ಮಹದಾಯಿ ನದಿ 
ರಾಜ್ಯ

ಕುಡಿಯುವ ಉದ್ದೇಶಕ್ಕೆ ನೀರು ಬೇಕು ಎಂದು ಕರ್ನಾಟಕ ಸುಳ್ಳು ಹೇಳುತ್ತಿದೆ: ಗೋವಾ ಸರ್ಕಾರ

ಕರ್ನಾಟಕ ಮತ್ತು ಗೋವಾ ನಡುವಿನ ಮಹದಾಯಿ ಬಿಕ್ಕಟ್ಟು ನ್ಯಾಯಾಧಿಕರಣದ ಹೊರಗೆ ಬಗೆಹರಿಯುವ ಸಾಧ್ಯತೆ ಕ್ಷೀಣಿಸಿದ್ದು, ಕರ್ನಾಟಕ ಮಹದಾಯಿ ನೀರು ಕೇಳುತ್ತಿರುವುದು ಕುಡಿಯುವ ಉದ್ದೇಶಕ್ಕಾಗಿ ಅಲ್ಲ....

ಪಣಜಿ: ಕರ್ನಾಟಕ ಮತ್ತು ಗೋವಾ ನಡುವಿನ ಮಹದಾಯಿ ಬಿಕ್ಕಟ್ಟು ನ್ಯಾಯಾಧಿಕರಣದ ಹೊರಗೆ ಬಗೆಹರಿಯುವ ಸಾಧ್ಯತೆ ಕ್ಷೀಣಿಸಿದ್ದು, ಕರ್ನಾಟಕ ಮಹದಾಯಿ ನೀರು ಕೇಳುತ್ತಿರುವುದು ಕುಡಿಯುವ ಉದ್ದೇಶಕ್ಕಾಗಿ ಅಲ್ಲ. ಬದಲಾಗಿ ಕಬ್ಬು ಬೆಳೆಗೆ ಕೇಳುತ್ತಿದೆ ಎಂದು ಗೋವಾ ಸರ್ಕಾರ ಮಹದಾಯಿ ನ್ಯಾಯಾಧಿಕರಣಕ್ಕೆ ತಿಳಿಸಿದೆ.
ಕಳೆದ ವಾರ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು, ಮಹದಾಯಿ ನದಿ ನೀರನ್ನು ಕುಡಿಯು ಉದ್ದೇಶಕ್ಕಾಗಿ ನೆರೆಯ ಕರ್ನಾಟಕದೊಂದಿಗೆ ಹಂಚಿಕೊಳ್ಳಲು ತಾವು ಸಿದ್ಧ ಮತ್ತು ಈ ಸಂಬಂಧ ಮಾತುಕತೆಗೂ ಸಿದ್ಧ ಎಂದಿದ್ದರು.
ಇದರ ಬೆನ್ನಲ್ಲೇ ಗೋವಾ ಪರ ವಕೀಲ ಆತ್ಮಾರಾಮ್‌ ನಾಡಕರ್ಣಿ ಅವರು ಸೋಮವಾರ ಮಹದಾಯಿ ನ್ಯಾಯಾಧಿಕರಣಕ್ಕೆ 531 ಪುಟಗಳ ನಿವೇದನೆಯನ್ನು ಸಲ್ಲಿಸಿದ್ದು, ಕರ್ನಾಟಕದ ಮಹದಾಯಿ ನೀರಿನ ಬೇಡಿಕೆಯು ಕಬ್ಬು ಬೆಳೆಯ ನೀರಾವರಿ ಉದ್ದೇಶಕ್ಕಾಗಿದೆಯೇ ವಿನಾ ಕುಡಿಯುವ ಉದ್ದೇಶಕ್ಕಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ ಮಹದಾಯಿ ನೀರನ್ನು ಕೇಳುತ್ತಿರುವುದು ಕುಡಿಯುವ ಉದ್ದೇಶಕ್ಕಾಗಿ ಅಲ್ಲ. ಬದಲು ಅತ್ಯಧಿಕ ನೀರನ್ನು ಬೇಡುವ ಕಬ್ಬಿನ ಬೆಳೆಗಾಗಿ. ಹೀಗಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಮಹದಾಯಿ ನದಿ ನೀರನ್ನು ತಿರುಗಿಸಲು ಬಿಡಬಾರದು ಎಂದು ನಾಡಕರ್ಣಿ ಅವರು ಮಹದಾಯಿ ನ್ಯಾಯಾಧಿಕರಣಕ್ಕೆ ಮನವಿ ಮಾಡಿದ್ದಾರೆ. 
ಮಲಪ್ರಭಾ ಜಲಾಶಯದ ನೀರು ಹುಬ್ಬಳ್ಳಿ - ಧಾರವಾಡ ಅವಳಿ ನಗರಗಳ ಕುಡಿಯುವ ನೀರಿಗೆ ಅಗತ್ಯವಾಗಿರುವುದೆಂಬ ಕರ್ನಾಟಕದ ಹೇಳಿಕೆ ಕೂಡ ಸಂಪೂರ್ಣ ಸುಳ್ಳು ಎಂದು ನಾಡಕರ್ಣಿ ತಮ್ಮ ನಿವೇದನೆಯಲ್ಲಿ ವಾದಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!

'Chhatron Ki Goonj' ಕಾರ್ಯಕ್ರಮದ ವೇಳೆ Rahul Gandhi ಮಾಡಿದ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್!

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ವಿರೋಧ: ಮೇಯರ್ ಮಮ್ದಾನಿ ವಿರುದ್ಧ ಅಮೆರಿಕದ ಖ್ಯಾತ ಗಾಯಕಿ ಕಿಡಿ!