ರಾಜ್ಯ

ಸಂಸ್ಥೆಯ ಕಾರ್ಯಗಳಲ್ಲಿ ಸರ್ಕಾರದ ಹಸ್ತಕ್ಷೇಪ: 'ಅಸಹಾಯಕ' ಲೋಕಾಯುಕ್ತದಿಂದ ಹೈಕೋರ್ಟ್ ಮೊರೆ

Raghavendra Adiga
ಬೆಂಗಳೂರು: ಇತಿಹಾಸದಲ್ಲಿ ಮೊದಲ ಬಾರಿಗೆ ಭ್ರಷ್ಟಾಚಾರ ವಿರೋಧಿ ಕಾವಲು ಸಂಸ್ಥೆ, ಕರ್ನಾಟಕ ಲೋಕಾಯುಕ್ತ, ತನ್ನ ಕೆಲಸದಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪವನ್ನು ಪ್ರಶ್ನಿಸಿ ಹೈ ಕೋರ್ಟ್ ಮೊರೆ ಹೋಗಿದೆ.
ಕಳೆದ ಕೆಲವು ವರ್ಷಗಳಿಂದ, ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವದಕ್ಕೆ ವ್ಯವಸ್ಥಿತವಾಗಿ ತಂತ್ರಗಳು ನಡೆಯುತ್ತಿದೆ, ಉದಾಹರಣೆಗೆ ಲೋಕಾಯುಕ್ತ ಪೋಈಸರನ್ನು ಭ್ರಷ್ಠಾಚಾರ ನಿಗ್ರಹ ದಳಕ್ಕೆ ಸೇರ್ಪಡಿಸುವುದು ನಡೆದಿದೆ. ಇದೀಗ ಲೋಕಾಯುಕ್ತ ರಿಜಿಸ್ಟಾರ್ ಗೆ ವಿರುದ್ಧವಾಗಿ ಸವಲತ್ತುಗಳ ವರ್ಗಾವಣೆ ಆಗುತ್ತಿದ್ದು ಲೀಕಾಯುಕ್ತ ಸಂಸ್ಥೆಯನ್ನು ಹಾಳು ಮಾಡಲು ನಿರ್ಧರಿಸಲಾಗಿದೆ ಎಂದು ಆರೋಪ ಕೇಳಿಬಂದಿದೆ.
ಈ ಸಂಬಂಧ ಲೋಕಾಯುಕ್ತ ಸಂಸ್ಥೆ ಹಾಗೂ ರಿಜಿಸ್ಟಾರ್ ಗಳಿಂದ ಎರಡು ರಿಟ್ ಅರ್ಜಿಗಳು ಸಲ್ಲಿಕೆಯಾಗಿದೆ. ಸವಲತ್ತು ವರ್ಗಾವಣೆಗೆ ಮುನ್ನ ಲೋಕಾಯುಕ್ತ ರಿಜಿಸ್ಟಾರ್ ನ ಉತ್ತರವನ್ನು ಕೋರಿದ ಅರ್ಜಿಯನ್ನು, ಶಾಸಕಾಂಗ ಸಚಿವಾಲಯದ ಅಧಿಸೂಚನೆಯನ್ನು ಇದು ಒಳಗೊಂಡಿದೆ. ಅಂದಹಾಗೆ ಪ್ರಕರಣದ ವಿಚಾರಣೆ ಈ ವಾರ ನಡೆಯುವ ಸಾಧ್ಯತೆಗಳಿದೆ.
ಲೋಕಾಯುಕ್ತ ಸಂಸ್ಥೆಗೆ ಏಕೀಕೃತ ಮೂಲದಿಂದ ಹಣವನ್ನು ನೀಡಲಾಗಿದೆ ಮತ್ತು ಅದರ ಖಾತೆಗಳನ್ನು ಪ್ರತಿ ವರ್ಷ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಡಿಟ್ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ.
ಸಂಸ್ಥೆಯ ಪವಿತ್ರತೆ, ಸಮಗ್ರತೆ ಮತ್ತು ಸ್ವಾಯತ್ತತೆಯ ಸ್ಥಿತಿಯು ಈಗ ಶೋಚನೀಯ ಸ್ಥಿತಿಯಲ್ಲಿದೆ. ಏಕೆಂದರೆ ಐಎಎಸ್ ಅಧಿಕಾರಿಗಳ ಲಾಬಿಯು ರಿಜಿಸ್ಟ್ರಾರ್ ವಿರುದ್ಧ ಸವಲತ್ತುಗಳ ವರ್ಗಾವಣೆಯಲ್ಲಿ ಉಲ್ಲಂಘನೆಯಾಗಿದೆ. ಅದರ ವಿರುದ್ಧ ಕೆಲವು ಪ್ರಕರಣಗಳು ಬಾಕಿ ಉಳಿದಿವೆ ಎಂದು ಲೋಕಾಯುಕ್ತದ ನ್ಯಾಯಾಧೀಶರೊಬ್ಬರು ಹೇಳಿದ್ದಾರೆ.
SCROLL FOR NEXT