ರಾಜ್ಯ

ಮುಂದಿನ ಅಕ್ಟೋಬರ್ ಒಳಗೆ 11 ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತ: ಎಚ್.ಕೆ.ಪಾಟೀಲ್

Sumana Upadhyaya
ಬೆಂಗಳೂರು: ರಾಜ್ಯದ 11 ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳಾಗಿ ಬರುವ ಅಕ್ಟೋಬರ್ 2ರೊಳಗಾಗಿ ಘೋಷಣೆಯಾಗಲಿವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು 16 ಜಿಲ್ಲೆಗಳ 97 ತಾಲೂಕಿನ, 3 ಸಾವಿರದ 454 ಗ್ರಾಮ ಪಂಚಾಯಿತಿಗಳ 17 ಸಾವಿರದ 536 ಹಳ್ಳಿಗಳು ಬಯಲು ಬಹಿರ್ದೆಸೆ ಮುಕ್ತವಾಗಿವೆ ಎಂದು ಹೇಳಿದರು.
ಇದೇ ತಿಂಗಳ ಅಂತ್ಯದೊಳಗಾಗಿ ಚಿಕ್ಕಬಳ್ಳಾಪುರ, ಮೈಸೂರು, ಕೊಪ್ಪಳ, ಚಾಮರಾಜನಗರ ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳಾಗಿ ಘೋಷಣೆಯಾಗಲಿವೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಶೇಕಡ 86ರಷ್ಟು ಅಂದರೆ 37 ಲಕ್ಷ 22 ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ ಅವರು, ಇನ್ನೂ 18 ಲಕ್ಷ ಶೌಚಾಲಯಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಎಚ್.ಕೆ. ಪಾಟೀಲ್ ಹೇಳಿದರು. 
SCROLL FOR NEXT