ಬೆಂಗಳೂರು: ಪತ್ನಿ ಸತ್ತಿದ್ದಾಳೆಂದು ಭಾವಿಸಿ ಪತಿ ಆತ್ಮಹತ್ಯೆ 
ರಾಜ್ಯ

ಬೆಂಗಳೂರು: ಪತ್ನಿ ಸತ್ತಿದ್ದಾಳೆಂದು ಭಾವಿಸಿ ಪತಿ ಆತ್ಮಹತ್ಯೆ

ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಹತ್ಯೆ ಮಾಡಲು ಪ್ರಯತ್ನಿಸಿದ ಆಟೋ ಚಾಲಕನೊಬ್ಬ ಆಕೆ ಸತ್ತಿದ್ದಾಳೆಂದು ಭಾವಿಸಿ ತಾನೂ ನೇಣಿಗೆ ಶರಣಾದ........

ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಹತ್ಯೆ ಮಾಡಲು ಪ್ರಯತ್ನಿಸಿದ ಆಟೋ ಚಾಲಕನೊಬ್ಬ ಆಕೆ ಸತ್ತಿದ್ದಾಳೆಂದು ಭಾವಿಸಿ ತಾನೂ ನೇಣಿಗೆ ಶರಣಾದ ಘಟನೆ ಬೆಂಗಳುರಿನ ರಾಮಮೂರ್ತಿನಗರದಲ್ಲಿ ನಡೆದಿದೆ.
ಆಟೊ ಚಾಲಕ ಹೆನ್ರಿ ಫರ್ನಾಂಡಿಸ್ (37) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು ಪತಿಯಿಂದ ಹಲ್ಲೆಗೊಳಗಾದ ಪತ್ನಿ ಚಿತ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಹತ್ತು ವರ್ಷಗಳ ಹಿಂದೆ ಪ್ರೀತಿಸಿ ವಿಘವಾಗಿದ್ದ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ತನ್ನ ಪತ್ನಿಯ ಶೀಲದ ಬಗೆಗೆ ಶಂಕೆ ವ್ಯಕ್ತಪಡಿಸಿದ್ದ ಹೆನ್ರಿ ಫರ್ನಾಂಡಿಸ್ ಇದೇ ಕಾರಣಕ್ಕೆ ಆಕೆಯೊಡನೆ ಜಗಳವಾಡುತ್ತಿದ್ದ. ನಿತ್ಯದ ಈ ಜಗಳದಿಂದ ಬೇಸತ್ತ ಚಿತ್ರಾ ಕಳೆದ ಹತ್ತು ದಿನದ ಹಿಂದೆ ಮಕ್ಕಳನ್ನು ಕರೆದುಕೊಂಡು ತವರಿಗೆ ತೆರಳಿದ್ದಳು.
ಇದಾಗಿ ಶುಕ್ರವಾರದಂದು ಪತಿ ಹೆನ್ರಿ ಫರ್ನಾಂಡಿಸ್ ಪತ್ನಿಯ ಮನವೊಲಿಸಿ ಪುನಃ ಮನೆಗೆ ಕರೆತಂದಿದ್ದ. ಆದರೆ ಮಕ್ಕಳು ಶಾಲೆಗೆ ತೆರಳಿದ ಬಳಿಕ ದಂಪತಿಗಳ ನಡುವೆ ಪುನಃ ಜಗಳ ಪ್ರಾರಂಭವಾಗಿತ್ತು. ಆಗ ಪತಿ ಹೆನ್ರಿ ಚಿತ್ರಾಳ ಮೇಲೆ ಹಲ್ಲೆ ನಡೆಸಿದ್ದ. ಕತ್ತಿಯಿಂದ ತಲೆ, ಕೈಗಳಿಗೆ ಹೊಡೆದಿದ್ದ. ಆಗ ನೋವು ತಾಳಲಾರದೆ ಚಿತ್ರಾ ಪ್ರಜ್ಞೆ ಕಳೆದುಕೊಂಡು ಬಿದ್ದರು.
ಇದರಿಂದ ಗಾಬರಿಗೊಂಡ ಹೆನ್ರಿ ಪತ್ನಿಯು ಸತ್ತಿದ್ದಾಳೆ ಎಂದು ತಿಳಿದು ತಾನೂ ನೇಣಿಗೆ ಶರಣಾಗಿದ್ದಾನೆ ಎಂದು ಕೆಆರ್ ಪುರಂ ಪೋಲೀಸರು ಮಾಹಿತಿ ನೀಡಿದ್ದಾರೆ. ಚಿತ್ರಾಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಇದೀಗ ಆಕೆ ಅಪಾಅಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು. ಕೆಆರ್ ಪುರಂ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜು: ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್, ಫ್ಲೈಓವರ್'ಗಳು ಬಂದ್

ಮೇ ತಿಂಗಳ ಭಾರತ-ಪಾಕಿಸ್ತಾನ ಸಂಘರ್ಷ ವೇಳೆ ಮಧ್ಯಸ್ಥಿಕೆ ವಹಿಸಿದ್ದು ನಾವೇ: ಚೀನಾ

ಭಾರತೀಯ ರೈಲ್ವೆ ಇತಿಹಾಸದಲ್ಲಿ ಮಹತ್ತರ ಸಾಧನೆ: ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್ ; ವಿಡಿಯೋ ಹಂಚಿಕೊಂಡ ಅಶ್ವಿನಿ ವೈಷ್ಣವ್

New Year ಗೆ ಆನ್ ಲೈನ್ ಫುಡ್ ಆರ್ಡರ್ ಗೆ ಸಮಸ್ಯೆ: ಒಕ್ಕೂಟಗಳಿಂದ ಇಂದು ಮೆಗಾ ಪ್ರತಿಭಟನೆ, 1.5 ಲಕ್ಷ ಕಾರ್ಮಿಕರು ಭಾಗಿ

ಮಠಾಧೀಶರ ತೀವ್ರ ಆಕ್ಷೇಪ: ಮಥುರಾದಲ್ಲಿ ಆಯೋಜಿಸಿದ್ದ ಸನ್ನಿ ಲಿಯೋನ್ ಕಾರ್ಯಕ್ರಮ ರದ್ದು!

SCROLL FOR NEXT