಿದ್ಯಾರ್ಥಿಗಳು ಮತ್ತು ನಾಲ್ವರು ಶಿಕ್ಷಕಿಯರಿಗೆ ಸಣ್ಣ ಪುಟ್ಟ ಗಾಯಗಳಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಶಾಲಾ ಆಡಳಿತ ಮಂಡಳಿ ತಪ್ಪು ಮಾಹಿತಿ ಇರುವ ವೀಡಿಯೋ ವೈರಲ್ ಆಗಲು ಕಾರಣರಾದವರ ಪತ್ತೆಗಾಗಿ ಪ್ರಯತ್ನ ಪ್ರಾರಂಭಿಸಿದೆ.
"ಈ ಘಟನೆ ನಡೆದು ಅದಾಗಳೆ ಎರಡುವರೆ ವರ್ಷಗಳು ಸಂದಿದೆ. ಈ ವೀಡಿಯೋ ಈಗೇಕೆ ವೈರಲ್ ಆಗಿದೆ ತಿಳಿದಿಲ್ಲ. ನಮಗೆ ಇದರಿಂದ ಅಚ್ಚರಿಯಾಗಿದೆ.ಹೀಗೆ ಮಾಡುವ ಮುಖೇನ ಕೆಲವರು ಶಾಲೆಯ ಹೆಸರಿಗೆ ಮಸಿ ಬಳಿಯಲು ಪ್ರಯತ್ನ ನಡೆಸಿದ್ದಾರೆ" ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಮ್ಯಾಕ್ಸ್ ಮುಲ್ಲರ್ ಪಬ್ಲಿಕ್ ಶಾಲೆಯ ಅಧ್ಯಕ್ಷೆ ಹೆಮಾಲತಾ ಹೇಳಿದ್ದಾರೆ.
"ಸಾಮಾಜಿಕ ಮಾಧ್ಯಮ ಬಳಸಿಕೊಂಡು ನಕಲಿ ಅಥವಾ ತಪ್ಪು ಸಂದೇಶಗಳನ್ನು ಪರಿಚರಿಸುವುದು  ಅಪರಾಧ.ಈ ವೀಡಿಯೋ ಜತೆಗಿದ್ದ ಮಾಹಿತಿಯಲ್ಲಿ ನಮ್ಮ ಶಾಲೆಯ ಒಂಭತ್ತು ವಿದ್ಯಾರ್ಥಿಗಳು ಮೃತರಾದರೆಂದು ಹೇಳಲಾಗಿದ್ದು ಇದು ಶುದ್ದ ಸುಳ್ಳು. ಈ ಕ್ವೀಡಿಯೋ ಅಪ್ ಲೋಡ್ ಮಾಡಿದವರು ಯಾರೆಂದು ತಿಳಿಯಲು ನಾವು ಬಯಸಿದ್ದೇವೆ.ಇದಕ್ಕಾಗಿ ನಾವು ಸೈಬರ್ ಅಪರಾಧ ಪೋಲೀಸರಿಗೆ ದೂರು ಸಲ್ಲಿಸಿದ್ದೇವೆ." ಹೇಮಲತಾ ಹೇಳಿದ್ದಾರೆ.
ಮ್ಯಾಕ್ಸ್ ಮುಲ್ಲರ್ ಪಬ್ಲಿಕ್ ಸ್ಕೂಲ್ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಉತ್ತಮ ಶಿಕ್ಷಣ ಸೇವೆಗೆ ಹೆಸರಾಗಿದೆ.  2015-16ರ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದ ಮಕ್ಕಳ ಮೇಲೆ ಕಬ್ಬಿಣದ ಸ್ಕ್ಯಾಫೋಲ್ಡ್ ಕುಸಿದಿದ್ದು ಘಟನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸಣ್ಣ ಪುತ್ಟ ಗಾಯಗಳಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT